ವಿಎಸ್ಕೆಯುಬಿಯಲ್ಲಿ ಕೆಸೆಟ್ ತರಬೇತಿ ಕಾರ್ಯಾಗಾರ

ವಿಎಸ್ಕೆಯುಬಿಯಲ್ಲಿ ಕೆಸೆಟ್ ತರಬೇತಿ ಕಾರ್ಯಾಗಾರ 

ಬಳ್ಳಾರಿ, ನ.16: ಸತತ ಅಧ್ಯಯನದಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದು ಜ್ಞಾನ ಬುತ್ತಿ ಸಂಸ್ಥೆಯ ಜೈನಹಳ್ಳಿ ಸತ್ಯನಾರಾಯಣ ಗೌಡ ತಿಳಿಸಿದರು. 

ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಮಾರ್ಗದರ್ಶನ ಘಟಕದ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ತರಬೇತಿ ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. 

ಯಾರಿಗೂ ಹಣ ನೀಡದೇ ಸರ್ಕಾರಿ ಉದ್ಯೋಗ ಪಡೆಯಬಹುದು. ಅದಕ್ಕೋಸ್ಕರ ಪ್ರತಿ ನಿತ್ಯ ಪತ್ರಿಕೆಗಳನ್ನು ಓದಬೇಕು. ಜ್ಞಾನವಿದ್ದರೆ ಏನನ್ನಾದರೂ ಸಾಧಿಸಬಹುದು. ತರಬೇತಿ ಪಡೆಯಲು ಆಗಮಿಸಿರುವ ವಿದ್ಯಾರ್ಥಿಗಳ ಬದುಕು ಸುಂದರವಾಗಲಿ ಎಂದು ತಿಳಿಸಿದರು. ಮತ್ತೊಬ್ಬ ಅತಿಥಿ  ಪ್ರೊ.ಎನ್‌.ಎನ್‌.ಪ್ರಹ್ಲಾದ್ ಮಾತನಾಡಿ,  ವಿಶ್ವವಿದ್ಯಾಲಯದಲ್ಲಿ ಅಗಾಧ ಜ್ಞಾನ ಅಡಗಿದ್ದು, ಅದನ್ನು ವಿದ್ಯಾರ್ಥಿಗಳು ಸದ್ಬಳಕೆ  ಮಾಡಿಕೊಳ್ಳುವಂತೆ ತಿಳಿಸಿದರು. ಯುನಿವರ್ಸಿಟಿಯನ್ನು  ಉತ್ತುಂಗಕ್ಕೆ ಕೊಂಡೊಯ್ಯಲು ಯಾವುದೇ ಸಹಾಯ ಮಾಡಲು ಸಿದ್ದ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ವಿಎಸ್ಕೆಯುಬಿ: ಕುಲಪತಿ, ಪ್ರೊ.ಎಂ ಮುನಿರಾಜು ಮಾತನಾಡಿ,  ಶ್ರೀಮಂತರು ಸಾಧನೆ ಮಾಡಲಾಗಿಲ್ಲ, ಹಲವು ಸಾಧಕರು ಸರ್ಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಪೋಷಕರ ಆಸೆಯನ್ನು ಈಡೇರಿಸಬೇಕು.  ಚನ್ನಾಗಿ ಓದಿ ಉದ್ಯೊಗ ಪಡೆಯಿರಿ ಎಂದು ಸಲಹೆ ನೀಡಿದರು. ಜೊತೆಗೆ ಓದುವ ಛಲ ಇರಬೇಕು. ಮೊದಲು ದ್ವೇಷ ಬಿಡಿ, ನಿಮ್ಮ ಕೆಲಸ ಮಾಡುತ್ತಾ ಮುನ್ನುಗ್ಗಿ ಆಗ ಯಶಸ್ಸು ಕಾಣಲು ಸಾಧ್ಯ, ಮೂಲಸೌಕರ್ಯ ಬೇಕಾದಲ್ಲಿ ನೇರವಾಗಿ ಸಂಪರ್ಕಿಸಿದರೆ  ಈಡೇರಿಸುವೆ ಎಂದು ಭರವಸೆ ನೀಡಿದರು. 

ಈ  ತರಬೇತಿಯಲ್ಲಿ ಕೆ ಸೆಟ್ ಪರೀಕ್ಷಾರ್ಥಿಗಳು, 100 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.