ಜಾತ್ರಿ ಕಾದಂಬರಿ ಹಳ್ಳಿಯ ವಾಸ್ತವ ಚಿತ್ರಣಕ್ಕೆ ಕನ್ನಡಿ ಆಗಿದೆ- ಪ್ರೊ. ಮುಕುಂದ ರಾಜ್
ಧಾರವಾಡ. 14 : ಧರಣೇಂದ್ರ ಕುರಕುರಿ ರಚಿಸಿದ ಕಾದಂಬರಿ ಜಾತ್ರಿ ಸ್ವಾತಂತ್ರ್ಯ ಪೂರ್ವದಲ್ಲಿ ಹಳ್ಳಿಗಳ ವ್ಯವಸ್ಥೆ ಬ್ರೀಟಿಷರ ಪರವಾಗಿ ಹಳ್ಳಿಯ ಪ್ರಮುಖರಿದ್ದರೆ, ಜನ ಸಾಮಾನ್ಯರು ಭಯದಿಂದ ಬದುಕುತ್ತಿರುವ ಚಿತ್ರಣವಿದೆ.
ಸ್ವಾತಂತ್ರ್ಯ ನಂತರದ ಹಳ್ಳಿಗಳ ಪರಿಸ್ಥಿತಿ ಮೌಲ್ಯಗಳ ಅಧ:ಪಥಣ ರಾಜಕೀಯ ವ್ಯವಸ್ಥೆ ಕಾರಣವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎನ್ ಎಸ್ ಮುಕುಂದರಾಜ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರಿ್ಡಸಿದ್ದ ಕಾದಂಬರಿ ಬಿಡುಗಡೆ ಗೊಳಿಸಿ ಮಾತನಾಡಿದರು. ಜಾತ್ರಿ ಕಾದಂಬರಿಯಲ್ಲಿ ಹಳ್ಳಿಯ ವಾತಾವರಣವನ್ನು ವಾಸ್ತವವಾಗಿರುವದನ್ನು ಕಾಣಬಹುದು. ಧಾರವಾಡದ ಭಾಷೆ, ಕಥಾ ನಿರೂಪಣೆ, ಅಭಿವ್ಯಕ್ತಿ ಚೆನ್ನಾಗಿ ವ್ಯಕ್ತವಾಗಿದೆ. ಎಲ್ಲರೂ ಓದಬೇಕಾದ ಕಾದಂಬರಿ ಇದು ಎಂದು ಹೇಳಿದರು.
ಜಾತ್ರಿ ಕಾದಂಬರಿ ಯನ್ನು ಸಾಹಿತಿಗಳಾದ ವೆಂಕಟೇಶ್ ಮಾಚಕನೂರ ಅವರು ಕಾದಂಬರಿ ಯಲ್ಲಿ ವ್ಯಕ್ತವಾದ ಸೂಕ್ಷ್ಮ ಸಂವೇದನೆಗಳನ್ನು ಉದಾಹರಣೆಗಳೊಂದಿಗೆ ವಿಶ್ಲೇಷಿಸಿದರು. ಕಾದಂಬರಿಕಾರರಾದ ಪ್ರೊ. ಧರಣೇಂದ್ರ ಕುರಕುರಿ ಅವರು ಕಾದಂಬರಿ ಹಿನ್ನೆಲೆಯನ್ನು ವಿವರಿಸಿದರು. ಡಾ. ಕೆ ಬಿ ಪವಾರ ಜಾತ್ರಿ ಕಾದಂಬರಿಯಲ್ಲಿ ಬಳಸಿಕೊಂಡ ಜನಪದ ಸಾಹಿತ್ಯದ ಓಚಿತ್ಯ ವನ್ನು ಕುರಿತು ಮಾತನಾಡಿದರು.ಕಾದಂಬರಿಯ ಪ್ರಕಾಶಕರಾದ ಸವಿತಾ ಯಾಜಿ ಪ್ರಕಾಶಕರ ಮತ್ತು ಬರಹಗಾರರ ಹಾಗೂ ಓದುಗರ ಸಂಭಂದವನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಲಿಂಗರಾಜ ಅಂಗಡಿ ಅವರು ಸಾಹಿತ್ಯ ಪರಿಷತ್ತು ಸಾಹಿತಿಗಳು ರಚಿಸಿದ ಪ್ರತಿಗಳ ಬಿಡುಗಡೆಗೆ ಸದಾ ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು. ಮಹಾಂತೇಶ ನರೇಗಲ್ ಪ್ರಾರ್ಥಿಸಿದರು. ಪ್ರೊ. ಕೆ ಎಸ್ ಕೌಜಲಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜಿನದತ್ ಹಡಗಲಿ ವಂದಿಸಿದರು. ಶ್ರೀಮತಿ ತಾರಾ ಹೆಗಡೆ ನಿರೂಪಿಸಿದರು. ಸತೀಶ್ ಕುಲಕರ್ಣಿ, ಪದ್ಮಾ ಚಿನ್ಮಯಿ , ಎಸ್ ಎಮ್ ದಾನಪ್ಪಗೌಡರ, ಶಾಂತವೀರ ಬೆಟಗೇರಿ, ಶಾಂತರಾಜ ಮಲ್ಲಸಮುದ್ರ, ಚೆನ್ನಪ್ಪ ಅಂಗಡಿ, ಡಾ. ಬಸು ಬೆವಿನಗಿಡದ, ಸರಸ್ವತಿ ಕಳಸದ, ಡಾ . ಹೇಮಾ ಪಟ್ಟಣಶೆಟ್ಟಿ, ವಿದ್ಯಾ ವಂಟಮುರಿ, ಸಿದ್ದಮ್ಮ ಅಡಿವೆನ್ನವರ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಎಸ್ ಎಚ್ ಪ್ರತಾಪ್, ಎಸ್ ಕೆ ಕೊಪ್ಪಾ, ನಾಗೇಂದ್ರ ಕೆಂಪಣ್ಣವರ, ಪ್ರೊ. ಎಸ್ ಎಮ್ ಸಾತ್ಮಾರ, ಎಫ ಬಿ ಕಣವಿ, ಗಂಗಾಧರ ಗಾಡದ ಮುಂತಾದವರು ಉಪಸ್ಥಿತರಿದ್ದರು.