ಜ. 14 ರಂದು ‘ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ 105ನೇ ಜನ್ಮದಿನ ಆಚರಣೆ

J. On 14th 'Nadoja Dr. 105th Birthday Celebration of Patil Puttappa


ಜ. 14 ರಂದು ‘ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ 105ನೇ ಜನ್ಮದಿನ ಆಚರಣೆ 

ಧಾರವಾಡ 13: ಕರ್ನಾಟಕ ವಿದ್ಯಾವರ್ಧಕ ಸಂಘವು, ದಿನಾಂಕ 14-1-2025 ರಂದು ಬೆಳಿಗ್ಗೆ 10 ಗಂಟೆಗೆ ಸಂಘದ ಶ್ರೀ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಕನ್ನಡದ ಕಟ್ಟಾಳು, ಧೀಮಂತ ಪತ್ರಕರ್ತ, ದಿಟ್ಟ, ದಣಿವರಿಯದ ಹೋರಾಟಗಾರ, ಸಾಹಿತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದ ಶತಾಯುಷಿ ‘ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ 105ನೇ ಜನ್ಮದಿನಾಚರಣೆ’ ಏರಿ​‍್ಡಸಿದೆ.  

ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು, ತಾಯಂದಿರು, ಸಂಘದ ಆಜೀವ ಸದಸ್ಯರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.