ಸೊಂಬೆರಿ, ಕರ್ತವ್ಯ ಪ್ರಜ್ಞೆ ಮರೆತ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಜಯ ಕರ್ನಾಟಕ ಸೇನೆ ಆಗ್ರಹ
Jaya Karnataka Sena demands appropriate action against corrupt officials who have forgotten their s
ಸೊಂಬೆರಿ, ಕರ್ತವ್ಯ ಪ್ರಜ್ಞೆ ಮರೆತ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಜಯ ಕರ್ನಾಟಕ ಸೇನೆ ಆಗ್ರಹ
ವಿಜಯಪುರ 30 : ಸೊಂಬೆರಿ, ಕರ್ತವ್ಯ ಪ್ರಜ್ಞೆ ಮರೆತ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವವಂತೆ ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಕೃಷ್ಣಾ ಭೋಸಲೆ ಮಾತನಾಡಿ, ಸಾರ್ವಜನಿಕರ ಕಚೇರಿಗಳನ್ನು ತಮ್ಮ ಅಪ್ಪನ ಮನೆಯಂತೆ ತಿಳಿದುಕೊಂಡಿರುವ ಸೊಂಬೆರಿ, ಕರ್ತವ್ಯ ಪ್ರಜ್ಞೆ ಮರೆತ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು.
ರೈತರು, ಸಾರ್ವಜನಿಕರು, ದಲಿತರು, ಮಹಿಳೆಯರು, ಪುರುಷರು, ಹಿಂದುಳಿದವರು, ಪ್ರತಿಯೊಬ್ಬ ಫಲಾನುಭವಿಗಳು ತಮ್ಮ ತಮ್ಮ ಹಕ್ಕನ್ನು ಸಂವಿಧಾನ ಬದ್ಧ ಹಕ್ಕನ್ನು ಪಡೆದುಕೊಳ್ಳಲು ಸರ್ಕಾರಿ ಕಚೇರಿಗಳಿಗೆ ತೆರಳಿದರೆ ಅಲ್ಲಿನ ಅಧಿಕಾರಿಗಳ ಖುರ್ಚಿ ಖಾಲಿ ಇರುತ್ತದೆ. ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸದೆ ಫೋನಿನಲ್ಲಿಯೇ ಮಾತನಾಡುತ್ತಾ ಫೋಜುಕೊಡುತ್ತಾ, ಮೀಟಿಂಗ್ ಇಟಿಂಗ್ ಎನ್ನುತ್ತಾ ಕಾಲ ಹರಣ ಮಾಡಿ ಸಾರ್ವಜನಿಕರ ತೆರಿಗೆಯಿಂದ ಸರ್ಕಾರದ ಸಂಬಳದ ಪಡೆಯುತ್ತಾರೆ. ಆದರೆ ರೈತರು, ಸಾರ್ವಜನಿಕರು ತಮ್ಮ ತಮ್ಮ ಕೆಲಸ ಮಾಡಿಕೊಡುವಂತೆ ಅವರನ್ನು ಆಸೆ ಗಣ್ಣಿನಿಂದ ನೋಡುತ್ತಾ ತಾವು ದುಡಿಯುವ ದಿನದ ಕೂಲಿ ಹಣವನ್ನು ಸರ್ಕಾರಿ ಕಚೇರಿಗೆ ಹೋಗುವ ಮೂಲಕ ತಮ್ಮ ದುಡಿಮೆಯ ಹಣ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದರು.
ಅದರಂತೆ ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಸರಿಯಾದ ಮಾಹಿತಿಯನ್ನು ಬಂದತಹ ಸಾರ್ವಜನಿಕರಿಗೆ ತಿಳಿ ಹೇಳದೆ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಜಾರಿಗೊಳ್ಳುತ್ತಿದ್ದಾರೆ. ಪರೀಶೀಲನೆಗೆ ತೆರಳಬೇಕು. ವಿಜಿಟ್ ಇದೆ ಎನ್ನುತ್ತಾ ಹೊರಗಡೆ ಹೋಗುತ್ತಾರೆ. ಆದರೆ ಅವರು ಹೋಗುವಾಗ ತಮ್ಮ ಅಧಿಕಾರದ ಪ್ರಭಾರಿ ಅಧಿಕಾರಿಗಳಿಗೆ ವಹಿಸದೆ ಹಾಗೇ ಹೋಗುತ್ತಾರೆ. ಆ ಕಚೇರಿಯ ಪ್ರಭಾರಿಗಳು ಇದ್ದರು ಕೆಲಸ ಆಗುವುದಿಲ್ಲ. ನಮ್ಮ ಸಾಹೇಬರೇ ಮಾಡಬೇಕು ಎಂದು ಅವರು ಕೂಡ ಜಾರಿಕೊಳ್ಳುತ್ತಾರೆ. ಇದರಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಏಜಂಟರ್ ಹಾವಳಿಯೇ ಜಾಸ್ತಿಯಾಗಿದೆ. ತಿಂಗಳಿಗೆ ಒಂದು ಬಾರಿಯಾದರೂ ಸರ್ಕಾರಿ ಕಚೇರಿಗಳಿಗೆ ತಾವು ಅಧಿಕಾರಿಗಳಿಗೆ ಮಾಹಿತಿ ನೀಡದೆ ಖುದ್ದಾಗಿ ಕಚೇರಿಗೆ ತೆರಳಿ ಅಲ್ಲಿನ ವಾಸ್ತು ಪರಿಸ್ಥಿತಿಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ಗಳವೆ ಮಾತನಾಡಿ, ಸರ್ಕಾರಿ ಕಚೇರಿಗೆ ಸಾರ್ವಜನಿಕರು ಹೋದಾಗ ಅಧಿಕಾರಿಗಳ ವಿವರ ಗೊತ್ತಾಗುವುದಿಲ್ಲ. ಅವರ ಹೆಸರು ಅವರ ಹುದ್ದೆ ಗೊತ್ತಾಗುವುದಿಲ್ಲ. ಅವರ ಕಾರ್ಯಗಳ ವಿವರ ಸರ್ಕಾರದ ಪ್ರಕಾರ ಅವರು ಗುರುತಿನ ಚೀಟಿ ಹಾಕಿಕೊಳ್ಳುವಂತೆ ಖಡಕ್ ಆದೇಶ ಹೊರಡಿಸಬೇಕು. ಪ್ರತಿಯೊಂದು ಇಲಾಖೆಯ ಸೊಂಬೆರೆ ಕರ್ತವ್ಯ ಪ್ರಜ್ಞೆ ಮರೆತ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಇಲಾಖೆಯ ಸಭೆಯನ್ನು ತಿಂಗಳಲ್ಲಿ ನಡೆಸಿ ಸಾರ್ವಜನಿಕರಿಂದ ಬಂದ ಪ್ರತ್ಯೇಕ ಅರ್ಜಿಗಳು ಹಾಗೂ ವಿಲೇವಾರಿಗಳ ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ಪಾರದರ್ಶಕವಾಗಿ ಅದಕ್ಕೆ ಸ್ಪಂದಿಸಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷೆ ಮಂಜುಳಾ ವಾಲಿ, ಜಿಲ್ಲಾಧ್ಯಕ್ಷರಾದ ವಾಣಿಶ್ರೀ ಪಟ್ಟಣಶೆಟ್ಟಿ, ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಯಮನಪ್ಪ ಬೂದಿಹಾಳ, ಜಿಲ್ಲಾ ಮುಖಂಡರಾದ ರಾಜು ಕೋಟ್ಯಾಳ, ಸಕಾರಾಂ ಪವಾರ, ಮಾದೇವ ಢಗೆ, ರಾಜು ಬಿಸೆ, ಆನಂದ ಪೂಜಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 