ರಾಜ್ಯಸಭೆಗೆ ಜೈಶಂಕರ್, ಜುಗಲ್ ಠಾಕೋರ್ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಗುಜರಾತ್ ಹೈಕೋರ್ಟ್‍ನಿಂದ ವಜಾ

ಅಹಮದಾಬಾದ್, ಫೆ 4 - ಕಳೆದ ಜುಲೈನಲ್ಲಿ ರಾಜ್ಯಸಭಾ ಉಪಚುನಾವಣೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಜುಗಲ್ ಎಂ ಲೋಖಂಡ್ವಾಲಾ ಅವರನ್ನು ಬಿಜೆಪಿ ಸಂಸದರಾಗಿ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿ ಸಲ್ಲಿಸಲಾಗಿದ್ದ ಎಲ್ಲ ಮೂರು ಮನವಿ ಅರ್ಜಿಗಳನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಒಂದೇ ಅರ್ಜಿಯು ಎರಡು ಆಯ್ಕೆಗಳನ್ನು ಪ್ರಶ್ನಿಸಿದೆ ಎಂಬ ಆಧಾರದಡಿ ಮನವಿ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. 

ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಸಂಸದರ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರಿಂದ ಗುಜರಾತ್‍ನ ಎರಡು ರಾಜ್ಯಸಭಾ ಸ್ಥಾನಗಳು ತೆರವಾಗಿದ್ದವು. 

ಜೈಶಂಕರ್ ಮತ್ತು ಜುಗಲ್ ಠಾಕೋರ್ ಅವರ ಆಯ್ಕೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ-1951ರಡಿ ನಿಯಮಾವಳಿಗಳನ್ನು ಅನುಸರಿಸಲಿಲ್ಲ ಎಂದು ರಾಜ್ಯಸಭಾ ಚುನಾವಣೆಯಲ್ಲಿ ಸೋತಿದ್ದ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳಾದ ಗೌರವ್ ಪಾಂಡ್ಯ ಮತ್ತು ಚಂದ್ರಿಕಾಬೆನ್ ಚುಡಾಸಾಮ ಮತ್ತು ಗುಜರಾತ್ ವಿಧಾನಸಭೆಯಲ್ಲಿನ ಪ್ರತಿಪಕ್ಷದ ನಾಯಕ ಪರೇಶ್ ಧನಾನಿ ಸಲ್ಲಿಸಿದ್ದ ಮನವಿ ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ. 

ಕಳೆದ ವರ್ಷದ ಆಗಸ್ಟ್ ನಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ಪ್ರಶ್ನಿಸಿ ಒಟ್ಟು ಏಳು ಮನವಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಆರಂಭದಲ್ಲಿ  ವಿವಿಧ ತಾಂತ್ರಿಕ ದೋಷದ ಆಧಾರ ಮೇಲೆ ನಾಲ್ಕು ಅರ್ಜಿಗಳು ತಿರಸ್ಕøತಗೊಂಡಿದ್ದವು ಎಂದು ಜೈಶಂಕರ್ ಮತ್ತು ಠಾಕೋರ್ ಪರ ವಕೀಲ ಚಿತ್ರಜೀತ್ ಉಪಾಧ್ಯಾಯ ಹೇಳಿದ್ದಾರೆ. 

ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಲಾಗುವುದು ಎಂದು ಅರ್ಜಿದಾರರಾದ ಕಾಂಗ್ರೆಸ್ ನಾಯಕರÀ ಪರ ವಕೀಲ ಮತ್ತು ಕಾಂಗ್ರೆಸ್ ಮುಖಂಡ ಬಿ ಎಂ ಮಾಂಗುಕಿಯಾ ತಿಳಿಸಿದ್ದಾರೆ.