ಕರ್ನಾಟಕದಲ್ಲಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸದಂತೆ ಆಗ್ರಹಿಸಿ ಜೆಸಿಟಿಯು ಮನವಿ
JCT appeals against implementation of labor codes in Karnataka
ಬೆಂಗಳೂರು 27: ಕಾರ್ಮಿಕ ಸಂಹಿತೆಗಳ ಅಧಿಸೂಚನೆ. ರಾಷ್ಟ್ರದ ದುಡಿಯುವ ಜನರ ಮೇಲೆ ಎಸಗಲಾದ ಮೋಸದ ವಂಚನೆ ನವೆಂಬರ್ 26 ರಂದು ಹೋರಾಟದ ಪ್ರತಿರೋಧ ಕರ್ನಾಟಕದಲ್ಲಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸದಂತೆ ಆಗ್ರಹಿಸಿ ಕಾರ್ಮಿಕ ಸಂಘಗಳ ಜಂಟಿ ವೇದಿಕೆ (ಜೆಸಿಟಿಯು) ಸಲ್ಲಿಸಲಾದ ಮನವಿ
ಕೇಂದ್ರ ಸರ್ಕಾರವುಕಾರ್ಮಿಕ ವಿರೋಧಿ, ಉದ್ಯೋಗದಾತರ ಪರವಾದನಾಲ್ಕು ಕಾರ್ಮಿಕ ಸಂಹಿತೆಗಳನ್ನು ಏಕಪಕ್ಷೀಯವಾಗಿ ಜಾರಿಗೊಳಿಸಿರುವುದನ್ನು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯುತೀವ್ರವಾಗಿಖಂಡಿಸುತ್ತದೆ. ಇದನ್ನು ರಾಷ್ಟ್ರದ ದುಡಿಯುವ ಜನರ ವಿರುದ್ಧ ಕೇಂದ್ರ ಸರ್ಕಾರ ಎಸಗಿದ ಮೋಸದ ವಂಚನೆ ಎಂದು ನಾವು ನಿಸ್ಸಂದಿಗ್ಧವಾಗಿ ಕರೆಯುತ್ತೇವೆ.
21 ನವೆಂಬರ್ 2025 ರಂದು ಅಧಿಸೂಚಿಸಲಾದ ನಾಲ್ಕು "ಕಾರ್ಮಿಕ ಸಂಹಿತೆಗಳ" ಈ ನಿರಂಕುಶ ಮತ್ತುಅಪ್ರಜಾಸತ್ತಾತ್ಮಕ ಅಧಿಸೂಚನೆಯು ಎಲ್ಲಾ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಧಿಕ್ಕರಿಸುತ್ತದೆ ಮತ್ತು ಭಾರತದ ಕಲ್ಯಾಣ ರಾಜ್ಯದ ಸ್ವರೂಪವನ್ನು ಧ್ವಂಸಗೊಳಿಸಿದೆ. ಅಸ್ತಿತ್ವದಲ್ಲಿದ್ದ 29 ಕೇಂದ್ರಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಜಾರಿಗೆತಂದ ದಿನದಿಂದಲೇ ಹತ್ತುಕೇಂದ್ರಕಾರ್ಮಿಕ ಸಂಘಗಳು ಮತ್ತು ಸ್ವತಂತ್ರಕೈಗಾರಿಕಾ ಒಕ್ಕೂಟಗಳ ಜಂಟಿ ವೇದಿಕೆಯು ಮತ್ತು ಸಿಐಟಿಯು ಈ ಕರಾಳ ಕಾರ್ಮಿಕ ಸಂಹಿತೆಗಳ ಜಾರಿಯನ್ನುನಾವು ವಿರೋಧಿಸುತ್ತೇವೆ.
ತೀವ್ರ ಪ್ರತಿರೋಧದ ಹೊರತಾಗಿಯೂ, ಕೇಂದ್ರದಲ್ಲಿನ ಆಡಳಿತಾರೂಢ ಸರ್ಕಾರವು, ಕಾರ್ಮಿಕ ಮತ್ತುಉದ್ಯೋಗ ಸಚಿವಾಲಯದ ಮಾಧ್ಯಮ ವರದಿಗಳು ಮತ್ತು ಟ್ವೀಟ್‌ಗಳ ಪ್ರಕಾರನವೆಂಬರ್ 21 ರಿಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ಮುಂದಾಗಿದೆ.ಕೇಂದ್ರಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಭಾರತೀಯಕಾರ್ಮಿಕ ಸಮ್ಮೇಳನವನ್ನು (ಋಅ)ತಕ್ಷಣಕರೆಯುವಂತೆ ಒತ್ತಾಯಿಸಿತ್ತು.
ಕರಡು 'ಶ್ರಮ ಶಕ್ತಿ ನೀತಿ 2025' ಕುರಿತು ನವೆಂಬರ್ 13 ರಂದು ಸಚಿವಾಲಯಕರೆದ ಸಭೆಯಲ್ಲಿಯೂಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗಿತ್ತು.ನವೆಂಬರ್ 20 ರಂದು ಹಣಕಾಸು ಸಚಿವಾಲಯ ನಡೆಸಿದ ಬಜೆಟ್ ಪೂರ್ವ ಸಮಾಲೋಚನಾ ಸಭೆಯಲ್ಲಿಯೂ, 2015 ರ ನಂತರ ನಡೆದಿರದ ಐಎಲ್‌ಸಿಯನ್ನು ಕರೆಯುವಂತೆ ಮತ್ತು ಸಂಹಿತೆಗಳನ್ನು ರದ್ದುಗೊಳಿಸುವಂತೆ ಜಂಟಿ ವೇದಿಕೆಯ ಪರವಾಗಿಒತ್ತಾಯಿಸಲಾಗಿತ್ತು.ಆದರೆ ಸರ್ಕಾರವು ಮೊಂಡುತನದಿಂದ ಸ್ಪಂದಿಸಲಿಲ್ಲ.
ಕೇಂದ್ರಕಾರ್ಮಿಕ ಸಂಘಗಳು ಮತ್ತು ಸ್ವತಂತ್ರಕೈಗಾರಿಕಾ ಒಕ್ಕೂಟಗಳ ಜಂಟಿ ವೇದಿಕೆಯು, ವಿವಿಧ ವಲಯಗಳ ಭಾರತದದುಡಿಯುವಜನರಿಗೆ ನವೆಂಬರ್ 26, 2025 ರಂದು ಸಂಯುಕ್ತಕಿಸಾನ್ ಮೋರ್ಚಾ(ಖಏಒ) ನೇತೃತ್ವದರೈತರೊಂದಿಗೆ ಸೇರಿ ಹೋರಾಟದ ಪ್ರತಿರೋಧ ಮತ್ತು ಧಿಕ್ಕಾರ ಪ್ರದರ್ಶಿಸಲು ಕರೆ ನೀಡಿದೆ.ಕಾರ್ಮಿಕ ಸಂಹಿತೆಗಳ ಜಾರಿ ವಿರುದ್ಧ ಮತ್ತುಕರಡು 'ಶ್ರಮ ಶಕ್ತಿ ನೀತಿ 2025' ಹಿಂಪಡೆಯಲು ಒತ್ತಾಯಿಸಿ ದೇಶಾದ್ಯಂತ ಪ್ರತಿಯೊಂದು ಕೆಲಸದ ಸ್ಥಳದಲ್ಲಿಯೂ ಪ್ರತಿರೋಧ ವ್ಯಕ್ತಪಡಿಸಲುಕರೆ ನೀಡಲಾಗಿದೆ.
ಈ ಹಿನ್ನಲೆಯಲ್ಲಿಕರ್ನಾಟಕಉದ್ದಗಲಕ್ಕೂ ಸಿಐಟಿಯು ಸೇರಿಇತರೆಕೇಂದ್ರಕಾರ್ಮಿಕ ಸಂಘಗಳು ಹಾಗೂ ಸಂಯುಕ್ತ ಹೋರಾಟಕರ್ನಾಟಕಜಂಟಿಯಾಗಿ ಪ್ತತಿಭಟನೆ ನಡೆಸಿ ಈ ಮನವಿಯನ್ನು ಈ ಕೆಳಕಂಡ ಬೇಡಿಕೆಗಳ ಆಧಾರದಲ್ಲಿ ಸಲ್ಲಿಸುತ್ತಿದ್ದೇವೆಕೇಂದ್ರ ಸರ್ಕಾರದಜನವಿರೋದಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಕೈ ಬಿಡಬೇಕೆಂದುಆಗ್ರಹಿಸುತ್ತಿದ್ದೇವೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 