ಸಿಬಿಐ ತನಿಖೆಯಿಂದ ಮಾತ್ರ ನ್ಯಾಯ ಸಾಧ್ಯ
Justice is possible only through a CBI investigation
ಬಳ್ಳಾರಿ: ಬ್ಯಾನರ್ ಗಲಾಟೆ ಪ್ರಕರಣ ಸಿಐಡಿಗೆ ವಹಿಸಿರುವುದು ಕಣ್ಣೊರೆಸುವ ತಂತ್ರವಷ್ಟೇ. ಪ್ರಾಮಾಣಿಕ ಅಧಿಕಾರಿಗಳಾಗಿದ್ದರೆ ಇಷ್ಟೊತ್ತಿಗಾಗಲೇ ಬಂಧಿಸಬೇಕಿತ್ತು. ಹತ್ತು ದಿನವಾದರೂ ಯಾವುದೇ ಬಂಧನವಾಗಿಲ್ಲ. ಸಿಐಡಿ ಮತ್ತು ನಮ್ಮ ಪೊಲೀಸರ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಸಿಬಿಐಗೆ ತನಿಖೆ ವಹಿಸಿದರೆ ಮಾತ್ರ ನ್ಯಾಯ ಸಿಗಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ ಅಥವಾ ನ್ಯಾಯಧೀಶರ ಮೂಲಕ ತನಿಖೆ ಮಾಡಬೇಕು. ಸಿದ್ದರಾಮಯ್ಯ ಪಾದಯಾತ್ರೆ ಮಾಡಿ ಸಿಬಿಐ ತನಿಖೆ ಕೇಳಿದ್ದರು. ನಮಗೂ ನೂರಾರು ಮಾರ್ಗಗಳಿವೆ, ನಾವು ಕೋರ್ಟ್ ಮೂಲಕ ಸಿಬಿಐಗೆ ವಹಿಸುವಂತೆ ಒತ್ತಾಯ ಮಾಡುತ್ತೇವೆ ಎಂದರು.
ಇದೇ ವೇಳೆ ರೆಡ್ಡಿ ಅವರು ವಿಡಿಯೋ ಸಾಕ್ಷಿಗಳನ್ನು ಬಹಿರಂಗ ಮಾಡಿದರು. ಗಲಾಟೆ ನಡೆಯುವ ಮೊದಲು ಇಲ್ಲಿಂದ ತೆರಳುವಂತೆ ಸತೀಶ್ ರೆಡ್ಡಿಗೆ ಶ್ರೀರಾಮುಲು ತಿಳಿಸಿದ್ದರು. ಆದರೆ ಸತೀಶ್ ರೆಡ್ಡಿ ಮೇಲೆ ಬಿದ್ದು ಹೊಡೆಯಲು ಮುಂದಾಗಿದ್ದಾರೆ. ಶ್ರೀರಾಮುಲು ವಿರುದ್ದ ಅವಾಚ್ಯ ಶಬ್ಧ ಪ್ರಯೋಗ ಮಾಡಿ ನಿಂದನೆ ಮಾಡಿದ್ದಾರೆ. ಕೆಟ್ಟ ಪದ ಬಳಕೆ ಮಾಡಿ ಶ್ರೀರಾಮುಲುರನ್ನು ಕೊಲ್ಲಿ ಹೊಡೆಯಿರಿ ಎಂದಿರುವ ವಿಡಿಯೋವಿದೆ ಎಂದರು.
ಶ್ರೀರಾಮುಲು ಜಾತಿ ಬಳಸಿ ಸತೀಶ್ ರೆಡ್ಡಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಮೊದಲೇ ಯೋಜನೆ ಮಾಡಿ ಬಂದಿರುವುದಕ್ಕೆ ಈ ವಿಡಿಯೋ ಸಾಕ್ಷಿ. ಮಧ್ಯಾಹ್ನ ಬ್ಯಾನರ್ ತೆಗೆಸಿದ ಬಳಿಕ ರಾತ್ರಿ ಬ್ಯಾನರ್ ಹಾಕಲು ಹೋಗೋಣ ಆಗ ಜಗಳ ಮಾಡೋಣ ಎಂದು ಪ್ಲಾನ್ ಮಾಡಿ ಬಂದಿದ್ದಾರೆ. ಶ್ರೀರಾಮುಲು ಮೇಲೆ ಫೈರಿಂಗ್ ಮಾಡಲಾಗಿಲ್ಲ, ಆದರೆ ನಾನು ಬಂದಾಗ ಫೈರಿಂಗ್ ಮಾಡಿದ್ದಾರೆ ಎಂದು ರೆಡ್ಡಿ ಹೇಳಿದರು.
ಭಯ ಇಲ್ಲದೇ ಇದ್ದಾಗ ಶಾಸಕರು ಹೀಗೆ ಮಾಡುತ್ತಾರೆ. ಶ್ರೀರಾಮುಲು ಅಂತಹಾ ನಾಯಕರ ವಿರುದ್ಧ ಸತೀಶ್ ರೆಡ್ಡಿ ಮಾತನಾಡುತ್ತಾನೆಂದರೆ ವ್ಯವಸ್ಥೆ ಏನಾಗಿದೆ? ಘಟನೆ ನಡೆದು ಈಗಾಗಲೇ ಹತ್ತು ದಿನವಾಗಿದೆ. ಸಿಐಡಿಯವರು ಇನ್ನೂ ಹತ್ತು ದಿನ ಕಳೆಯುತ್ತಾರೆ. ಯಾರ ಬಂಧನವಾಗಿಲ್ಲ. ಜನವರಿ 17 ಬೃಹತ್ ಹೋರಾಟ ಮಾಡುತ್ತೇವೆ ಎಂದು ಜನಾರ್ದನ ರೆಡ್ಡಿ ಹೇಳಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 