ಜೈನ ಕವಿಗಳು,ಕನ್ನಡ ಸಾಹಿತ್ಯದ ಹರಿಕಾರರು: ಪ್ರಭು ಸೊಪ್ಪಿನ
Jain poets, pioneers of Kannada literature: Prabhu Soppina
ಹೂವಿನಹಡಗಲಿ 18: ಕ್ರಿ.ಪೂ.4ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಜೈನಧರ್ಮ ರಾಜಾಶ್ರಯ ಒಪ್ಪಿಕೊಂಡು ಬೇರೂರಿತು. ಅಹಿಂಸೆ ಪ್ರತಿಪಾದನೆ ಮಾಡುತ್ತಾ ಉತ್ತಮ ಧಾರ್ಮಿಕತೆಯನ್ನು ಪ್ರಪಂಚಕ್ಕೆ ವಿಸ್ತರಿಸಲು ಜೈನ ಗುರುಗಳು ಪ್ರೇರಣೆ ನೀಡಿದರು. ಅದರ ಭಾಗವಾಗಿ ಜೈನ ಕವಿಗಳು ವಿಪುಲ ಸಾಹಿತ್ಯವನ್ನು ಕನ್ನಡ ಭಾಷೆಯಲ್ಲಿ ಸೃಜಿಸಿದರು. ಜೈನ ಕವಿಗಳೇ ಕನ್ನಡ ಸಾಹಿತ್ಯದ ಹರಿಕಾರರಾಗಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಪ್ರಭು ಸೊಪ್ಪಿನ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ತಾಲೂಕಿನ ವರಕನಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಮತಿ ಜೈನರ ಸೋಗಿರಮ್ಮ ಸ್ಮರಣಾರ್ಥ ದತ್ತಿ, ಶ್ರೀಮತಿ ಪುಲ್ಲಿಬಾಯಿ ಸಗನ್ ಮಲ್ ಜಿ ಸ್ಮರಣಾರ್ಥ ದತ್ತಿ, ಶ್ರೀಗುಂಜಾಳ ರುಕ್ಮಪ್ಪ ಸ್ಮರಣಾರ್ಥದತ್ತಿ, ಶ್ರೀಜೆ.ಜಿನ್ನಪ್ಪನವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ’ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ’ ಹಾಗೂ ’ಜೈನ ಧರ್ಮ ನಡೆದು ಬಂದ ದಾರಿ’ ವಿಷಯ ಕುರಿತು ಮಾತನಾಡಿದರು.
24 ತೀರ್ಥಂಕರುಗಳಲ್ಲಿ ಪ್ರಮುಖನಾದವನು ಮಹಾವೀರ. ಪಂಪ,ಪೊನ್ನ,ರನ್ನ ಇವರು ಕನ್ನಡ ಸಾಹಿತ್ಯದ ರತ್ನತ್ರಯರು. ಪಂಪ ಆದಿಕವಿ ಎಂದೇ ಪ್ರಖ್ಯಾತನಾಗಿದ್ದಾನೆ ಎಂದರು. ರಫಿ ಅಹಮದ್ ಖವಾಸ್ ಮಾತನಾಡಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಕನ್ನಡ ಸಾಹಿತ್ಯ ಪರಂಪರೆಯ ಅರಿವನ್ನು ಇಂಥ ಉಪನ್ಯಾಸಗಳ ಮೂಲಕ ಹೆಚ್ಚಿಸುತ್ತಿರುವುದಕ್ಕೆ ಕಸಾಪ ತಾಲೂಕು ಘಟಕವನ್ನು ಅಭಿನಂದಿಸಿದರು. ಕನ್ನಡ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ ಶಿಕ್ಷಕ ಹಡಗಲಿ ಬಸವರಾಜ ಕನ್ನಡ ಗೀತೆಯನ್ನು ಪ್ರಸ್ತುತಪಡಿಸಿದರು. ಸಿಆರ್ ಪಿ ಮಂಜುನಾಥ, ’ಸಿರಿ ಕನ್ನಡ’ ಪ್ರತಿಭಾ ಪರೀಕ್ಷೆಯ ಸಂಯೋಜಕ ಆನಂದ್,ಶಾಲೆಯ ಶಿಕ್ಷಕ ಸಿಬ್ಬಂದಿ ಇದ್ದರು. ಅಧ್ಯಕ್ಷತೆಯನ್ನು ಕಸಾಪ ತಾಲೂಕು ಘಟಕದ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಿರಿ ಕನ್ನಡ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಶಾಲೆಯ 109 ವಿದ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಲಾಯಿತು. ಉಪನ್ಯಾಸ ನೀಡಿದ ಪ್ರಭು ಸೊಪ್ಪಿನ ಹಾಗೂ ಅತಿಥಿಗಳನ್ನು ಶಾಲೆಯ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು. ಪ್ರಾರಂಭದಲ್ಲಿ ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು.ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಗೀತ ಶಿಕ್ಷಕ ಬಿ.ಯುವರಾಜಗೌಡ ಸ್ವಾಗತಿಸಿದರು. ಪ್ರಾಚಾರ್ಯರಾದ ಸರಿತಾ ಸೊಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು.ದೈಹಿಕ ಶಿಕ್ಷಕ ನಾಗರಾಜ ವಂದಿಸಿದರು. ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಮೂಹಿಕ ನೃತ್ಯಗಳು ಎಲ್ಲರ ಮನ ಸೂರೆಗೊಂಡಿತು.ಕನ್ನಡ ಶಿಕ್ಷಕ ರಾಜಪ್ಪ ಕಾರ್ಯಕ್ರಮ ನಿರ್ವಹಿಸಿದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 