ಎಲ್ಲ ಜಾತಿ, ಧರ್ಮಗಳನ್ನು ಒಗ್ಗೂಡಿಸಿ, ಸಹಬಾಳ್ವೆ ನಡೆಸುವುದು ಪ್ರತಿಯೊಬ್ಬರ ಹಕ್ಕು: ಹೊಳಬಸಪ್ಪ ಹಡಪದ

It is everyone's right to unite all castes, religions and co-exist: Holabasappa Hadapada

ಎಲ್ಲ ಜಾತಿ, ಧರ್ಮಗಳನ್ನು ಒಗ್ಗೂಡಿಸಿ, ಸಹಬಾಳ್ವೆ ನಡೆಸುವುದು ಪ್ರತಿಯೊಬ್ಬರ ಹಕ್ಕು: ಹೊಳಬಸಪ್ಪ ಹಡಪದ 

ಮಹಾಲಿಂಗಪುರ 12: ನೇ ಶತಮಾನದಲ್ಲಿ ಎಲ್ಲ ಜಾತಿ ಧರ್ಮಗಳನ್ನು ಒಗ್ಗೂಡಿಸಿ ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಈ ಭೂಮಿಯ ಮೇಲೆ ಎಲ್ಲರೂ ಸಹಬಾಳ್ವೆ ನಡೆಸುವುದು ಪ್ರತಿಯೊಬ್ಬರ ಹಕ್ಕಾಗಿದೆ ಎಂದು ಜಗತ್ತಿಗೆ ಅರಿವು ಮೂಡಿಸಿದ ಮಹಾನ್ ಚೇತನ ಅಣ್ಣ ಬಸವಣ್ಣನವರಾಗಿದ್ದಾರೆ ಎಂದು ಬಸವ ಶರಣ ಹೊಳಬಸಪ್ಪ ಹಡಪದ ಹೇಳಿದರು. ಸೋಮವಾರ ಸಂಜೆ ಶರಣ ಹರಳಯ್ಯ ಸಮಾಜ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಏರಿ​‍್ಡಸಿದ ಹರಳಯ್ಯ, ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಉರಿಲಿಂಗಪೆದ್ದಿ, ಡೋಹರ ಕಕ್ಕಯ್ಯ ಹೀಗೆ ಕಾಯಕ ಶರಣರ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅಣ್ಣ ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಿಜ ಶರಣ ಹರಳಯ್ಯನವರು ಬಸವೇಶ್ವರರ ಕಟ್ಟಾ ಅಭಿಮಾನಿ, ಕವಿ ಮತ್ತು ವಚನ ಸಾಹಿತ್ಯ, ತತ್ವಗಳ ಪ್ರಚಾರಕರಾಗಿದ್ದರು. ಅಣ್ಣ ಬಸವಣ್ಣ ಹರಳಯ್ಯ ದಂಪತಿಗೆ ಎರಡು ಸಾರಿ ಶರಣು ಶರಣಾರ್ಥಿ ಹೇಳಿದಕ್ಕೆ, ಅಭಿಮಾನ ಭರಿತರಾಗಿ ದಂಪತಿಗಳು ತಮ್ಮ ತೊಡೆಯ ಚರ್ಮದಿಂದ ಪಾದುಕೆಗಳನ್ನು ತಯಾರಿಸಿ ಸಮಾನತೆಯ ಹರಿಕಾರನಿಗೆ ತೊಡಲು ಕೊಟ್ಟಾಗ, ಬಸವಣ್ಣನವರು ಇವು ದೇವರ ಪಾದುಕೆಗಳು ಎಂದು ಶಿರದ ಮೇಲೆ ಹೊತ್ತು ಪ್ರತಿ ಅಭಿಮಾನ ಮೆರೆದರು. ಹೀಗೆಯೇ ಹಲವಾರು ಶರಣರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ವಿಶ್ವ ವ್ಯಾಪಿ ಹರಡಲು ತಮ್ಮ ತ್ಯಾಗ ಬಲಿದಾನ ನೀಡಿದ್ದಾರೆ.ಅಂತಹ ಕಾಯಕ ಶರಣರ ಜಯಂತಿ ಇವತ್ತು ಆಚರಿಸುತ್ತಿರುವುದು ಸಮಯೋಚಿತವಾಗಿದೆ ಎಂದರು. ಶರಣರಾದ ಆರತಿವೆತ್ತ ಮಹಿಳೆಯರು, ಪುರುಷರು ಶರಣ ಹರಳಯ್ಯ ಸಮಾಜ ಭವನದಿಂದ ಬಸವಣ್ಣನವರ ಭಾವಚಿತ್ರ ಹಿಡಿದು ಮೆರವಣಿಗೆ ಡಬಲ್ ರಸ್ತೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿತು.ಈ ಸಮಯದಲ್ಲಿ 770 ಗಣ ಶರಣರ ಪೈಕಿ ಹಲವರಿಗೆ ಶರಣು ಶರಣಾರ್ಥಿ ಹೇಳುವುದಲ್ಲದೆ ಈ ಸಂದರ್ಭದಲ್ಲಿ ಬಸವ ಮಂತ್ರ ಪರಿಮಳ ಓಂ ಶ್ರೀ ಗುರು ಬಸವಲಿಂಗಾಯನಮ ವನ್ನೂ ಉವಾಚಿಸಿದರು. ಈ ಜಯಂತಿಯಲ್ಲಿ ಬಸವ ಶರಣರಾದ ಅರ್ಜುನ್ ಸಣ್ಣಕ್ಕಿ, ಮಾರುತಿ ಸಣ್ಣಕ್ಕಿ, ಶ್ರೀಧರ್ ಸಣ್ಣಕ್ಕಿ, ಬಸವರಾಜ ಅರಳಿಮಟ್ಟಿ, ಸದಾನಂದ ಮಾಚಕನೂರ, ಸುರೇಶ್ ಸಣ್ಣಕ್ಕಿ, ಮಹಾದೇವ ಸಣ್ಣಕ್ಕಿ, ಮಹಾಂತೇಶ ಅರಳಿಮಟ್ಟಿ, ಭೀಮಪ್ಪ ಅರಳಿಮಟ್ಟಿ, ಬಾಹು ಸಣ್ಣಕ್ಕಿ ಮತ್ತು ಶರಣು ಶರಣೀಯರು ಇದ್ದರು.