ಗೋಕಾಕ 21: ಗಡಿ ಕಾಯುವ ಯೋಧರು ತಮ್ಮ ಅಪಾರ ಬಂಧುಬಗಳವನ್ನು ಬಿಟ್ಟು ದೇಶದ ರಕ್ಷಣೆಗಾಗಿ ಗಡಿ ಭಾಗದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ನಿಜವಾದ ಹೃದಯ ಶ್ರೀಮಂತಿಕೆಯ ದೇಶ ಭಕ್ತರು. ಅವರನ್ನು ಗೌರವಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಹೇಳಿದರು.
ನಗರದ ಜ್ಞಾನ ಮಂದಿರ ಆಧ್ಯಾತ್ಮ ಕೇಂದ್ರದಲ್ಲಿ ಸುಕ್ಷತ್ರ ಶ್ರೀಶೈಲ ಮಲ್ಲಿಕಾಜರ್ುನಕ್ಕೆ ಹುಕ್ಕೇರಿ ತಾಲೂಕಿನ ಸುತ್ತಮುತ್ತಲಿನ ಗ್ರಾಮದಿಂದ ಪಾದಯಾತ್ರೆ ಮುಖಾಂತರ ಹೋಗುವ ಭಕ್ತಾಧಿಗಳಿಗೆ ನಗರದ ಜ್ಞಾನ ಮಂದಿರ ಆಧ್ಯಾತ್ಮ ಕೇಂದ್ರದಲ್ಲಿ ಗೋಕಾಕ ನಗರದ ಶ್ರೀಶೈಲ ಪಾದಯಾತ್ರಾ ಕಮೀಟಿಯವರು ಸುಕ್ಷೇತ್ರ ಶ್ರೀಶೈಲ ಮಲ್ಲಿಕಾಜರ್ುನ ದರ್ಶನ ಪಾದಯಾತ್ರಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗೋಕಾಕ ನಗರ ಬಾಳೇಶ ಯಲ್ಲಪ್ಪ ಪೂಜೇರಿ ಇವರು ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತಿಯನ್ನು ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಅವರನ್ನು ಗೌರವಿಸಿ ಸತ್ಕರಿಸಿ ಮಾತನಾಡಿದ ಅವರು ದೇಶ ಗಡಿ ಕಾಯುವ ಸೈನಿಕ ತಮ್ಮ ಪ್ರಾಣವನ್ನು ಲೆಕ್ಕಿಸದೇ ನಿರಂತರ ಸೇವೆಯನ್ನು ಮಾಡುವುದರಿಂದ ಇವತ್ತಿನ ದಿವಸ ನಾವು ನೀವು ಈ ದೇಶದಲ್ಲಿ ಸುರಕ್ಷಿತವಾಗಿದ್ದೇವೆ. ದೇಶದ ಗಡಿ ಭಾಗದಲ್ಲಿ ಚಳಿ-ಮಳೆ-ಬಿಸಿಲು ಅನ್ನದೇ ನಿರಂತರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇವರ ಕಾರ್ಯ ಅತ್ಯಂತ ಶ್ಲಾಘನೀಯ ಇವರನ್ನು ಸತ್ಕರಿ ಗೌರವಿಸುವದು ನಮ್ಮೇಲ್ಲರ ಆಧ್ಯ ಕರ್ತವ್ಯವೆಂದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀಶೈಲ ದರ್ಶನ ಪಾದಯಾತ್ರೆಗಳು ನಿರಂತರ 15 ದಿವಸಗಳ ಪಾದಯಾತ್ರೆಯಲ್ಲಿ ತಮ್ಮ ಲೌಕಿಕ ಜಗತ್ತಿನ ಮನೆ, ಸಂಸಾರ, ಆಸ್ತಿ ಎಲ್ಲವನ್ನು ಮರೆತು ಅತ್ಯಂತ ಪರಿಶುದ್ಧ ಮನೋಭಾವನೆಯಿಂದ ತನು-ಮನವನ್ನು ಭಗವಂತನಿಗೆ ಸಮಪರ್ಿಸಿ ನಿಷ್ಕಾಮ ಮನೋಭಾವನೆಯ ಭಗತ್ತಿಯ ಪರಾಕಾಷ್ಟೆಯಲ್ಲಿ ಒಂದಾಗಿರುವ ಗಳಿಗೆ ಅವರನ್ನೇ ನಿಜಶರಣರನ್ನಾಗಿ ಮಾಡಿರುತ್ತದೆ. ಅಂತಹ ಸಂದರ್ಭದಲ್ಲಿ ನಮಗೆ ಅವರೆ ದೇವಸ್ವರೂಪರಾಗಿರುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಉಡುಪಿಯ ಬೆಳಂದೂರಿನ ಗೋಪಾಲಕೃಷ್ಣ ಭಟ್ಟ ವಹಿಸಿದ್ದರು. ಪ್ರಾಸ್ತಾವಿಕವಾಗಿ ವಿಜಯಶಾಸ್ತ್ರೀ ಹಿರೇಮಠ ಮಾತನಾಡಿದರು. ವೇದಿಕೆಯ ಮೇಲೆ ನಗರಸಭೆ ಸದಸ್ಯರಾದ ಹನಮಂತ ಕಾಳಮ್ಮಗುಡಿ, ಯಲ್ಲಮ್ಮ ದೇವಿಯ ಅರ್ಚಕ ಶಿವಾನಂದ ಹೂಲಿ, ಸಾವಳಿಗೆಪ್ಪಾ ನಂದಗಾಂವಿ, ಸಿದ್ದಪ್ಪ ವಾಳವಿ, ಅಶೋಕ ಕೊಳವಿ, ಬಸವರಾಜ ಕ್ಯಾಸ್ತಿ, ಬಸವರಾಜ ಮಗದುಮ್ಮ, ಶ್ರೀಶೈಲ ಪೂಜಾರಿ, ರಾಜು ನಂದಗಾಂವಿ, ರಾಜು ಮಾಡಲಗಿ, ರಾಜು ಸುಂಕದ, ಮಹೇಶ ಮಠಪತಿ, ಬಸವರಾಜ ಗೋಡಚಿನಮಲ್ಕಿ, ಶಂಕರ ಗಡ್ಡಿ, ಪಟಗುಂದಿ ಗುರುಗಳು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಜಯ ಪೂಜಾರಿ ನಿರೂಪಿಸಿ ಸ್ವಾಗತಿಸಿ ವಂದನಾರ್ಪಣೆಗೈದರು.