ದೈಹಿಕ, ಮಾನಸಿಕವಾಗಿ ಸದೃಢರಾಗಿರುವುದು ಅತ್ಯವಶ್ಯಕ

ದೈಹಿಕ, ಮಾನಸಿಕವಾಗಿ ಸದೃಢರಾಗಿರುವುದು ಅತ್ಯವಶ್ಯಕ It is essential to be physically and mentally fit.

ದೈಹಿಕ, ಮಾನಸಿಕವಾಗಿ ಸದೃಢರಾಗಿರುವುದು ಅತ್ಯವಶ್ಯಕ 

ಗದಗ  17: ನಗರದ ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಸಭಾಂಗಣದಲ್ಲಿ  ಕಾಲೇಜು ಪ್ರಾಂಶುಪಾಲರಾದ ಪ್ರೊ. ಎಮ್‌.ಎಮ್‌. ಬುರುಡಿ ಇವರ ಅಧ್ಯಕ್ಷತೆಯಲ್ಲಿ  “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2025” ಅಂಗವಾಗಿ ಕಾರ್ಯಕ್ರಮ ಜರುಗಿತು. ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಂಗಾಧರ ಸಿಎಂ ಇವರು ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿ   ಒತ್ತಡ, ಆತಂಕ, ನಿರಿಕ್ಷೆ, ಇತ್ಯಾದಿಗಳು ನಿತ್ಯದ ಬದುಕಿನಲ್ಲಿ ಒಳಗೊಂಡಿವೆ. ದೈಹಿಕ ಆರೋಗ್ಯ ದಷ್ಟೆ ಮಾನಸಿಕವಾಗಿ ಸದೃಢರಾಗಿರಬೇಕಾಗಿರುವುದು ಇಂದಿನ ಜೀವನದಲ್ಲಿ ಅತ್ಯವಶ್ಯಕವಾಗಿದೆ. ಹಾಗೂ ಮಾನಸಿಕ ಅಸ್ವಸ್ಥರಿಗೆ ಹಕ್ಕುಗಳು ಯಾವುದೆಂದರೆ ಮಾನಸಿಕ ಆರೋಗ್ಯ ರಕ್ಷಣೆಯನ್ನು ಪಡೆಯುವ ಹಕ್ಕು, ಸಮೂದಾಯದಲ್ಲಿ ಜೀವಿಸುವ ಹಕ್ಕು, ಘನತೆಯಿಂದ ಬದುಕುವ ಹಕ್ಕು, ವೈದ್ಯಕೀಯ ದಾಖಲೆಗಳನ್ನು ಪಡೆಯುವ ಹಕ್ಕು, ಇದೆ ಎಂದು ತಿಳಿಸಿದರು.  

 ಮಾನಸಿಕ ಆರೋಗ್ಯವು ಮಾನವನ ಮೂಲಭೂತ ಹಕ್ಕುಗಳಾಗಿವೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನವು ಅತ್ಯುತ್ತಮ ಸಮಯವಾಗಿದ್ದು ಇದರೊಂದಿಗೆ ನಿರಾಶೆ, ಹೊಲಿಕೆ, ಒಂಟಿತನ, ಭಾವನೆಗಳಲ್ಲಿ ತೊಳಲಾಟ ಸಾಮಾನ್ಯವಾಗಿರುತ್ತದೆ ಮಾನಸಿಕ ಅನಾರೋಗ್ಯ ಎಲ್ಲರನ್ನು ಬಾಧಿಸುವಂತಾಗಿದ್ದು ಅದು ಮಕ್ಕಳಿಂದ ಹಿಡಿದು ಮುಪ್ಪಿನವರೆಗು ಬಾಧಿಸಬಹುದು, ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ ಎಂದು ತಿಳಿಸಿ ಜಾಗೃತಿ ಮೂಡಿಸುವುದು ಮಾತ್ರ ನಮ್ಮ ಕರ್ತವ್ಯವಲ್ಲ ಸಮಾಜದಲ್ಲಿ ಮಾನಸಿಕ ಆರೋಗ್ಯ ಕಾಪಾಡಿ ಭವಿಷ್ಯದತ್ತ ಒಂದು ಹೆಜ್ಜೆ ಮುಂದು ಹೊಗುವುದು ಒಳಿತು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನ ಅಧಿಕಾರಿ ಡಾ. ರಾಜೇಂದ್ರ ಸಿ. ಬಸರಿಗಿಡದ ಪ್ರಾಸ್ಥವಿಕವಾಗಿ ಮಾತನಾಡಿ ಎಲ್ಲಾ ಮಕ್ಕಳು ತಮ್ಮ ಸಮಸ್ಯೆಗಳು ಇದ್ದರೆ ಕೆ.ಎಚ್‌.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ ಇಲ್ಲಿ ಮಾನಸಿಕ ವೈದ್ಯಾಧಿಕಾರಿಗಳಿದ್ದು, ಮಕ್ಕಳು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತಿಳಿಸಿದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಿಬ್ಬಂದಿಗಳು ಮತ್ತು ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಗದಗದ ಬೊಧಕ ಬೊಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.