ಕೆಎಲ್‌ಇ ಡೆಂಟಲ್ ವಿದ್ಯಾರ್ಥಿಗೆ ಕ್ಲಿನಿಕಲ್ ಇನೋವೇಷನ್‌ಗಾಗಿ ರಾಷ್ಟ್ರೀಯ ಪ್ಯಾಲಿವೇಟಿವ್ ಕೇರ ಕನ್ವೆನ್ಷನ್ ಚಿನ್ನದ ಪದಕ
KLE Dental Student Wins National Palliative Care Convention Gold Medal for Clinical Innovation
ಕೆಎಲ್‌ಇ ಡೆಂಟಲ್ ವಿದ್ಯಾರ್ಥಿಗೆ ಕ್ಲಿನಿಕಲ್ ಇನೋವೇಷನ್‌ಗಾಗಿ ರಾಷ್ಟ್ರೀಯ ಪ್ಯಾಲಿವೇಟಿವ್ ಕೇರ ಕನ್ವೆನ್ಷನ್ ಚಿನ್ನದ ಪದಕ
ಬೆಳಗಾವಿ 27: ಬೆಳಗಾವಿಯ ಕೆಎಲ್‌ಇ ವಿಕೆ ಡೆಂಟಲ್ ಸೈನ್ಸ್ ಇನ್‌ಸ್ಟಿಟ್ಯೊಟ್‌ನ ನಾಲ್ಕನೇ ವರ್ಷದ ಬಿಡಿಎಸ್ ವಿದ್ಯಾರ್ಥಿ ಆಲ್ರಿಯೋ ಚಾವೆಸ್ ಫೆರ್ನಾಂಡಿಸ್ ಅವರು ನ್ಯಾಷಿನಲ್ ಪ್ಯಾಲಿಯೇಟಿವ್ ಕೇರ್ ಕನ್ವೆನ್ಷನ್ 2025 ರಲ್ಲಿ ಅಂಡರ್ ಗ್ರಾಡ್ಯುಯೇಟ್ ಪೇಪರ್ ಪ್ರೆಸೆಂಟೇಶನ್ ವಿಭಾಗದಲ್ಲಿ ಚಿನ್ನದ ಪದಕವನ್ನ ಗೆದ್ದಿದ್ದಾರೆ. ಈ ಸಮ್ಮೇಳನವನ್ನ ನ್ಯಾಷಿನಲ್ ಅಸೋಸಿಯೇಶನ್ ಆಫ್ ಪ್ಯಾಲಿಯೇಟಿವ್ ಕೇರ್ ಫಾರ್ ಆಯುಷ್ ಇಂಟಿಗ್ರೇಟಿವ್ ಮೆಡಿಸಿನ್ ವತಿಯಿಂದ ಇತ್ತೀಚೆಗೆ ಗೋವಾ ರಾಜ್ಯದ ಸಂಖಾಲೆಯಲ್ಲಿ ಆಯೋಜಿಸಲಾಗಿತ್ತು.
ಆಲ್ರಿಯೋ ಅವರು ಸ್ವತಃ ಅಭಿವೃದ್ದಿಪಡಿಸಿದ ಹಾಗೊ ಕೋಡ್ ಮಾಡಿದ ಮೊಬೈಲ್ ಆಪ್ ಮೈ ಪಾಲೊ ಫ್ರೆಂಡ್ ಕುರಿತು ಪ್ರಸ್ತುತ ಪಡಿಸಿದರು. ಈ ಆಪ್ ವೈದ್ಯ-ರೋಗಿ ಸಂವಹನವನ್ನು ಸುಧಾರಿಸಲು ಹಾಗೂ ಪ್ಯಾಲಿಯೇಟಿವ್ ಕೇರ್‌ನ ಭಾವನಾತ್ಮಕ ಸ್ವಷ್ಟೆಯನ್ನ ಹೆಚ್ಚಿಸಲು ವಿನ್ಯಾಸಗೊಳಿಸಲಾದ ಕ್ಲಿನಿಕಲ್ ಸಾಧನವಾಗಿದೆ. ಈ ಆಪ್ ಹೊಸತನ ಮತ್ತು ಕರುಣೆಯ ಸಂಯೋಜನೆಯಾಗಿದ್ದು ವೈದ್ಯರಿಗೆ ಉತ್ತಮ ವಿವರಣೆ ನೀಡಲು ಪ್ರಮುಖ ಮಾಹಿತಿಯನ್ನ ನೆನಪಿಡಲು ಹಾಗೊ ಹಾರೈಕೆಯನ್ನು ಸರಳಗೊಳಿಸಲು ಸಹಕಾರಿಯಾಗುತ್ತದೆ. ವಿಶೇಷವಾಗಿ ಗ್ರಾಮೀಣ ಅಥವ ಸಂಪನ್ಮೊಲ ಕಡಿಮೆ ಪ್ರದೇಶದಲ್ಲಿ ಸಹ. ಆಲ್ರಿಯೋ ಅವರು ಂಟಡಿಠಋ ಖಿಜಛಿಟಿಠಠ ಎಂಬ ನವೀನ ಆರೋಗ್ಯ ತಂತ್ರಜ್ಙನ ಸ್ಟಾರ್ಟಪ್‌ನ ಸಂಸ್ಥಾಪಕರು ಆಗಿದ್ದಾರೆ. ಇವರಿಗೆ ಓರಲ್ ಮತ್ತುಮ್ಯಾಕ್ಸೀಲೋ ಫೇಷಿಯೆಲ್ ಸರ್ಜರಿ ವಿಭಾಗದ ಉಪನ್ಯಾಸಕರಾದ ಡಾ.ಶಿಂಜು ಜಾನ್, ಆರ್ಥೊಡೊಂಟಿಕ್ಸ ಮತ್ತು ಡೆಂಟೊಫೇಷಿಯೆಲ್ ಆರ್ಥೊಪೀಡಿಕ್ಸ ವಿಭಾಗದ ಪ್ರಾಧ್ಯಪಕ ಡಾ.ಆನಂದ ಬಡವಣ್ಣನವರ ಮಾರ್ಗದರ್ಶನ ನೀಡಿದ್ದರು.
ಆಲ್ರಿಯೋ ಅವ್ರ ಸಾಧನೆಗೆ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಅಲ್ಕಾಕಾಳೆ ಮತ್ತು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. ಮೈ ಪಾಲೊ ಫ್ರೆಂಡ್ ಆಫ್‌ನ ಮುಖ್ಯ ವೈಶಿಷ್ಠ್ಯಗಳು ಮೌಖಿಕ ಕ್ಯಾನ್ಸರ್ ಜಾಗೃತಿ: ಮೌಖಿಕ ಕ್ಯಾನ್ಸರ್ ಲಕ್ಷಣಗಳ ದೃಶ್ಯ ಹಾಗೂ ಪಠ್ಯಾಧಾರಿತ ಮಾರ್ಗದರ್ಶಿ- ಪ್ರಾರಂಭಿಕ ಹಂತದಲ್ಲೇ ಗುರುತಿಸಲು ಸಹಾಯಕ. ಪೌಷ್ಠಿಕ ಬೆಂಬಲ: ಪ್ಯಾಲಿಯೇಟಿವ್ ಕೇರ್ ಪಡೆಯುತ್ತಿರುವ ರೋಗಿಗಳಿಗೆ ಅಗತ್ಯವಾದ ಪೌಷ್ಠಿಕಾಂಶಗಳ ವಿವರಿತ ಪಟ್ಟಿ ಸಂರಕ್ಷರಿಗೆ ಆಹಾರ ಯೋಜನೆ ಮಾಡಲು ಸಹಾಯಕ. ಜಾಗತಿಕ ಸಹಾಯವಾಣಿ ಸೂಚ್ಯಂಕ: ಈ ಆಪ್‌ನಲ್ಲಿ ವಿಶ್ವದ ವಿವಿಧ ಪ್ಯಾಲಿಯೇಟಿವ್ ಕೇರ್ ಸಂಸ್ಥೆಗಳ ಸಹಾಯವಾಣಿ ಸಂಖ್ಯೆಗಳ ಆಯ್ದ ಪಟ್ಟಿ ನೇರವಾಗಿ ಲಭ್ಯವಾಗುತ್ತದೆ. ಚಿತ್ರ ಮತ್ತು ಸಂಗೀತ ಚಿಕಿತ್ಸಾ ವಿಭಾಗ: ಆಲ್ರಿಯೋ ಅವರೇ ರಚಿಸಿದ ಶಾಂತ ಚಿತ್ರಗಳು ಮತ್ತು ಸಂಗೀತ ಥೆರಪಿ ಟ್ರ್ಯಕ್‌ಗಳು ರೋಗಿಗಳಿಗೆ ಶಾಂತಿ ನೀಡಲು ವಿನ್ಯಾಸಗೊಳಿಸಲಾಗಿದೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 