ಬಂಡವಾಳ ಶಾಹಿಗಳು ಜಗತ್ತನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಸುಲಿಗೆ ಹೆಚ್ಚಿಸುವ ಪ್ರಯತ್ನ ಮುಂದುವರೆದಿರುವುದು ಕಳವಳಕಾರಿ ಸಂಗತಿ: ಯು.ಬಸವರಾಜ

It is worrisome that capitalists are trying to take control of the world and increase extortion: U.

ಬಂಡವಾಳ ಶಾಹಿಗಳು ಜಗತ್ತನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಸುಲಿಗೆ ಹೆಚ್ಚಿಸುವ ಪ್ರಯತ್ನ ಮುಂದುವರೆದಿರುವುದು ಕಳವಳಕಾರಿ ಸಂಗತಿ: ಯು.ಬಸವರಾಜ 

ವಿಜಯಪುರ : ಗಾಜಾಪಟ್ಟಿಯ ಮೇಲೆ ನಡೆದ ಇಸ್ರೆಲಿನ ದಾಳಿಯಿಂದ ಸುಮಾರು 45 ಸಾವಿರ ಜನರ ಹತ್ಯೆಯಾಗಿದೆ. ಅದರಲ್ಲಿ 10 ಸಾವಿರ ಮಕ್ಕಳು ಅಸುನೀಗಿದ್ದಾರೆ. ಜಾಗತಿಕ ಸಮಾಜವಾದಿ ದೇಶ ಸೋವಿಯತ್ ರಷ್ಯಾ ಹಾಳಾದ ನಂತರ ಅಮೇರಿಕದ ಪ್ರಭಾವ ಹೆಚ್ಚಾಗಿದೆ. ಇಸ್ರೆಲಿಗೆ ಅಮೇರಿಕಾ ಪ್ರಭಾವ ಹೆಚ್ಚಿಸಿದೆ. ಭಾಂಗ್ಲಾದೇಶದಲ್ಲಿ ದಂಗೆ ಎದ್ದ ಜನಗಳಿಂದ ಪ್ರಧಾನಿ ಶೇಕ ಅಸಿನಾ ತನ್ನ ಅಧಿಕಾರ ತೊರೆದು ವಿದೇಶಕ್ಕೆ ಫಲಾಯನ ಮಾಡಬೇಕಾಯಿತು. ಪಾಕಿಸ್ತಾನದಲ್ಲಿ ಆಂತರಿಕ ಕಲಹಗಳು ಹೆಚ್ಚಾಗಿ ಸಾವು ನೋವುಗಳು ಸಂಭವಿಸಿವೆ. ಶ್ರೀಲಂಕಾದಲ್ಲಿ ನಡೆದ ಚುನಾವಣೆಯಲ್ಲಿ ರಾಜಕೀಯ ಬದಲಾವಣೆಯಾಗಿ ಕಮ್ಯುನಿಷ್ಟ ನಾಯಕತ್ವದ ಅಧಿಕಾರ ಬಂದಿದೆ. ಬಂಡವಾಳ ಶಾಹಿಗಳು ಜಗತ್ತನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಸುಲಿಗೆ ಹೆಚ್ಚಿಸುವ ಪ್ರಯತ್ನ ಮುಂದುವರೆದಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಯು. ಬಸವರಾಜ ಕಳವಳ ವ್ಯಕ್ತಪಡಿಸಿದರು. 

ನಗರದ ಸಹಕಾರಿ ಯುನಿಯನ್ ನಲ್ಲಿ ಹಮ್ಮಿಕೊಂಡ ಸಿಪಿಐಎಂ (ಭಾರತ ಕಮ್ಯುನಿಷ್ಟ್‌ ಪಕ್ಷ ಮಾರ್ಕ್ಸ್‌ವಾದಿ) ವಿಜಯಪುರ ಜಿಲ್ಲಾ 22ನೇ ವಿಜಯಪುರ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ನಮ್ಮ ದೇಶದ ಕೇಂದ್ರ ಸರ್ಕಾರ ರೈತ ಕಾರ್ಮಿಕರ ಕಾನೂನುಗಳನ್ನು ಮೊಟಕುಗೊಳಿಸುವ ಹಾಗೂ ಇವರ ದುಡಿಮೆಯ ಪಾಲನ್ನು ದೋಚುವುದಕ್ಕೆ ತಂತ್ರಗಾರಿಕೆ ಮಾಡುತ್ತದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕೋಮು ಪ್ರಚೋದಕ ವಿಭಜನಕಾರಿ ದ್ವೇಷದ ವಾತಾವರಣ ಸೃಷ್ಟಿಸುತ್ತದೆ. ಡಾ. ಅಂಬೇಡ್ಕರ್ ಅವರ ಹೆಸರನ್ನು ಎತ್ತಲು ಹೆದರುತ್ತಿದ್ದ ಬಿಜೆಪಿ ಸರ್ಕಾರ ಈಗ ಬಹಿರಂಗವಾಗಿ ಅವರನ್ನು ಅವಮಾನ ಮಾಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದರು. ಅದರಂತೆ ಅಂತರಾಷ್ಟ್ರೀಯ ಜಾಗತಿಕ ಪರಸ್ಥಿತಿ ದೇಶದ ಪರಿಸ್ಥಿತಿ ಕುರಿತು ಸವಿವರವಾಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಸಿಪಿಐಎಂ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರ ಮಾತನಾಡಿ, ಜಿಲ್ಲೆಯ ರಾಜಕೀಯ  ಪರಿಸ್ಥಿತಿ ಸಮಾಜದ ಪರಿಸ್ಥಿತಿ ಮತ್ತು ರೈತರ ಸಮಸ್ಯೆ , ಕುಟುಂಬ ರಾಜಕಾರಣ ಮತ್ತು ಕರಡು ವರದಿಯನ್ನು ಮಂಡಿಸಿದರು. ಕರಡು ವರದಿಯ ಬಗ್ಗೆ ಪ್ರತಿನಿಧಿಗಳು ಚರ್ಚಿಸಿದರು. ಅದರಲ್ಲಿ ಬಗರ ಹುಕುಂ ಸಾಗುವಳಿ, ದಾರಿಯ ಹಕ್ಕು, ಮನೆ ನಿವೇಶನಕ್ಕಾಗಿ ನರೇಗಾ ಜಾರಿಗಾಗಿ ಕಾರ್ಮಿಕರ ಕನಿಷ್ಠ ವೇತನ 26 ಸಾವಿರ ರೂ. ತೊಗರಿ ಬೆಳೆ ನಷ್ಟ ಪರಿಹಾರಕ್ಕಾಗಿ 1 ಟನ್ ಕಬ್ಬಿಗೆ 5500 ರಂತೆ ಹಾಗೂ ಶಾಶ್ವತ ಬರಗಾಲ ಜಿಲ್ಲೆ ಎಂದು ಘೋಷಿಸಲು, ಆಲಮಟ್ಟಿ ಯಿಂದ ಶಹಾಬಾದ ವರೆಗೆ ರೇಲ್ವೆಗಾಗಿ ಇವೆಲ್ಲ ಬೇಡಿಕೆಗಳ ಜಾರಿಗೆಗಾಗಿ ಮುಂಬರುವ ದಿನಗಳಲ್ಲಿ ಹೋರಾಟ ರೂಪಿಸಲು ಸಮ್ಮೇಳನವು ತೀರ್ಮಾನ ಕೈಗೊಂಡಿತು. 

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಉಸ್ತುವಾರಿ ಹಾಗೂ ರಾಜ್ಯದ ಕಾರ್ಯದರ್ಶಿ ಜಿ. ನಾಗರಾಜ  ಸೇರಿದಂತೆ 70 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.  

ಇದೇ ಸಂದರ್ಭದಲ್ಲಿ ರಾಜ್ಯ ಸಮಿತಿಯ ಸೂಚನೆಯ ಮೇರೆಗೆ 13 ಜನರ ನೂತನ ಸಮಿತಿ ರಚಿಸಲಾಯಿತು. ಅದರಲ್ಲಿ ಕಾರ್ಯದರ್ಶಿಯನ್ನಾಗಿ ಭೀಮರಾಯ ಪೂಜಾರಿ, ಕಾರ್ಯದರ್ಶಿ ಮಂಡಳಿಗೆ ಲಕ್ಷ್ಮಣ ಹಂದ್ರಾಳ, ಸುರೇಶ ಜೀಬಿ, ಸುರೇಖಾ ರಜಪೂತ, ಭಾರತಿ ವಾಲಿ ಅವರನ್ನು ನೇಮಕ ಮಾಡಲಾಯಿತು. ಕಾರ್ಯಕ್ರಮವನ್ನು ಲಕ್ಷ್ಮಣ ಹಂದ್ರಾಳ ಸ್ವಾಗತಿಸಿ, ನಿರೂಪಿಸಿದರು. ಸುರೇಖಾ ರಜಪೂತ ವಂದಿಸಿದರು.