ಕಲಾ ವಿಕಾಸ ಪರಿಷತ್‌ರಜತ ಮಹೋತ್ಸವ ವರ್ಷಾಚರಣೆಯ ಕಾರ್ಯಕ್ರಮ
Kala Vikas Parishad Silver Jubilee Celebration Program
ಧಾರವಾಡ 20: ಉತ್ತರಕರ್ನಾಟಕದ ಕಲಾವಿದರ ಹಾಗೂ ಕಲಾಪೋಷಕರ ಸಂಘಟನೆಯಾದ ಗದುಗಿನ ಕಲಾ ವಿಕಾಸ ಪರಿಷತ್‌ಗೆ ಈಗ ರಜತ ಸಂಭ್ರಮ. ಈ ಸಂಭ್ರಮವನ್ನು ವರ್ಷಪೂರ್ತಿ ಆಚರಿಸಲಾಗುತ್ತಿದೆ. ದಿನಾಂಕ 2 ನವಂಬರ್ 2025 ರಂದು, ಕೊಲ್ಕತ್ತಾದ ಖ್ಯಾತ ತಬಲಾ ವಾದಕಿ ರಿಂಪಾ ಸಿವ ಇವರ ತಬಲಾ ಸೋಲೋ ಎರಿ್ಡಸುವ ಮೂಲಕ ವರ್ಷಾಚರಣೆಗೆ ಚಾಲನೆ ನೀಡಲಾಗಿದೆ.
ಈಗ ವರ್ಷಾಚರಣೆಯ ಎರಡನೇ ಕಾರ್ಯಕ್ರಮವಾಗಿ ‘ನಾಡದೇವಿಗೆ ನಮನ’ ಕಲಾ ವಿಕಾಸ ಪರಿಷತ್‌ನ 25 ನೆಯ ಕನ್ನಡರಾಜ್ಯೋತ್ಸವ ಸಮಾರಂಭವನ್ನು. ದಿನಾಂಕ 14 ಡಿಸೆಂಬರ್ 2025 ಬೆಳಗ್ಗೆ 10 ಗಂಟೆಗೆ ನಗರದ ಹಾತಲಗೇರಿ ರಸ್ತೆಯ ವಿವೇಕಾನಂದ ನಗರದ, ಕಾಶಿ ವಿಶ್ವನಾಥ ದೇವಸ್ಥಾನದ ಆವರಣದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ,
ಈ ಸಮಾರಂಭದಲ್ಲಿ ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪುಸ್ತಕ ಪ್ರಶಸ್ತಿ, ಕಲಾ ವಿಕಾಸ ಕನ್ನಡ ಸಿರಿ ಜೀವಮಾನ ಶ್ರೇಷ್ಠ ಸಾಧನ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪ್ರದಾನ, ಸಾಧಕರಿಗೆ ಸನ್ಮಾನ, ಕವಿ ಗೋಷ್ಠಿ, ಕಾವ್ಯಗಾಯನ ಮತ್ತು ನೃತ್ಯ ನಮನ ಕಾರ್ಯಕ್ರಮಗಳು ಆಯೋಜಿಸಲಾಗಿದೆ.
ಪ್ರಶಸ್ತಿ ಮತ್ತು ಸನ್ಮಾನಕ್ಕಾಗಿ ಹಾಗೂ ಸಾಧಕರು, ಕವಿಗೋಷ್ಠಿಗೆ ಕವಿಗಳು, ಕಾವ್ಯಗಾಯನ, ನೃತ್ಯ ನಮನ ಕಾರ್ಯಕ್ರಮ ನೀಡಲುಕಲಾವಿದರು, ತಮ್ಮ ವಿವರಗಳೊಂದಿಗೆ ಭಾವಚಿತ್ರ ಸಹಿತ, ಹೆಸರು ಮತ್ತು ಪೂರ್ಣ ಅಂಚೆ ವಿಳಾಸದೊಂದಿಗೆ,
ಡಾ. ಸುಮಾ ಬಸವರಾಜ ಧಾರವಾಡ ಇವರ ವ್ಯಾಟ್ಸಪ್ ನಂಬರ 9108740044 ಗೆ ಸಂಪರ್ಕಿಸಿ ಹೆಸರು ನೋದಾಯಿಸಿಕೊಳ್ಳಬಹುದು. ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 30 ನವಂಬರ್ 2025 ಆಗಿದೆ ಎಂದು, ಕಲಾ ವಿಕಾಸ ಪರಿಷತ್‌ರಜತ ಮಹೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ, ವಿ. ಕೆ. ಗುರುಮಠ ಇವರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 