ಬೆಂಗಳೂರು 10: ಜಾರಿ ನಿದರ್ೇಶನಾಲಯದ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಉದ್ಯಮಿಯೊಬ್ಬರಿಂದ ಚಿನ್ನದ ಗಟ್ಟಿ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಇಂದು ಸಿಸಿಬಿ ಎದುರು ಹಾಜರಾದರು.
ಜನಾರ್ದನ ರೆಡ್ಡಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ನೋಟಿಸ್ ಜಾರಿ, 48 ಗಂಟೆಗಳ ಕಾಲಾವಕಾಶ ನೀಡಿತ್ತುೆ. ಅದರಂತೆ ಇಂದು ತಮ್ಮ ವಕೀಲರೊಂದಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಆಂಬಿಡೆಂಟ್ ಕಂಪೆನಿ ಮಾಲೀಕ ಸೈಯದ್ ಫರೀದ್ ಅಹಮದ್ ಹಾಗೂ ಇನ್ನಿತರರ ವಿರುದ್ಧ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜನಾರ್ದನ ರೆಡ್ಡಿ ಅವರಿಗೆ ನೋಟಿಸ್ನಲ್ಲಿ ಸೂಚಿಸಲಾಗಿದೆ.
ಜನಾರ್ದನ ರೆಡ್ಡಿಯವರು ಸೈಯದ್ ಅಹಮದ್ ಫರೀದ್ ಬಳಿಯಿಂದ ಪಡೆದುಕೊಂಡಿದ್ದಾರೆ ಎನ್ನಲಾದ 57 ಕೆ.ಜಿ ಚಿನ್ನದ ಗಟ್ಟಿಯ ಮೂಲದ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಚಿನ್ನದ ಗಟ್ಟಿಗಳು ಈಗ ಯಾರ ಬಳಿ ಇವೆ ಎಂಬುದರ ಬಗ್ಗೆಯೂ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈಗಾಗಲೇ ರೆಡ್ಡಿ ಅವರ ಪಾರಿಜಾತ ಅಪಾಟರ್್ಮೆಂಟ್ನ ಫ್ಲ್ಯಾಟ್, ಬಳ್ಳಾರಿ ನಿವಾಸ, ಓಎಂಸಿ ಕಂಪೆನಿ ಕಚೇರಿ, ಸಂಬಂಧಿಕರ ವಿಳಾಸಗಳಲ್ಲಿ ಶೋಧ ನಡೆಸಿದ್ದು ಹಲವು ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿಯೂ ಸಹ ಜನಾರ್ದನ ರೆಡ್ಡಿಗೆ ಸಿಸಿಬಿ ಪೊಲೀಸರ ತಂಡ ಶೋಧ ನಡೆಸಿದೆ.
57 ಕೆ.ಜಿ ಚಿನ್ನವನ್ನು ರೆಡ್ಡಿ ಸೇರಿದಂತೆ ಇತರೆ ಆರೋಪಿಗಳು ಯಾವ ಉದ್ದೇಶಕ್ಕೆ ಬಳಸಿದ್ದರು ಎಂಬ ಅಂಶದ ಬಗ್ಗೆಯೂ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇಡಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಕೋಟೆ ಪ್ರದೇಶದಲ್ಲಿರುವ ಚಿನ್ನಾಭರಣ ಅಂಗಡಿ ಮಾಲೀಕ ಎಸ್.ರಮೇಶ ನಿವಾಸದ ಮೇಲೆ ಸಿಸಿಬಿ ಪೊಲೀಸ್ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸಿಸಿಬಿ ಎಸಿಪಿ ಮಂಜುನಾಥ್ ಚೌಧರಿ ನೇತೃತ್ವದ 8 ಮಂದಿ ಅಧಿಕಾರಿಗಳ ತಂಡ ದಾಳಿ ನಡೆಸಿ ತಪಾಸಣೆ ನಡೆಸಿದೆ.
ಇಂದು ಜನಾರ್ದನ ರೆಡ್ಡಿ ವಿಚಾರಣೆಗೆ ಹಾಜರಾಗದಿದ್ದರೆ ನಾಳೆ ಹಾಜರಾಗುವ ಸಾಧ್ಯತೆ ಇದೆ.