ನೊಂದ ಪ್ರಜೆಯ ಧ್ವನಿಯಾಗಿ ಹೊರಹೊಮ್ಮುತ್ತಿರುವ ಎಕೈಕ ಪಕ್ಷ ಕೆಆರ್‌ಎಸ್: ಯಡಹಳ್ಳಿ
KRS is the only party emerging as the voice of the aggrieved citizen: Yadahalli
ಸಿಂದಗಿ 13; ರಾಜ್ಯದಲ್ಲಿ ದುರಾಡಳಿತ ಭ್ರಷ್ಟಾಚಾರ ಅನ್ಯಾಯ ದೌರ್ಜನ್ಯಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ತನ್ನ ಪ್ರಾಮಾಣಿಕ ಹೋರಾಟದಿಂದ ನಾಡಿನ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸುತ್ತಿದೆ. ಹೆಚ್ಚಿನ ಜನರು ಸದಸ್ಯತ್ವ ಪಡೆಯಲು ಮುಂದಾಗುತ್ತಿದ್ದಾರೆ. ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮತ್ತು ಜನರ ಬಳಿಗೆ ಒಯ್ಯಲು ಯುವನೇತಾ ಬೈಠಕ ಅಭಿಯಾನದ ಮೂಲಕ ಸಿಂದಗಿ ಭಾಗದಲ್ಲಿ ಇನ್ಮುಂದೆ ಜನ ಪರವಾದ ಕೆಲಸಗಳು ಮುಂದುವರೆಯಲಿದೆ ಎಂದು ಕೆಆರ್.ಎಸ್.ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏಖಖ ಪಕ್ಷದ ನೂತನ ಕ್ರಾಂತಿಗೆ ಕ್ರಾಂತಿಕಾರಿಗಳಾದ ಸಿಂದಗಿ ಭಾಗದ ಜನ ಮುನ್ನಡಿ ಬರೆಯಿರಿ, ಸತ್ಯ ನ್ಯಾಯ ನೀತಿ ಧರ್ಮದ ಆಧಾರದ ಮೇಲೆ ಹೊಸ ಯುಗದ ರಾಜಕಾರಣವನ್ನು ಸ್ಥಾಪಿಸಲು ಅದೆಷ್ಟೋ ದುಷ್ಟಶಕ್ತಿಗಳನ್ನು ಎದುರಿಸಿ ಅಧರ್ಮವನ್ನು ಬಗ್ಗು ಬಡಿದು ಭ್ರಷ್ಟರನ್ನು ಮೆಟ್ಟಿ ನಿಂತು ಸರ್ವ ಜನಾಂಗದ ಶಾಂತಿಯ ತೋಟವನ್ನು ಕಟ್ಟಿ, ನೊಂದ ಪ್ರಜೆಯ ಧ್ವನಿಯಾಗಿ ಹೊರಹೋಮ್ಮುತ್ತಿರುವ ಎಕೈಕ ಪಕ್ಷವಾಗಿದೆ ಎಂದರು.
ಕೆಆರ್‌ಎಸ್ ಪಕ್ಷ ನಬಿ ಹುಣಶ್ಯಾಳ ಮಾತನಾಡಿ, ಅಕ್ರಮವಾಗಿ ಮಧ್ಯ ಮಾರಾಟ ದಂಧೆ ಅವ್ಯಾಹತವಾಗಿ ನಡೆಸುತ್ತ ಯುವಕರನ್ನು ದಮನ ಮಾಡುವ ಹುನ್ನಾರ ಇಂದಿನ ರಾಜಕೀಯ ಪಕ್ಷಗಳು ನಡೆಸುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುವ ನೇತಾ ಬೈಠಕ್ ಅಭಿಯಾನದ ಮೂಲಕ ಯುವಕರನ್ನು ಒಂದೂಗೂಡಿಸುವ ಕಾರ್ಯಕ್ಕೆ ಈ ಪಕ್ಷ ಮುನ್ನುಗ್ಗುತ್ತಿದೆ. ಇದರಿಂದ ಭ್ರಷ್ಠಮುಕ್ತ ಸರಕಾರ ನಡೆಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಹೊಬಳಿ, ಗ್ರಾಮೀಣ ಮಟ್ಟದಲ್ಲಿ ಸಂಘಟನೆ ಬಲವರ್ಧನೆ ಮಾಡಲಾಗುತ್ತಿದೆ ಯುವಕರು ಮುಂದೆ ಬರಬೇಕು ಎಂದು ಮನವಿ ಮಾಡಿದರು. ಜಿಲ್ಲಾಧ್ಯಕ್ಷ ಅಶೋಕ ಜಾಧವ, ಪುವೀಣ ಕನಸೆ, ನಾಗನಿಂಗ ನಾಟಿಕಾರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 