ಜ್ಯೋತಿ ಅರ್ಬನ್ ಸೊಸೈಟಿಗೆ 1.58 ಕೋಟಿ ರೂ ಲಾಭ

ಜ್ಯೋತಿ  ಅರ್ಬನ್  ಸೊಸೈಟಿಗೆ  1.58 ಕೋಟಿ ರೂ ಲಾಭ Jyoti Urban Society earns Rs 1.58 crore profit

ಲೋಕದರ್ಶನ ವರದಿ 

ಮೂಡಲಗಿ 12: ಜ್ಯೋತಿ  ಅರ್ಬನ್   ಸೊಸೈಟಿಯು ಸನ್  2025-26 ನೇ ಆರ್ಥಿಕ ವರ್ಷದ ಅಂತ್ಯಕ್ಕೆ  1.58 ಕೋಟಿ ರೂ ಲಾಭ ಗಳಸಿ  ಪಥದಲ್ಲಿ ಸಾಗಿದೆ ಎಂದು ಸೊಸೈಟಿ ಅಧ್ಯಕ್ಷ ಮಲ್ಲಪ್ಪಾ ಮದಗುಣಕಿ  ಹೇಳಿದರು. 

ಅವರು  ಪಟ್ಟಣದ ಜ್ಯೋತಿ  ಅರ್ಬನ್  ಕೋ-ಆಪ್ ಕ್ರೆಡಿಟ್ ಸೊಸೈಟಿ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಸಂಘವು 1.66 ಕೋಟಿ ರೂ ಶೇರು ಬಂಡವಾಳ, 91.22 ಕೋಟಿ ರೂ ಠೇವು, 2.33 ಕೋಟ ರೂ ನಿಧಿಗಳು, 58.11 ಕೋಟಿ ರೂ ಸಾಲಗಳು, 36.88 ಕೋಟಿ ಗುಂತಾವಣಿಗಳು, 101,89 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ 442.88 ಕೋಟಿ ವ್ಯವಹಾರ ಮಾಡಿ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದರು.  

ಸೊಸೈಟಿಯ ಉಪಾಧ್ಯಕ್ಷ ಬಸವರಾಜ ನೇಮಗೌಡರ ಮಾತನಾಡಿ,  ಸೊಸೈಟಿಯು ಈಗಾಗಲೇ 9 ಶಾಖೆಗಳನ್ನು ಹೊಂದಿದ್ದು, ಮುಂಬರು ದಿನಗಳಲ್ಲಿ ಇನ್ನೂ ಮೂರು ಶಾಖೆಗಳು ಹಾಗೂ ಪ್ರಧಾನ ಕಛೇರಿ ಸ್ವಂತ ಕಟ್ಟಡ ಕಾರ್ಯ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿ  ನಿರ್ದೇಶಕರುಗಳಾದ ಶ್ರೀಶೈಲ್ ಶಿ, ಜೈನಾಪೂರ, ಅಪ್ಪಯ್ಯಪ್ಪ ಬ, ನೇಮಗೌಡರ, ಶ್ರೀಶೈಲ್  ಗಾಣಿಗೇರ, ಮಲ್ಲಪ್ಪ  ಗಾಣಿಗೇರ, ಸಂಗಪ್ಪ  ಕಾಳಪ್ಪಗೋಳ, ಚಂದ್ರು  ಗಾಣಿಗ, ಸಾವಿತ್ರಿ  ತೇಲಿ, ಆಶಾ  ಗಾಣಿಗೇರ, ಮಂಜುಳಾ  ನೇಮಗೌಡರ, ಮುತ್ತಪ್ಪಾ  ವರ್ಗಿ ಪ್ರಧಾನ ವ್ಯವಸ್ಥಾಪಕ ಪ್ರಕಾಶ  ರಡರಟ್ಟಿ ಉಪಸ್ಥಿತರಿದ್ದರು.