ಕಾಗವಾಡ : ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಕರವೇ ಆಗ್ರಹ

ಕಾಗವಾಡ : ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಕರವೇ ಆಗ್ರಹ  Kagawada: Demand for development of deteriorated road is only for tax

ಕಾಗವಾಡ : ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಕರವೇ ಆಗ್ರಹ  

ಕಾಗವಾಡ, 27 : ಪಟ್ಟಣದ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ನಿತ್ಯ ಹಲವು ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಶಾಸಕ ರಾಜು ಕಾಗೆ ಹಾಗೂ ತಹಶೀಲ್ದಾರ ರವೀಂದ್ರ ಹಾದಿಮನಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಸೋಮವಾರ ದಿ. 27 ರಂದು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕರವೇ ಅಧ್ಯಕ್ಷ ಸಿದ್ದು ವಡೆಯರ ಮಾತನಾಡಿ, ಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಇದರ ಬಗ್ಗೆ ಹಲವು ಬಾರಿ ಶಾಸಕರಿಗೆ, ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೂ ಸಹಿತ ಮನಿವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲಾ. ನಿತ್ಯ ಸಾವಿರು ವಾಹನಗಳು ಪಕ್ಕದ ಮಹಾರಾಷ್ಟ್ರ ರಾಜ್ಯ ಹಾಗೂ ಬೆಳಗಾವಿ ಕಡೆಗೆ ಪ್ರಯಾಣಿಸುತ್ತವೆ. ಇಲ್ಲಿ ಹಲವಾರು ಅಪಘಾತಗಳು ಸಂಭವಿಸಿ, ಸಾವು ನೋವು ಸಂಭವಿಸುತ್ತಿವೆ. ಅಧಿಕಾರಿಗಳಿಗೆ ಪೋನ ಮಾಡಿದರೇ ಉತ್ತರಿಸುವ ಕೆಲಸ ಅವರು ಮಾಡುತ್ತಿಲ್ಲಾ. ಕಾಗವಾಡ ತಾಲೂಕು ಕೇಂದ್ರವಾಗಿ ಹಲವು ವರ್ಷಗಳು ಕಳೆದರೂ ಇಲ್ಲಿ ಪೂರ್ಣ ಪ್ರಮಾಣದ ಕಚೇರಿ ಆರಂಭವಾಗಿಲ್ಲಾ. ಈ ಎಲ್ಲ ಸಮಸ್ಯೆಗಳನ್ನು ಶಾಸಕರು ಹಾಗೂ ಅಧಿಕಾರಿಗಳು ಎಂಟು ದಿನಗಳ ಒಳಗಾಗಿ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ಈ ವೇಳೆ ಕರವೇ ಉಪಾಧ್ಯಕ್ಷ ಗಣೇಶ ಕೋಳೆಕರ, ಫಾರುಖ ಅಲಾಸ್ಕರ, ಕೃಷ್ಣಾ ಧೊಂಡಾರೆ, ಪ್ರವೀಣ ಪಾಟೀಲ, ಅಸ್ಲಂ ಜಮಾದರ, ಸುನೀಲ ಧೊಂಡಾರೆ, ಬಾಬಾಸಾಬ ಕತ್ತಲಗೆ, ಶಂಕರ ಕಾಂಬಳೆ, ಅಮೋಲ ಮಾಳಿ, ಸಚೀನ ಗಾವಡೆ, ಮಹೇಶ ಮಟಗರಿ, ಅಪ್ಪಾಸಾಬ ಗುಮಟೆ, ಹಸನ ಪಾನಾರೆ, ಜ್ಯೋತು ಪಾಟೀಲ, ರಂಜಿತ ಕೋಳಿ, ಸೂರಜ ಪರೀಟ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.