ನಾಗರಾಜ್ ಹರಪನಹಳ್ಳಿ
ಕಾರವಾರ 03: ಕೈಗಾ ಅಣುಸ್ಥಾವರ ಘಟಕ-1 ಸತತವಾಗಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ವಿಶ್ವದಾಖಲೆಯತ್ತ ಹೆಜ್ಜೆ ಹಾಕಿದೆ ಎಂದು ಕೈಗಾ ಅಣುಸ್ಥಾವರದ ಘಟಕ 3-4ರ ಸ್ಥಾನಿಕ ನಿದರ್ೇಶಕ ಜೆ.ಆರ್.ದೇಶಪಾಂಡೆ ಹೇಳಿದರು. ಕೈಗಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೆನಡಾ ದೇಶದ ಅಣುವಿದ್ಯುತ್ ಸ್ಥಾವರ ಸತತವಾಗಿ 940 ದಿನ ಅಣು ವಿದ್ಯುತ್ ಉತ್ಪಾದಿಸಿದ ದಾಖಲೆ ಇದೆ.
ಈ ದಾಖಲೆಯನ್ನು ಕೈಗಾ ಅಣುಸ್ಥಾವರ ಘಟಕ -1 ಇದೇ ಡಿ.10 ರಂದು ಕೆನಡಾ ದೇಶದ ಅಣು ಘಟಕವನ್ನು ಹಿಂದಿಕ್ಕಿ ವಿಶ್ವ ದಾಖಲೆ ಮಾಡಲಿದೆ ಎಂದರು. ಈಗಾಗಲೇ ಭಾರಜಲ ಅಣುವಿದ್ಯುತ್ ಸ್ಥಾವರಗಳ ಪೈಕಿ 856 ದಿನ ಸತತವಾಗಿ ವಿದ್ಯುತ್ ಉತ್ಪಾದಿಸಿ ಕೈಗಾ ವಿಶ್ವದಾಖಲೆ ಮಾಡಿದೆ. ಉನ್ನತ ತಂತ್ರಜ್ಞಾನದ ಅಣು ಘಟಕ ಕೆನಡಾದಲ್ಲಿ 940 ದಿನ ಸತತವಾಗಿ ವಿದ್ಯುತ್ ಉತ್ಪಾದಿಸಿದ್ದು, ಇದನ್ನು ಮೀರಿಸುವತ್ತ ಕೈಗಾ ಘಟಕ-1ನೇ ರಿಯಾಕ್ಟರ್ ಕಾಯರ್ೋನ್ಮುಖವಾಗಿದೆ. ಇಂದಿಗೆ 934 ದಿನ ಸತತವಾಗಿ ವಿದ್ಯುತ್ ಉತ್ಪಾದನೆ ಕೈಗಾ ಘಟಕ-1ರಲ್ಲಿ ನಡೆದಿದೆ ಎಂದು ವಿಜ್ಞಾನಿ ಜೆ.ಆರ್. ದೇಶಪಾಂಡೆ ವಿವರಿಸಿದರು.
ಇದೇ ಡಿಸೆಂಬರ್ 10 ರಂದು ಕೈಗಾ ವಿಶ್ವದಾಖಲೆ ಬರೆಯಲಿದೆ. ಅಲ್ಲದೇ ಡಿ.31ರ ತನಕ ಅಣು ವಿದ್ಯುತ್ ಉತ್ಪಾದನೆಗೆ ಎಇಆರ್ಬಿ ಅನುಮತಿ ನೀಡಿದೆ ಎಂದರು. 13 ಮೇ 2016 ರಿಂದ ಕೈಗಾ ಘಟಕ-1 ಸತತವಾಗಿ ವಿದ್ಯುತ್ ಉತ್ಪಾದಿಸುತ್ತಿದೆ .220 ಮೆಗಾ ವ್ಯಾಟ್ ಸಾಮಥ್ರ್ಯದ ಘಟಕ-1 ರಿಂದ ಈತನಕ 26,680 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ ಎಂದರು.
ಘಟಕ -2 ಸಹ 632 ದಿನ ಸತತವಾಗಿ ವಿದ್ಯುತ್ ಉತ್ಪಾದಿಸಿದೆ. ಘಟಕ-3 ಸತತವಾಗಿ 542 ದಿನ ವಿದ್ಯುತ್ ಉತ್ಪಾದಿಸಿದೆ. ಘಟಕ -4 ರಿಂದ ಸತತವಾಗಿ 550 ದಿನ ವಿದ್ಯುತ್ ಉತ್ಪಾದಿಸಲಾಗಿದೆ. ಪರಿಸರ ಸ್ನೇಹಿ ಮತ್ತು ಸೇಫ್ಟಿ ಪ್ರಶಸ್ತಿಗಳನ್ನು ಕೇಂದ್ರ ದಿಂದ , ಕೈಗಾರಿಕಾ ಸಚಿವಾಲಯದಿಂದ ಕೈಗಾ ಪಡೆಯುತ್ತಲೇ ಇದೆ ಎಂದರು. ಘಟಕಗಳನ್ನು 2 ವರ್ಷಕ್ಕೆ ಒಮ್ಮೆ ಉತ್ಪಾದನೆ ಸ್ಥಗಿತ ಮಾಡಿ 40 ರಿಂದ 45 ನಿರ್ವಹಣೆ ಮಾಡಲಾಗುತ್ತದೆ. ಈಗ ಘಟಕ 3 ಮತ್ತು 4 ನಿರ್ವಹಣೆಯಲ್ಲಿವೆ. ಘಟಕ-1 ನ್ನು 2019ರಲ್ಲಿ ನಿರ್ವಹಣೆ ಮಾಡಲಾಗುವುದು ಎಂದರು.
24.36 ಕೋಟಿ ಸಾಮಾಜಿಕ ಜವಾಬ್ದಾರಿ ನಿರ್ವಹಣೆ:
ಕೈಗಾ ಅಣುಸ್ಥಾವರ ವಿದ್ಯುತ್ ಉತ್ಪಾದನೆ ಆರಂಭಿಸಿದ ವರ್ಷ 1999 ರಿಂದ ಈತನಕ ಸ್ಥಾವರ ಸುತ್ತಲಿನ 16 ಕಿ.ಮೀ.ವ್ಯಾಪ್ತಿಯ ಹಳ್ಳಿಗಳ ಜನರಿಗೆ ರಸ್ತೆ, ಸೇತುವೆ, ಸಮುದಾಯ ಭವನ, ಆರೋಗ್ಯ ಸೌಕರ್ಯ, ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಸಂಚಾರಿ ವಾಹನ, 54 ಶಿಕ್ಷಕರ ಹೊರ ಗುತ್ತಿಗೆ ಸೇವೆ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇವೆ. ಈತನಕ 24.36 ಕೋಟಿ ರೂ. ಸುತ್ತಲಿನ ಹಳ್ಳಿಗಳ ಜನರಿಗೆ ವಿನಿಯೋಗಿಸಲಾಗಿದೆ. ಸಂಚಾರಿ ಆರೋಗ್ಯ ಘಟಕದಿಂದ 700 ಜನ ಆರೋಗ್ಯದ ಸೌಲಭ್ಯ ಪಡೆಯುತ್ತಿದ್ದಾರೆ. 16 ಕಿ.ಮೀ.ವ್ಯಾಪ್ತಿಯಲ್ಲಿ 23 ಸಾವಿರ ಜನಸಂಖ್ಯೆ ಇದ್ದು, ವಿವಿಧ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಯುವಕರಿಗೆ ತಾಂತ್ರಿಕ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ ಎಂದು ವಿಜ್ಞಾನಿ, ಸ್ಥಾವರದ ನಿದರ್ೇಶಕ ಜೆ.ಆರ್.ದೇಶಪಾಂಡೆ ಹೇಳಿದರು.
ಪರಿಸರ ಸಂಬಂಧಿ ಅಧ್ಯಯನ ನಿರಂತರವಾಗಿ ನಡೆದಿದೆ.
ಅಣುಸ್ಥಾವರದ ಸುತ್ತ ಕೇವಲ 0.1 ಸೀವರ್ಟ ವಿಕಿರಣ ಇದೆ. ಕ್ಯಾನ್ಸರ್ ಕಾಯಿಲೆಗಳಿಗೂ ಕೈಗಾಕ್ಕೂ ಸಂಬಂಧ ಇಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿದ್ದ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಕ್ಯಾನ್ಸರ್ ರೇಡಿಯೇಶನ್ ತಜ್ಞ ವೈದ್ಯ ಉಮೇಶ್ ಮಹಾಂತೇಶ್ ಹೇಳಿದರು. ತಂಬಾಕು ಕಾರಣದಿಂದ ಶೇ.30 ರಷ್ಟು ಕ್ಯಾನ್ಸರ್ ಹರಡುತ್ತಿದೆ. ಸ್ತನ ಕ್ಯಾನ್ಸರ್ ಪ್ರಮಾಣ ಸಹ ಹೆಚ್ಚಿದೆ. ನಗರಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಿದೆ. ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಪ್ರಮಾಣಕ್ಕೆ ತಕ್ಕಂತೆ ಕ್ಯಾನ್ಸರ್ ಆಸ್ಪತ್ರೆಗಳಿಲ್ಲ. ಕೇಂದ್ರ ಸಕರ್ಾರ ಮೆಡಿಕಲ್ ಕಾಲೇಜು ಇರುವಲ್ಲಿ ಕ್ಯಾನ್ಸರ ಚಿಕಿತ್ಸಾ ಘಟಕಗಳು ಇರಬೇಕೆಂದು ನಿಯಮ ಮಾಡಿದೆ. ಹಾಗಾಗಿ ಕಾರವಾರದಲ್ಲಿ ಸಹ ಕ್ಯಾನ್ಸರ್ ಆಸ್ಪತ್ರೆ ಬರುತ್ತಿದೆ ಎಂದು ಡಾ.ಉಮೇಶ್ ಹೇಳಿದರು. ಡಾ.ಗಣೇಶ್ ಮಾತನಾಡಿ ಬರುವ ಮಾರ್ಚನಲ್ಲಿ ಕ್ಯಾನ್ಸರ್ ರಿಜಿಸ್ಟ್ರಿ ಅಂಕಿ ಅಂಶ ಬಿಡುಗಡೆ ಮಾಡುವುದಾಗಿ ಹೇಳಿದರು.