ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ
Jagadguru Sri Renukacharya Jayanti Celebration
ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ
ತಾಳಿಕೋಟಿ, 12; ಪಟ್ಟಣದ ಪ್ರತಿಷ್ಠಿತ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವೀರಶೈವ ಧರ್ಮ ಸಂಸ್ಥಾಪಕರು ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತೋತ್ಸವವನ್ನು ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಅವರು ಮಾತನಾಡಿ ಜಗದ್ಗುರು ರೇಣುಕಾಚಾರ್ಯ ಅವರು ಸಿದ್ಧಾಂತ ಶಿಖಾಮಣಿಯಂತಹ ಮಹಾನ್ ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದಾರೆ. ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆ ಬದುಕನ್ನು ಅವರು ಬೋಧಿಸಿದ್ದಾರೆ ಅವರ ಬದುಕಿನ ಸಿದ್ಧಾಂತವನ್ನು ಪಾಲಿಸಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು. ಮುಖ್ಯಗುರುಗಳಾದ ಸಂತೋಷ ಪವಾರ,ಶಿಕ್ಷಕರಾದ ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಭೀಮನಗೌಡ ಸಾಸನೂರ, ರಸೂಲಸಾ ತುರ್ಕನಗೇರಿ, ರವಿಕುಮಾರ ಮಲ್ಲಾಬಾದಿ, ಬಸವರಾಜ ಸವದತ್ತಿ, ಮೌಲಾಲಿ ವಾಲಿಕಾರ, ಸಿದ್ದನಗೌಡ ಮೂದನೂರು, ಶರಣಗೌಡ ಕಾಚಾಪುರ, ರೂಪಾ ಪಾಟೀಲ, ಶಿವಲೀಲಾ ಚುಂಚನೂರ, ದೇವಿಂದ್ರ ಗುಳೆದ, ಅನಿತಾ ಚೌದ್ರಿ, ಅಂಬುಜಾ ಹಜೇರಿ, ಶಿವಕುಮಾರ ಕುಂಬಾರ, ರಾಜಬಿ ಬಿದರಿ, ಕಲ್ಪನಾ ಹಜೇರಿ, ನಾಗರತ್ನ ಮೈಲೇಶ್ವರ, ಹೇಮಾ ಕೊಡೆಕಲ್, ನಾಗಶ್ರೀ ನಾಯಕ, ಮೇಘಾ ಪಾಟೀಲ, ಮುಬಿನ ಮುರಾಳ, ತನುಶ್ರೀ ಮಹೇಂದ್ರಕರ, ಶಂಕ್ರಮ್ಮ, ಮುಬಾರಕ ಬನಹಟ್ಟಿ ಹಾಗೂ ಸರ್ವ ಗುರು ಬಳಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 