ಕೆ.ಜಿ.ಎಸ್ ಮತ್ತು ಎಮ್.ಪಿ. ಎಸ್ ಎರಡು ಶಾಲೆಯ "ವಿದ್ಯಾರ್ಥಿಗಳ ರಕ್ತ ಗುಂಪುಗಳ ಉಚಿತ ತಪಾಸಣೆ ಶಿಬಿರ
ಬೆಳಗಲಿ 14 : ಪಟ್ಟಣದ ದತ್ತಾತ್ರೇಯ ದೇವಸ್ಥಾನಕ್ಕೆ ಹೊಂದಿಕೊಂಡಿರುವ ರನ್ನ ಬೆಳಗಲಿ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ತಾಯಿಯಾದ ನೀಲವ್ವ ಮಹಾದೇವ ನೀಲಣ್ಣವರ ಅವರ 5ನೇ ಪುಣ್ಯ ಸ್ಮರಣೆ ನಿಮಿತ್ಯವಾಗಿ ಸದ್ಗುರು ರಾಯಲಿಂಗೇಶ್ವರ ಪ್ಯಾರಾ ಮೆಡಿಕಲ್ ಕಾಲೇಜ್ ಮುಧೋಳ ಆಶ್ರಯದಲ್ಲಿ ಪಟ್ಟಣದ ಕೆ.ಜಿ.ಎಸ್ ಮತ್ತು ಎಮ್.ಪಿ. ಎಸ್ ಎರಡು ಶಾಲೆಯ "ವಿದ್ಯಾರ್ಥಿಗಳ ರಕ್ತ ಗುಂಪುಗಳ ಉಚಿತ ತಪಾಸಣೆ ಶಿಬಿರ" ಜರುಗಿತು.ದಿವ್ಯ ಸಾನಿಧ್ಯ ವಹಿಸಿದ ಪರಮ್ ಪೂಜ್ಯ ಶ್ರೀ ಸಿದ್ದರಾಮ ಶಿವಯೋಗಿಗಳು ಸಿದ್ಧಾರೂಢ ಆಶ್ರಮ ಮುಧೋಳ ಶ್ರೀಗಳು ಪುಣ್ಯ ಸ್ಮರಣೆ ಆಚರಣೆಯೊಂದಿಗೆ, ಸಮಾಜ ಸೇವೆ ಮಾಡುವುದು ಪುಣ್ಯ ಫಲವಾಗಿದೆ, ಬಡ ಕುಟುಂಬದ ಒಬ್ಬ ಖಾಸಗಿ ಶಿಕ್ಷಕ ತನ್ನ ತಾಯಿಯ ಸ್ಮರಣಾರ್ಥವಾಗಿ ಪ್ರತಿ ವರ್ಷವೂ ದುಡಿಮೆಯ ಒಂದು ಭಾಗದಲ್ಲಿ ಆರೋಗ್ಯಕ್ಕೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಉಚಿತ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿರುವುದು ಶ್ಲಾಘನೀಯವಾಗಿದೆ. ತಾಯಿಗಿಂತ ಜಗತ್ತಿನ ದೊಡ್ಡ ದೈವ ಮತ್ತೊಂದಿಲ್ಲ. ತಂದೆ, ತಾಯಿಯರ ತ್ಯಾಗವನ್ನು ಸ್ಮರಣೆ ಮಾಡುತ್ತಾ ಪ್ರತಿನಿತ್ಯವೂ ತಂದೆ, ತಾಯನ್ನು ಗೌರವಿಸಿ ಅವರು ತೋರುವ ಮಾರ್ಗದಲ್ಲಿ ಸಾಗಿ,ಉತ್ತಮ ಶೈಕ್ಷಣಿಕ ಸಾಧನೆ ಗೈದು ನಿಮ್ಮ ಪವಿತ್ರ ಮಾನವ ಜನ್ಮದ ಕಾರಣಿ ಕರ್ತರನ್ನು ಚೆನ್ನಾಗಿ ನೋಡಿ ಕೊಳ್ಳಿ ಹಾಗೂ ಉತ್ತಮ ಸಂಸ್ಕಾರ ದಿಂದ ಕೂಡಿದ ಬದುಕನ್ನು ಸಾಗಿಸಿ ಎಂದು ತಿಳಿಸಿದರು.ಮುಖ್ಯೋಪಾಧ್ಯರಾದ ಶ್ರೀಮತಿ ಎಸ್ ಎಲ್ ಕಠಾರೆ ಯೋಗ ಶಿಕ್ಷಕ ನೀಲಣ್ಣವರ ಸಮಾಜಮುಖಿ ಚಟುವಟಿಕೆಗಳು ನಮ್ಮ ಶಾಲೆಗೆ ವರದಾನವಾಗಿವೆ. ಅವರ ತಾಯಿಯ ಪರಿಶ್ರಮದಲ್ಲಿ ಬೆಳೆದು ಉತ್ತಮ ಸಮಾಜಮುಖಿ ಕೆಲಸವನ್ನು ಮಾಡುತ್ತಾ ಇದ್ದಾರೆ. ಅವರ ತಾಯಿ ಅವರ ಆತ್ಮಕ್ಕೆ ಭಗವಂತ ಸದ್ಗತಿಯನ್ನು ನೀಡಲಿ ಮತ್ತು ಅವರ ಪುತ್ರನಿಗೆ ಹೆಚ್ಚಿನ ಸೇವೆ ಗೈಯುವ ಶಕ್ತಿ ನೀಡಲೆಂದು ದೇವಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸುವುದರ ಜೊತೆಗೆ ವೇದಿಕೆಗೆ ಸ್ವಾಗತಗೈದರು.ಯೋಗ ಶಿಕ್ಷಕರ ರಾಘವೇಂದ್ರ ನೀಲಣ್ಣವರ ತಮ್ಮ ತಾಯಿಯ ಸ್ಮರಣಾರ್ಥವಾಗಿ ಪ್ರತಿ ವರ್ಷವೂ ಶೈಕ್ಷಣಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಉಚಿತ ಸೇವಾ ಕಾರ್ಯಕ್ರಮ ನಡೆಸಿಕೊಂಡು ಬರಲು ಸ್ಥಳೀಯ ಗುರು ಹಿರಿಯರ ಮಾರ್ಗ ದರ್ಶನವೇ ಮುಖ್ಯವಾಗಿದೆ. ಅದರಂತೆ ಪ್ರಸ್ತುತ ವರ್ಷದ ನನ್ನ ತಾಯಿಯ 5ನೇ ಪುಣ್ಯ ಸ್ಮರಣೆ ಸೇವಾ ಅವಕಾಶ ಮಾಡಿಕೊಟ್ಟ ಕೆ ಜಿ ಎಸ್ ಮತ್ತು ಎಂ ಪಿ ಎಸ್ ಶಾಲೆಗಳ ಎಸ್ ಡಿ ಎಂ ಸಿ ಪದಾಧಿಕಾರಿಗಳಿಗೆ,ಮುಖ್ಯ ಗುರುಗಳಿಗೆ,ಸಹ ಶಿಕ್ಷಕರಿಗೆ ಮತ್ತು ಗೌರವ ಶಿಕ್ಷಕರಿಗೆ ಗೌರವಿಸಿ ಸನ್ಮಾನಿಸುವುದರ ಜೊತೆಗೆ ಧನ್ಯವಾದಗಳು ಸಲ್ಲಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳಾದ ಸದಾಶಿವ ಹಳ್ಳೂರ ಅಧ್ಯಕ್ಷರು ಎಸ್ ಡಿ ಎಂ ಸಿ, ಕೆ ಜಿ ಎಸ್ ರನ್ನ ಬೆಳಗಲಿ ವಹಿಸಿದ್ದರು. ಶ್ರೀ ಸದ್ಗುರು ರಾಯಲಿಂಗೇಶ್ವರ ಪ್ಯಾರಾ ಮೆಡಿಕಲ್ ಕಾಲೇಜ್ ಸಂಸ್ಥಾಪಕ ಅಧ್ಯಕ್ಷರಾದ ಬಸಪ್ಪ ಉಪ್ಪಾರ, ಶಾಲಾ ಸಿಬ್ಬಂದಿಗಳಾದ ಎಸ್ ಪಿ ಜೋಶಿ, ಎಚ್ ಬಿ ಜಮಾದಾರ, ಆರ್ ಡಿ ಬಂಡಿ, ಎಸ್ ಹೆಚ್ ಮಾದರ, ರೂಪಾ ದಂಡಿನ, ಚೇತನ ಕೊಣ್ಣೂರ, ಕಾಶಪ್ಪ ಸರವಿ, ವಿಜಯಲಕ್ಷ್ಮಿ ಮಠಪತಿ, ಬಂದವ್ವ ಹೊಳ್ಳೆಪ್ಪಗೋಳ, ಶೋಭಾ ವೀರಘಂಟಿ,ಭಾರತಿ ಮಳ್ಳಿಗೇರಿ, ಕಾಳಮ್ಮ ಬಡಿಗೇರ, ಶ್ರೀ ಸದ್ಗುರು ರಾಯಲಿಂಗೇಶ್ವರ ಪ್ಯಾರ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು, ಎಮ್ ಪಿ ಎಸ್ ಮತ್ತು ಕೆ ಜಿ ಎಸ್ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.