ಡಾ.ಅಂಬೇಡ್ಕರ ತತ್ವ.ಸಿದಾಂತ ಜೀವನದಲ್ಲಿ ಅಳವಡಿಕೊಳ್ಳುವುದು ಬಹಳ ಮುಖ್ಯ : ನಾರಾಯಣ ಶಾಸ್ತ್ರಿ
It is very important to apply Dr. Ambedkar's principles and principles in life: Narayana Shastri
ಜಮಖಂಡಿ 27: ಭಾರತದ ಸಂವಿಧಾನವು ಶ್ರೇಷ್ಠವಾದ ಸಂವಿಧಾನವಾಗಿದ್ದು. ನಾವೆಲ್ಲರೂ ಡಾ.ಅಂಬೇಡ್ಕರ ಅವರ ತತ್ವ.ಸಿದಾಂತಗಳನ್ನು ಜೀವನದಲ್ಲಿ ಅಳವಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ ಹೇಳಿದರು. ತಾಲೂಕಿನ ಕುಂಬಾರಹಳ್ಳ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ 77 ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂವಿಧಾನ ಜಾರಿಗೆ ಬಂದ ಇತಿಹಾಸವನ್ನು ತಿಳಿದುಕೊಂಡು. ನಾವೆಲ್ಲರೂ ನಮ್ಮ ಕರ್ತವ್ಯಗಳನ್ನು ಪಾಲಿಸಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಶಿಕ್ಷಕ ಸಂಗನಬಸವ ಉಟಗಿ ಮಾತನಾಡಿ, ಭಾರತ ದೇಶವು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದ್ದು ಜನವರಿ 26 ನಮ್ಮ ಸಂವಿಧಾನ ಜಾರಿಗೆ ಬಂದ ದಿನವಾಗಿದೆ. ನಮ್ಮ ಸಂವಿಧಾನ ಅನೇಕ ವಿಶೇಷತೆಗಳನ್ನು ಒಳಗೊಂಡಿದೆ. ಭಾರತ ದೇಶ ಜಾತ್ಯತೀತ ರಾಷ್ಟ್ರವಾಗಿದ್ದರು ಜಾತೀಯತೆಯೇ ತಾಂಡವವಾಡುತ್ತಿರುವುದು ಶೋಚನೀಯ ಸಂಗತಿಯಾಗಿದೆ. ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕೆ ಏನನ್ನು ಕೊಡಬಲ್ಲೆವು ಎನ್ನುವುದರ ಕುರಿತು ವಿಚಾರ ಮಾಡಬೇಕು ಎಂದರು.
ಶಿಕ್ಷಕಿ ಸವಿತಾ ಬೆನಕಟ್ಟಿ ಮಾತನಾಡಿ, ದೀನ ದಲಿತರ ಸೂರ್ಯ ಡಾ, ಅಂಬೇಡ್ಕರರಂತೆ ಮಕ್ಕಳಾದ ನೀವೂ ಅನೇಕ ವಿಷಯಗಳಲ್ಲಿ ಪಾಂಡಿತ್ಯವನ್ನು ಪಡೆಯ ಬೇಕು. ಸಂವಿಧಾನ ರಚನಾ ಕಾರ್ಯದಲ್ಲಿ ಕರ್ನಾಟಕದ ಬೆನಗಲ್ ನರಸಿಂಗ್ ರಾವ್ ಮಹತ್ವದ ಪಾತ್ರವಹಿಸಿದ್ದರು. ಗಣರಾಜ್ಯೋತ್ಸವ ತಮ್ಮಲ್ಲಿ ಹೊಸ ಉತ್ಸಾಹ ತುಂಬಲಿ ಎಂದರು. ಎಸ್,ಡಿ,ಎಮ್,ಸಿಯ ಸದಸ್ಯರಾದ ನಿಂಗಪ್ಪ ತೇರದಾಳ,ಯಮನಪ್ಪ ಮಾಂಗ, ಹಣಮಂತ ಮರನೂರ, ಅಪ್ಪಾಸಾಬ್ ನದಾಫ, ಲಕ್ಕವ್ವಾ ನಾಯಿಕ, ಪದ್ಮವ್ವಾ ಹುದಲಿ, ಶೈಲಾ ಮಾಳಿ ಚಂದ್ರಕಾಂತ ಪೋಲೀಸ್, ಸಂಜೀವ ಝಂಬುರೆ, ಬಾಹುಬಲಿ ಮುತ್ತೂರ, ಶಾರದಾ ಮಠ, ಮಂಜುಳಾ ಕಡಕೋಳ, ಆಸೀಫಾಭಾನು ಮೊಮಿನ್, ಶಕುಂತಲಾ ಬಿರಾದಾರ ಇದ್ದರು. ವಿದ್ಯಾರ್ಥಿಗಳಾದ ಮುಕ್ತ ಬೀಳಗಿ, ಅಕ್ಷತಾ ಗೋಡೆಕಟ್ಟು, ಸಾವಿತ್ರಿ ಕುರಣಿ, ಸಾಗರ ಕುರಣಿ, ಮುತ್ತುರಾಜ ತೇರದಾಳ ಹಾಗು ವಿದ್ಯಾರ್ಥಿಗಳು ದೇಶ ಭಕ್ತಿಗೀತೆ, ಭಾಷಣವನ್ನು ಮಾಡಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 