ಸಂತಸದಾಯಕ ಕಲಿಕೆ ಹೆಚ್ಚು ಶಾಶ್ವತವಾಗಿ ಉಳಿಯಲಿದೆ: ಶರಣಬಸವನಗೌಡ ಪಾಟೀಲ

ಸಂತಸದಾಯಕ ಕಲಿಕೆ ಹೆಚ್ಚು ಶಾಶ್ವತವಾಗಿ ಉಳಿಯಲಿದೆ: ಶರಣಬಸವನಗೌಡ ಪಾಟೀಲ Joyful learning will last longer: Sharanabasavanagouda Patil


ಕೊಪ್ಪಳ 12:  ಕಲಿಕೆಯ ಪ್ರಕ್ರೀಯೆಯಲ್ಲಿ ಸಂತಸದಾಯಕವಾಗಿ ಕಲಿಸುವ ಕಲಿಕೆಯು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ ಪಾಟೀಲ ಹೇಳಿದರು. ಅವರು ತಾಲೂಕಿನ ಹಿರೇಸಿಂದೋಗಿ ಗ್ರಾಮದ ಕೆ.ಪಿ.ಎಸ್‌.ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡುತ್ತಾ,ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಸರಕಾರವು ಎಫ್‌.ಎಲ್‌.ಎನ್‌.ಕಲಿಕಾ ಹಬ್ಬ ಎಂಬ ವಿನೂತನವಾದ ಕಾರ್ಯಕ್ರಮವನ್ನು ಜಾರಿಗೆ ಮಾಡಿದೆ.ಪ್ರತಿಯೊಂದು ಮಗೂ ಕೂಡಾ ಕಲಿಕೆಯಲ್ಲಿ ವೈಯಕ್ತಿಕವಾದ ಭಿನ್ನತೆಗಳಿದ್ದು,ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸಂತಸದಾಯ ಅಲ್ಲದೇ ಸೃಜನಾತ್ಮಕವಾದ ಚಟುವಟಿಕೆಗಳನ್ನು ಮಾಡುವ ಪರಿಕಲ್ಪನೆಯನ್ನು ಮೂಡಿಸುವ ಚಟುವಟಿಕಾ ಕಾರ್ಯಕ್ರಮವಾಗಿದೆ.ಮಕ್ಕಳಿಗೆ ಕಲಿಕೆ ಅನ್ನುವುದು ಯಾವಾಗಲೂ ಸಂತಸದಾಯಕವಾದ ವಾತಾರವಣ ರೀತಿಯಲ್ಲಿ ಇರಬೇಕು.  

ಸಂತಸದಾಯಕ ವಾತಾವರಣದಲ್ಲಿ ಕಲೆಯುವ ಕಲಿಕೆಯು ಮಗುವಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಬೀರ​‍್ಪ ಅಂಡಗಿ ಮಾತನಾಡಿ,ಕರೋನಾ ಎಂಬ ಮಹಾಮಾರಿಯ ಹಿನ್ನಲೆಯಲ್ಲಿ ಕಲಿಕೆಯಲ್ಲಿ ಉಂಟಾಗಿದ ಅಂತರವನ್ನು ಸರಿ ಮಾಡುವ ನಿಟ್ಟಿನಲ್ಲಿ ಕಲಿಕಾ ಹಬ್ಬವನ್ನು ಜಾರಿಗೆ ತರಲಾಯಿತು.ಈ ಕಲಿಕಾ ಹಬ್ಬದ ಮೂಲಕ ಮಕ್ಕಳು ತಮ್ಮಲ್ಲಿರುವ ಪ್ರತಿಭೆ,ಆತ್ಮವಿಶ್ವಾಸವನ್ನು ಪ್ರದರ್ಶಿಸುವ ಅವಕಾಶವನ್ನು ಪಡೆಯುತ್ತಾರೆ.ಚಿತ್ರಕಲೆ,ಹಾಡು,ನಾಟಕ,ವಿಜ್ಞಾನ ಮಾದರಿ,ಕಥೆ ಹೇಳಿಕೆ ಇವೆಲ್ಲವೂ ಮಕ್ಕಳಲ್ಲಿ ಅಡಗಿರುವ ಕಲಿಕಾ ಶಕ್ತಿಯನ್ನು ಹೊರತರುತ್ತವೆ.ಇದು ಶಿಕ್ಷಕರಿಗೆ ಮಕ್ಕಳ ಕಲಿಕಾ ಮಟ್ಟವನ್ನು ಅರಿಯಲು ಹಾಗೂ ಪಾಲಕರು ತಮ್ಮ ಮಕ್ಕಳ ಸಾಮರ್ಥ್ಯವನ್ನು ನೋಡುವ ಅವಕಾಶ ನೀಡುತ್ತದೆ ಎಂದು ಹೇಳಿದರು. 

 ಕಾರ್ಯಕ್ರಮದ ಕುರಿತು ಅಳವಂಡಿ ವಲಯ ಶಿಕ್ಷಣ ಸಂಯೋಜಕರಾದ ಮಹಾದೇವಪ್ಪ ಗೂಳೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ಹನುಮಂತಪ್ಪ ಕುದರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮೈಬೂಬ ಹುಸೇನ,ಶಿಕ್ಷಣ ಸಂಯೋಜಕರಾದ ವಿರೇಶ ಅರಳಿಕಟ್ಟಿ,ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಶಿವಪ್ಪ,ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಾರುತಿ ಮ್ಯಾಗಳಮನಿ,ತಾಲೂಕ ಅಧ್ಯಕ್ಷರಾದ ಮಂಜುನಾಥ ಕೆಸಲಾಪುರ,ಶಾಲಾ ಅಭಿವೃದ್ದಿ ಸಮಿತಿಯ ಸದಸ್ಯರಾದ ಸುಭಾಸರಡ್ಡಿ ಮೈನಳ್ಳಿ.ಮರಳಸಿದ್ದಪ್ಪ ಅಣವಾಳ,ಮಂಜಮ್ಮ ಕುರದಗಡ್ಡಿ,ಮರಳಸಿದ್ದಯ್ಯಾ ಮಠದ,ಶರಣಮ್ಮ ಹೂಗಾರ,ನಿವೇದಿತಾ ಹಿರೇಮಠ,ಈರಮ್ಮ ತೋಟದ,ದೇವೇಂದ್ರ​‍್ಪ ಕುರಡಗಿ,ಶರಣಪ್ಪ ರಡ್ಡೇರ,ಹನುಮಂತಪ್ಪ ಕುರಿ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಬೀರ​‍್ಪ ಗುರಿಕಾರ ನಿರೂಪಿಸಿದರು.  ಕೆ.ಪಿ.ಎಸ್‌.ಶಾಲೆಯ ಮುಖ್ಯೋಪಾಧ್ಯಾಯರಾದ ಮಲ್ಲಪ್ಪ ಗುಡ್ಡದನ್ನವರ ಸ್ವಾಗತಿಸಿ,ಹಿರೇಸಿಂದೋಗಿ ಕ್ಲಸ್ಟರ ಸಿ.ಆರ್‌.ಪಿ.ನಾಗರಾಜ ಸಾಲಮನಿ ವಂದಿಸಿದರು. 


F.L.N. Learning Festival Creative Activities in Education Child-Centered Learning