ಲೋಕದರ್ಶನ ವರದಿ
ಶಿರಹಟ್ಟಿ 12: ಜಗಜ್ಯೋತಿ ಬಸವೇಶ್ವರರ 886ನೇ ಜಯಂತಿಯ ಅಂಗವಾಗಿ ಪಟ್ಟಣದ ಬಡಿಗೇರ ಓಣಿಯ ಶರಣ ಬಸವೇಶ್ವರರ ದೇವಸ್ಥಾನದಿಂದ ಬಸವೇಶ್ವರರ ಭಾವಚಿತ್ರ ಜೊತೆಗೆ ಐದು ಜೋಡಿ ಎತ್ತುಗಳೊಂದಿಗೆ ಮೆರವಣಿಗೆಯನ್ನು ಆರಂಭಿಸಲಾಯಿತು.
ಪಟ್ಟಣದ ಬಡಿಗೇರ ಓಣಿಯಿಂದ ಕಪ್ಪತ್ತನವರ ವೃತ್ತ, ಕೆಳಗೇರಿ, ಚೌಡಿ, ಗಾಂಧೀ ವೃತ್ತ, ಬಸವೇಶ್ವರರ ವೃತ್ತ ಮ್ಯಾಗೇರಿ ಕುರಬರ ಓಣಿಯ ವಾಲ್ಮೀಕಿ ವೃತ್ತದ ಮೂಲಕ ಬಡಿಗೇರ ಓಣಿಗೆ ಮೆರವಣಿಗೆ ಬಂದು ಮೆರವಣಿಗೆ ಸಂಪನ್ನವಾಯಿತು. ಮೆರವಣಿಗೆಯಲ್ಲಿ ಐದು ಜೋಡಿ ಎತ್ತುಗಳ ಮೆರವಣಿಗೆಯಲ್ಲಿ ಅತ್ಯಂತ ಶೃಂಗಾರಗೊಳಿಸಿ ಮೆರವಣಿಗೆಯನ್ನು ಆರಂಭಗೊಳಿಸಲಾಯಿತು. ಜಾಂಜ ಮೇಳದ ಅರ್ಭಟದೊಂದಿಗೆ ಮೆರವಣಿಗೆ ಸಾಗಿತು. ಪಟ್ಟಣದ ಗಾಂದೀ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಬಸವೇಶ್ವರರ ಬಾವಚಿತ್ರಕ್ಕೆ ಹೋಮಳೆಯಯನ್ನು ಸುರಿಸಲಾಯಿತು. ದಾರಿಯುದ್ದಕ್ಕೂ ಪಟಾಕಿಗಳನ್ನು ಸಿಡಿಸಿ ಬಸವೇಶ್ವರ ಮಹಾರಾಜಕಿ ಜೈ ಎನ್ನುವ ಘೋಷಣೆಯನ್ನು ಮೊಳಗಿದವು.
ತಾಲೂಕಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಫ್.ಎಸ್.ಅಕ್ಕಿ ಬಸವಣ್ಣನವರ ಕುರಿತು ಮಾತನಾಡಿದರು. ತಾಲೂಕಾ ಕಸಾಪ ಅಧ್ಯಕ್ಷ ಎಂ.ಕೆ.ಲಮಾಣಿ, ಸಿ.ಸಿ.ನೂರಶೆಟ್ಟರ, ಎಚ್.ಎಂ.ದೇವಗಿರಿ, ಡಾ: ಟಿ.ಎಂ.ಮಹೇಂದ್ರಕರ, ಉಮೇಶ ಗಾಣಿಗೇರ, ಬಸವರಾಜ ಭೋರಶೆಟ್ಟರ, ಪ್ರಕಾಶ ಭೋರಶೆಟ್ಟರ, ಅಪ್ಪಣ್ಣ ಕುಬೇರ, ಮುತ್ತು ಮಜ್ಜಗಿ, ಮಹೇಶ ಪಟ್ಟಣಶೆಟ್ಟರ, ಬಸವರಾಜ ಅಡರಕಟ್ಟಿ ಮುಂತಾದವರು ಉಪಸ್ಥಿತರಿದ್ದರು.