ನೆರೆ ಹೊರೆಯವರೊಂದಿಗೆ ಸ್ನೇಹ ಭಾವ ಹರಡುವ ಅಭಿಯಾನಕ್ಕೆ ಜೆಆಯ್‌ಎಚ್ ಚಾಲನೆ
JYH launches campaign to spread friendship with neighbors
ಬೆಳಗಾವಿ 21: ದೇಶದಾದ್ಯಂತ ಜಮಾತ್-ಎ-ಇಸ್ಲಾಮಿ ಹಿಂದ್ ಅಧ್ಯಕ್ಷ ಸಯ್ಯದ್ ಸಾದತುಲ್ಲಾ ಹುಸೈನಿ ಅವರು ಆದರ್ಶ ನೆರೆಯವರು ಆದರ್ಶ ಸಮಾಜ” ಎಂಬ ನುಡಿಗಟ್ಟಿನಡಿ ಅಕ್ಕ ಪಕ್ಕದವರ ಹಕ್ಕುಗಳ ಅಭಿಯಾನ ಎಂಬ ಹತ್ತು ದಿನಗಳ ದೇಶವ್ಯಾಪಿ ಅಭಿಯಾನಕ್ಕೆ 21ರಂದು ಚಾಲನೆ ನೀಡಲಾಯಿತು. ಅಕ್ಕ ಪಕ್ಕದವರೊಂದಿಗೆ ಉತ್ತಮ ವರ್ತನೆ ಹಾಗೂ ಸಮುದಾಯದ ಬಾಂಧವ್ಯವನ್ನು ಬಲಪಡಿಸುವುದೇ 30ರವರೆಗೆ ನಡೆಯಲಿರುವ ಈ ಅಭಿಯಾನದ ಉದ್ದೇಶವಾಗಿದೆ. ಇಸ್ಲಾಂ ಅಕ್ಕ ಪಕ್ಕದವರ ಹಕ್ಕುಗಳಿಗೆ ಅಪಾರ ಮಹತ್ವ ನೀಡುತ್ತದೆ. ಇದು ಸಮಗ್ರ ಸಮಾಜ ನಿರ್ಮಾಣದ ಪ್ರಮುಖ ಆಧಾರಸ್ತಂಭವಾಗಿದೆ. ಕುರ್‌ಆನ್ ಸಮೀಪವಾಸಿಗಳಿಗೆ ಮಾತ್ರವಲ್ಲದೆ, ಸಮಯಾತೀತ ನೆರೆ ಹೊರೆ, ಜೊತೆಗಾರರಾದ ಕಚೇರಿ ಸಹೋದ್ಯೋಗಿಗಳು, ಸಹ ಪ್ರಯಾಣಿಕರು, ಕಾಲ್ನಡಿಗೆ ಜೊತೆಗಾರರನ್ನು ಸಹ ಮಮತೆಯುತವಾಗಿ ವರ್ತಿಸಬೇಕು ಎಂದು ಸ್ಪಷ್ಟವಾಗಿ ಹೇಳುತ್ತದೆ. ಈ ಅಭಿಯಾನದ ಮೂಲಕ ನಾವು ಮುಸ್ಲಿಮರಿಗೆ ಈ ಮಹತ್ವದ ಉಪದೇಶಗಳನ್ನು ಸ್ಮರಿಸುವಂತೆ ಮಾಡುತ್ತೇವೆ ಮತ್ತು ಅವರು ಆದರ್ಶ ನೆರೆ ಹೊರೆಯವರಾಗಿ ಸಮಾಜದ ಮುಂದೆ ಇಸ್ಲಾಂನ ನಿಜವಾದ ರೂಪವನ್ನು ಪ್ರದರ್ಶಿಸುವಂತೆ ಪ್ರೇರೇಪಿಸುತ್ತೇವೆ.
ಸಯ್ಯದ್ ಸಾದತುಲ್ಲಾ ಸೌಹಾರ್ದಪೂರ್ಣ ನೆರೆ ಹೊರೆಯವರ ಸಂಬಂಧಗಳ ಮೇಲೆ ನಿರ್ಮಾಣವಾದ ಸಮಾಜ ಸ್ವಾಭಾವಿಕವಾಗಿ ಆದರ್ಶ ಸಮಾಜವಾಗುತ್ತದೆ. ಅಕ್ಕ ಪಕ್ಕದವರು ಪರಸ್ಪರ ದಯೆ, ಕ್ಷಮೆ ಮತ್ತು ನ್ಯಾಯದೊಂದಿಗೆ ವರ್ತಿಸಿದಾಗ ಅದು ಸಮಗ್ರ ಸಮುದಾಯಗಳ ರೂಪಾಂತರಕ್ಕೆ ಕಾರಣವಾಗುವ ಅಲೆ ಪರಿಣಾಮವನ್ನು ಉಂಟುಮಾಡುತ್ತದೆ. ಈ ಅಭಿಯಾನವು ಅಕ್ಕ ಪಕ್ಕದವರ ನಡುವಿನ ಸಂಘರ್ಷಗಳನ್ನು ಪರಿಹರಿಸುವುದಷ್ಟೇ ಅಲ್ಲದೆ, ಇಸ್ಲಾಮಿನ ಕರುಣೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೌಲ್ಯಗಳನ್ನು ಬಲವಾಗಿ ಸಮಾಜದ ಮುಂದೆ ತೋರಿಸುವುದಾಗಿ ನಾವು ನೀರೀಕ್ಷಿಸುತ್ತೇವೆ. ನೆರೆ ಹೊರೆಯವರ ಹಕ್ಕುಗಳ ಅಭಿಯಾನದ ರಾಷ್ಟ್ರೀಯ ಸಂಯೋಜಕ ಮೊಹಮ್ಮದ್ ಅಹ್ಮದ್ ಅವರು, ನಗರೀಕರಣದ ಬೆಳವಣಿಗೆಯೊಂದಿಗೆ ವ್ಯಕ್ತಿಕೇಂದ್ರಿತ ಜೀವನಶೈಲಿ ಹೆಚ್ಚಾಗಿದ್ದು, ಅಕ್ಕ ಪಕ್ಕದವರ ಸಂಬಂಧಗಳು ನಿರ್ಲಕ್ಷ್ಯಗೊಳ್ಳುತ್ತಿರುವ ವಿಷಯವನ್ನು ಈ ಅಭಿಯಾನ ಸ್ಪರ್ಶಿಸುತ್ತದೆ ಎಂದು ವಿವರಿಸಿದರು. ಪರಸ್ಪರ ಕರುಣೆ, ಸಹಕಾರ, ಸ್ವಚ್ಛತೆ ಮತ್ತು ಸಂಚಾರ ನಿಯಮಗಳ ಗಳಂತಹ ಶಿಸ್ತಿನ ಮೌಲ್ಯಗಳನ್ನು ಇಸ್ಲಾಮಿಕ್ ಸಾಮಾಜಿಕ ಜವಾಬ್ದಾರಿಗಳ ಭಾಗವಾಗಿ ಉತ್ತೇಜಿಸುವುದು ಇದರ ಉದ್ದೇಶವೆಂದು ಅವರು ಹೇಳಿದರು.
ಅಭಿಯಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಧರ್ಮಗಳ ಅಕ್ಕ ಪಕ್ಕದವರೊಂದಿಗೆ ಸಭೆಗಳು, ಚಹಾ ಕೂಟಗಳು, ಮಹಿಳೆಯರು ಮತ್ತು ಯುವಕರಿಗಾಗಿ ವಿಶೇಷ ಕಾರ್ಯಕ್ರಮಗಳು, ಸಮುದಾಯ ಸ್ವಚ್ಛತಾ ಅಭಿಯಾನಗಳು, ರಸ್ತೆ ಹಕ್ಕುಗಳ ಬಗ್ಗೆ ಜಾಗೃತಿ ರಾ್ಯಲಿಗಳು, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮುಸ್ಲಿಮೇತರ ಜನರನ್ನು ಸೇರಿಕೊಳ್ಳುವಿಕೆಗೆ ವಿಶೇಷ ಒತ್ತು ನೀಡಲಾಗುತ್ತದೆ, ಅಂತರಧಾರ್ಮಿಕ ಸೌಹಾರ್ದವನ್ನು ಬಲಪಡಿಸಲು ಮತ್ತು ಇಸ್ಲಾಂ ಕುರಿತು ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಜೊತೆಗೆ ನಿಮ್ಮ ಅಕ್ಕ ಪಕ್ಕದವರನ್ನು ತಿಳಿಯಿರಿ ಕಾರ್ಯಕ್ರಮಗಳು, ಅಕ್ಕ ಪಕ್ಕದವರ ಸಾಂಸ್ಕೃತಿಕ ಕೂಟಗಳು ಮತ್ತು ಅಭಿಯಾನದ ನಂತರವೂ ಸಂವಹನ ಮುಂದುವರಿಯಲು ಸ್ಥಳೀಯ ಸಮಿತಿಗಳ ರಚನೆಯೂ ಇರಲಿದೆ. ಅಭಿಯಾನವು ಅಕ್ಕ ಪಕ್ಕದವರ ಸಂಭಂಧಗಳನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ ದೇಶದ ಸಾಮಾಜಿಕ ಏಕತೆಯನ್ನು ಗಟ್ಟಿಗೊಳಿಸುವಲ್ಲಿ ಒಂದು ಸಕಾರಾತ್ಮಕ ಹೆಜ್ಜೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 