ಚಬನೂರ ಹಿರೇಮಠದ ಕಾರ್ಯಕ್ರಮಕ್ಕೆ ಕಲಬುರ್ಗಿ ಮಾತೋಶ್ರೀಗಳ ಆಗಮನ
Kalaburgi Matoshree arrives for Chabanur Hiremath program
ತಾಳಿಕೋಟಿ 26: ತಾಲೂಕಿನ ಚಬನೂರ ಹಿರೇಮಠದ ಲಿಂಗೈಕ್ಯ ರಾಮಲಿಂಗೇಶ್ವರ ಮಹಾಸ್ವಾಮಿಗಳ ನೂತನ ಮಠ ಹಾಗೂ ಕಲ್ಯಾಣ ಮಂಟಪ ಲೋಕಾರೆ್ಣ ಕಾರ್ಯಕ್ರಮ ಅಂಗವಾಗಿ ಫೆಬ್ರವರಿ 5ರಂದು ನಡೆಯಲಿರುವ ಮಾತೃ ಮಡಿಲು ವಿಶೇಷ ಕಾರ್ಯಕ್ರಮಕ್ಕೆ ಕಲ್ಬುರ್ಗಿಯ ಶರಣ ಬಸವೇಶ್ವರ ಪೀಠದ ಮುಖ್ಯಸ್ಥ ಮಾತೋಶ್ರೀ ದ್ರಾಕ್ಷಾಯಿಣಿ ಅಮ್ಮನವರು ಚಿರಂಜೀವಿ ಶರಣಬಸಪ್ಪ ಅಪ್ಪನವರ ಜೊತೆಗೂಡಿ ಆಗಮಿಸಲಿದ್ದಾರೆ. ಡಿಸೆಂಬರ್ 25ರಂದು ಕೊಡೆಕಲ್ಲದ ಶಿವಕುಮಾರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಠಕ್ಕೆ ಆಮಂತ್ರಣ ನೀಡಲು ಹೋದ ಪರಮ ಪೂಜ್ಯರ ನಿಯೋಗಕ್ಕೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಕೊಡೆಕಲ್ದ ಪೂಜ್ಯರು ಕಲ್ಬುರ್ಗಿಯ ಪೀಠಕ್ಕೂ ಹಾಗೂ ಈ ಭಾಗದ ಭಕ್ತರಿಗೂ ಇರುವ ಅವಿನಾಭಾವ ಭಕ್ತಿಯ ಸಂಬಂಧವನ್ನು ತಿಳಿಸಿ ಕಾರ್ಯಕ್ರಮಕ್ಕೆ ಅವರು ಆಗಮಿಸುವುದರಿಂದ ಈ ಭಾಗದ ಭಕ್ತರಿಗೆ ಪುನೀತರಾಗುವ ಅವಕಾಶ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಅವರ ಈ ಆಮಂತ್ರಣಕ್ಕೆ ತಮ್ಮ ಒಪ್ಪಿಗೆ ನೀಡಿ ಮಾತೋಶ್ರೀ ಅವರು ಮಾತನಾಡಿ ಫೆಬ್ರವರಿ 5ರಂದು ನಡೆಯಲಿರುವ ಮಾತೃ ಮಡಿಲು ಕಾರ್ಯಕ್ರಮದಲ್ಲಿ ಸುಮಾರು 3000 ಮುತ್ತೈದೆಯರಿಗೆ ಉಡಿ ತುಂಬಲಾಗುತ್ತಿರುವುದು ಸಂತೋಷದ ವಿಷಯ ಇಂಥ ಪುಣ್ಯದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯ ನೀವು ನನಗೆ ನೀಡುತ್ತಿದ್ದೀರಿ ನಾನು ಖಂಡಿತವಾಗಿಯೂ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.
ಜ.28 ರಿಂದ ಚಬನೂರ ಗ್ರಾಮದಲ್ಲಿ ಆರಂಭವಾಗಲಿರುವ ಲೋಕಾರೆ್ಣಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಫೆಬ್ರವರಿ 7 ರವರೆಗೆ ನಡೆಯಲಿದ್ದು ಫೆ.8ಕ್ಕೆ ನೂತನ ಮಠ ಹಾಗೂ ಕಲ್ಯಾಣ ಮಂಟಪ ಲೋಕಾರೆ್ಣ ಗೊಳ್ಳಲಿದೆ. ಕೊಡೆಕಲ್ ಶಿವಕುಮಾರ ಮಹಾಸ್ವಾಮಿಗಳ ಈ ನಿಯೋಗದಲ್ಲಿ ನಾವದಗಿ ಬ್ರಹನ್ಮಠದ ಷಟಸ್ಥಳ ಬ್ರಹ್ಮಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಕಲ್ಕೇರಿಯ ಸಿದ್ದರಾಮ ಶಿವಾಚಾರ್ಯರು, ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು, ಕೋಲಾರದ ಪ್ರಭು ಕುಮಾರ ಮಹಾಸ್ವಾಮಿಗಳು, ದೇವರ ಹಿಪ್ಪರಗಿ ಪರದೇಶಿ ಮಠದ ಶಿವಯೋಗಿ ಮಹಾಸ್ವಾಮಿಗಳು, ಕೊಡೆಕಲ್ದ ಪ್ರಥಮ ದರ್ಜೆ ಗುತ್ತಿಗೆದಾರರಾದ ದಾವಲಸಾಬ ಕಮತಗಿ ಮತ್ತಿತರರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 