ಕೆಎಲ್‌ಎಸ್ ಆಯ್‌ಎಮ್‌ಇಆರ್, ಡಾ. ಸಾಠೆ ಆರೋಗ್ಯ ಮಿತ್ರ ಫೌಂಡೇಶನ್ ಮಧ್ಯೆ ಒಪ್ಪಂದ
KLS AMER, Dr. Agreement between Sathe Arogya Mitra Foundation
ಕೆಎಲ್‌ಎಸ್ ಆಯ್‌ಎಮ್‌ಇಆರ್, ಡಾ. ಸಾಠೆ ಆರೋಗ್ಯ ಮಿತ್ರ ಫೌಂಡೇಶನ್ ಮಧ್ಯೆ ಒಪ್ಪಂದ
ಬೆಳಗಾವಿ 28: ಕೆಎಲ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಎಜುಕೇಶನ್ ಅಂಡ್ ರಿಸರ್ಚ್ (ಸ್ವಾಯತ್ತ), ಬೆಳಗಾವಿ ಮತ್ತು ಡಾ. ಸಾಠೆ ಅವರ ಆರೋಗ್ಯ ಮಿತ್ರ ಫೌಂಡೇಶನ್‌ದೊಂದಿಗೆ ಅ. 27ರಂದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಆರೋಗ್ಯ ಮತ್ತು ಸ್ವಾಸ್ಥ್ಯ ಉಪಕ್ರಮಗಳನ್ನು ಸಹಯೋಗದೊಂದಿಗೆ ನಡೆಸಲು ಒಪ್ಪಂದ ಮಾಡಿಕೊಳ್ಳಲಾಯಿತು.
ಈ ತಿಳಿವಳಿಕೆ ಒಪ್ಪಂದಕ್ಕೆ ಕೆಎಲ್‌ಎಸ್ ಐಎಂಇಆರ್‌ನ ಆಡಳಿತ ಮಂಡಳಿಯ ಉದಯ್ ಕಾಲಕುಂದ್ರಿಕರ್ ಮತ್ತು ಆರೋಗ್ಯ ಮಿತ್ರ ಫೌಂಡೇಶನ್ ಸಂಸ್ಥಾಪಕಿ ಡಾ. ವರ್ಷಾ ಸಾಠೆ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಮುತಾಲಿಕ್ ಮತ್ತು ರಾಜ್ ಬೆಳಗಾಂವಕರ, ಕೆಎಲ್‌ಎಸ್ ಐಎಂಇಆರ್‌ನ ನಿರ್ದೇಶಕ ಡಾ. ಆರೀಫ್ ಶೇಖ್, ಸಹ ಪ್ರಾಧ್ಯಾಪಕಿ ಡಾ. ಶೈಲಜಾ ಹಿರೇಮಠ ಮತ್ತು ಫೌಂಡೇಶನ್ನ ಪ್ರತಿನಿಧಿಗಳಾದ ತೃಪ್ತಿ ಮತ್ತು ಸುಮತಿ ಉಪಸ್ಥಿತರಿದ್ದರು.
ಈ ಒಪ್ಪಂದದಿಂದ ಸಂಸ್ಥೆಯು ಆರೋಗ್ಯ, ನೈರ್ಮಲ್ಯ, ಪೋಷಣೆ, ಮಾನಸಿಕ ಯೋಗಕ್ಷೇಮ ಮತ್ತು ಒತ್ತಡ ನಿರ್ವಹಣೆ ಕುರಿತು ತಜ್ಞರ ನೇತೃತ್ವದ ಅವಧಿಗಳ ಸರಣಿಯನ್ನು ಆಯೋಜಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಈ ಉಪಕ್ರಮದಿಂದ ಎಮ್‌ಬಿಎ ವಿದ್ಯಾರ್ಥಿಗಳಿಗಾಗಿ ಸಾರ್ವತ್ರಿಕ ಮಾನವ ಮೌಲ್ಯಗಳು ಮತ್ತು ವೃತ್ತಿಪರ ನೀತಿಶಾಸ್ತ್ರ ಕೋರ್ಸ್‌ಗೆ ಪೂರಕವಾಗಿದೆ ಮತ್ತು ಕ್ಯಾಂಪಸ್‌ನಲ್ಲಿ ಸಮಗ್ರ ಅಭಿವೃದ್ಧಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಮೂಲಕ ವಿದ್ಯಾರ್ಥಿಗಳ ಕಲ್ಯಾಣ ಮತ್ತು ಬೆಂಬಲಕ್ಕೆ ಕೊಡುಗೆ ನೀಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 