ರಾಯಬಾಗ 25: ಸಕಲ ಧರ್ಮಗಳಲ್ಲಿ, ಸಮುದಾಯಗಳಲ್ಲಿ ಮತ್ತು ಸಕಲ ಜೀವಿಗಳಲ್ಲಿ ಸಮಾನತೆಯನ್ನು ಕಾಣುವುದೇ ಜೈನ ಧರ್ಮದ ಮೂಲ ಪ್ರೇರಣೆ. ಅಂತಹ ಜೈನಧರ್ಮದ ತೀರ್ಥಂಕರರಿಂದ ಯಾವಾಗ ಓಂಕಾರದ ದಿವ್ಯ ಧ್ವನಿ ಹೊರಹೊಮ್ಮಿತೊ ಅಲ್ಲಿಂದಲೇ ಜೈನ ಸಾಹಿತ್ಯ ಹುಟ್ಟಿತು ಎಂದು ಸಮ್ಮೇಳನದ ಸವರ್ಾಧ್ಯಕ್ಷರು ಹಾಗೂ ಮೂಡಬಿದರಿ ಜೈನಮಠದ ಚಾರುಕೀತರ್ಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.
ರವಿವಾರ ಪಟ್ಟಣದ ಮಹಾವೀರ ಭವನದಲ್ಲಿ ಕನರ್ಾಟಕ ಜೈನ ಸಾಹಿತ್ಯ ಪರಿಷತ್ದಿಂದ ಹಮ್ಮಿಕೊಂಡಿದ್ದ ಅಖಿಲ ಕನರ್ಾಟಕ 5ನೇ ಕನ್ನಡ ಜೈನ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಾಹಿತ್ಯವು ರಕ್ಕಸನಾಗಿರುವಂತಹ ವ್ಯಕ್ತಿಯನ್ನು ಮಾನವನ್ನಾಗಿ ಮಾಡಿ, ದೈವತ್ವಕ್ಕೆ ಏರಿಸಿದೆ. ನಮ್ಮ ಭಾಷೆ, ಭಾವನೆ ಮತ್ತು ಕಂಠವನ್ನು ಶುದ್ಧಿ ಮಾಡಿದೆ ಎಂದರು. 9ನೇ ಶತಮಾನದಿಂದ 12 ಶತಮಾನದ ವರೆಗಿನ ಕಾಲವು ಜೈನ ಸಾಹಿತ್ಯದ ಸುವರ್ಣ ಯುಗ ಎಂದು ಕರೆಯುತ್ತಾರೆ. ಅಂದಿನ ರಾಜರು ಜೈನ ಕವಿಗಳಿಗೆ ರಾಜಾಶ್ರಯವನ್ನು ನೀಡಿ, ಜೈನ ಸಾಹಿತ್ಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದರಿಂದ ಅಂದು ಜೈನ ಸಾಹಿತ್ಯ ಉಚ್ಛಾಯಸ್ಥಿತಿಯಲ್ಲಿತ್ತು ಎಂದು ಹೇಳಿದರು.
ಸಾಹಿತಿಗಳಾಗುವುದಕ್ಕಿಂತ ಸಾಹಿತ್ಯವನ್ನು ಬರೆದಂತ ವಿದ್ವಾಂಸರ ಕೃತಿಗಳನ್ನು ಓದಿ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದು ತುಂಬಾ ಮಹತ್ವವಿದೆ. ಸಾಹಿತ್ಯ ಸಮ್ಮೇಳನ ನಿಂತ ನೀರಾಗದೇ, ಹರಿಯುವ ನೀರಾಗಬೇಕೆಂದರು. ಸಾಹಿತ್ಯ ಮನುಷ್ಯನನ್ನು ಎತ್ತರಕ್ಕೆ ಬೆಳೆಸುತ್ತದೆ. ಅಕ್ಷರದಲ್ಲಿ ಉಳಿಸಿದ ವಿದ್ಯೆ ಸದಾ ಶಾಶ್ವತವಾಗಿರುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಧಾರವಾಡ ಕ.ವಿ.ವಿ ಜೈನ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್.ಪಿ.ಪಾಟೀಲ ಅವರು, ಕನ್ನಡಕ್ಕೆ ಜೈನ ಸಾಹಿತ್ಯದ ಕೊಡುಗೆ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಡಿ.ಎಮ್.ಐಹೊಳೆ ಮಾತನಾಡಿ, ಹಿಂದಿನ ರಟ್ಟರ ಕಾಲದಲ್ಲಿ ವಿದ್ಯಾಕಾಶಿ ಎನ್ನಿಸಿಕೊಂಡಿದ್ದ ಹಾಗೂ ಜೈನ ತೀರ್ಥಂಕರ ವಿಗ್ರಹಗಳು ದೊರಕಿದ ಪುಣ್ಯ ಭೂಮಿ ರಾಯಬಾಗ ಪಟ್ಟಣದಲ್ಲಿ ಇಂದು ಕನ್ನಡ ಜೈನ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ನಮ್ಮೇಲ್ಲರಿಗೂ ಹೆಮ್ಮೆ ತಂದಿದೆ ಎಂದು ಹೇಳಿದರು.
ಕನರ್ಾಟಕ ಜೈನ ಸಾಹಿತ್ಯ ಪರಿಷತ್ ಸಂಸ್ಥಾಪಕ ಹಾಗೂ ರಾಯಬಾಗ, ಕೊಲ್ಲಾಪೂರ, ಹೊಸೂರ ಜೈನಮಠದ ಡಾ.ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿಯವರು ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಲಕ್ಷ್ಮೀಸೇನ ಶಿಕ್ಷಣ ಸಂಸ್ಥೆಯ ಕಾರ್ಯದಶರ್ಿ ಶೀತಲ ಬೆಡಕಿಹಾಳೆ ವಹಿಸಿದ್ದರು. ಕ.ಜೈ.ಸಾ.ಪರಿಷತ್ ಕಾರ್ಯದಶರ್ಿ ಜಲತ್ಕುಮಾರ ಪುಣಜಗೌಡರ ಸ್ವಾಗತಿಸಿ, ಕನ್ನಡ ಜೈನ ಸಾಹಿತ್ಯ ಬೆಳವಣಿಗೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿ.ಪಂ.ಸದಸ್ಯ ಪ್ರಣಯ ಪಾಟೀಲ, ಬೆಳಗಾವಿ ಭರತೇಶ ಶಿಕ್ಷಣ ಸಂಸ್ಥೆ ನಿದರ್ೇಶಕ ವಿನೋದ ದೊಡ್ಡಣ್ಣವರ, ಯುವ ಧುರೀಣ ತ್ರಿಕಾಲ ಪಾಟೀಲ, ಡಿ.ಸಿ.ಸದಲಗಿ, ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ, ಆಯ್.ಡಿ.ಪಾಟೀಲ, ಅಣ್ಣಾಸಾಹೇಬ ಹವಲೆ, ಸತ್ಯಕುಮಾರ ಬಿರಾಜ, ಪಾರೀಶ ಉಗಾರೆ, ಸಾಹಿತಿ ಜ್ಯೋತಿ ಹೊಸೂರ, ಬಾಳಕೃಷ್ಣ ಜಂಬಗಿ, ಸಂಜೀವ ಬಡೋರೆ, ಭರತೇಶ ಪಾಟೀಲ, ರತ್ನಂಜಯ ಕದ್ದು, ಧರ್ಮಣ್ಣಾ ಪಾಟೀಲ, ಎಲ್.ಬಿ.ಜೌಗಲಾ, ಶೈಲೇಂದ್ರ ಪಾಟೀಲ, ಶಶಿಕಾಂತ ಕುಲಗುಡೆ ಸೇರಿದಂತೆ ಜೈನ ಸಮುದಾಯದ ಶ್ರಾವಕ, ಶ್ರಾವಕಿಯರು ಇದ್ದರು.
ಮಹಾವೀರ ಪಾಟೀಲ, ವೀಣಾ ಹುಳಬತ್ತೆ ನಿರೂಪಿಸಿದರು, ಎ.ಟಿ.ಸವದತ್ತಿ ವಂದಿಸಿದರು.
ಬೆಳಿಗ್ಗೆ ಜೈನ ಮಠದಲ್ಲಿ ಆದಿನಾಥ ತೀರ್ಥಂಕರರಿಗೆ ಸ್ವಾಮೀಜಿಯವರು ಪಂಚಾಮೃತ ಅಭಿಷೇಕ ಮಾಡಿ, ಧ್ಜಜಾರೋಹಣ ನೆರವೇರಿಸಿದರು. ನಂತರ ಪಟ್ಟಣದಲ್ಲಿ ಗ್ರಂಥದಿಂಡಿ ಹಾಗೂ ಮೆರವಣಿಗೆ ನಡೆಯಿತು.
ಭಟ್ಟಾರಕರತ್ನ ಡಾ.ಲಕ್ಷ್ಮೀಸೇನ ಮಹಾಸ್ವಾಮಿ ಜೀವನ ಮತ್ತು ಕಾರ್ಯ ಹಾಗೂ ಪದ್ಮನಂದಿ ಆಚಾರ್ಯ ವಿರಚಿತ ಪದ್ಮನಂದಿ ಶ್ರಾವಕಾಚಾರ ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.