ಕ್ರೀಡಾಪಟುಗಳು ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಅನಿವಾರ್ಯ: ಬಾಳಿ
It is essential for athletes to maintain good health: Bali
ಸವದತ್ತಿ 26: ಒಬ್ಬ ಕ್ರೀಡಾಪಟುವಿಗೆ ದೇಹ ಮತ್ತು ಮನಸ್ಸು ಒಮ್ಮತದಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ. ಕಬಡ್ಡಿ, ಖೋಖೋ, ವಾಲಿಬಾಲ್, ಫುಟ್‌ಬಾಲ್, ಕ್ರಿಕೆಟ್‌ನಂತಹ ಆಟಗಳು ದೈಹಿಕ ಶ್ರಮವನ್ನು ಹೆಚ್ಚಾಗಿ ಬಯಸುತ್ತವೆ. ಹೀಗಾಗಿ ಕ್ರೀಡಾಪಟುಗಳು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಅನಿವಾರ್ಯ ಎಂದು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಉಮೇಶ್ ಬಾಳಿ ಹೇಳಿದರು.
ಅವರು ಇಲ್ಲಿನ ಕೆ.ಎಲ್.ಇ. ಸಂಸ್ಥೆಯ ಎಸ್. ವ್ಹಿ. ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯ ಮತ್ತು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇವುಗಳ ಸಹಯೋಗದಲ್ಲಿ ಏರಿ್ಡಸಿದ್ದ ಏಕ ವಲಯ ಅಂತರ್ ಕಾಲೇಜುಗಳ ಎರಡು ದಿನಗಳ ಮಹಿಳೆಯರ ಖೋಖೋ ಆಯ್ಕೆ ಪ್ರಕ್ರಿಯೆ ಮತ್ತು ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಖೋಖೋ ಆಯ್ಕೆ ಪ್ರಕ್ರಿಯೆಯಲ್ಲಿ ಬೆಳಗಾವಿಯ ಬಿ.ಕೆ.ಕಾಲೇಜು ಪ್ರಥಮ, ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯ ದ್ವಿತೀಯ ಮತ್ತು ರಾಮದುರ್ಗದ ಐ.ಎಸ್.ಯಾದವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡವು.
ಪ್ರಾಚಾರ್ಯ ಡಾ. ಎನ್.ಆರ್.ಸವತಿಕರ, ಪೂರ್ಣಿಮಾ ಹುಡೇದ, ಕಾಶವ್ವ ನಾಯ್ಕರ್, ಪ್ರೊ. ಕೆ. ರಾಮರೆಡ್ಡಿ, ವಿ.ಎಸ್.ಮೀಶಿ, ಡಾ.ಗೀತಾ ಮಲ್ಲಾಪುರ, ಪ್ರೊ.ಶಿವಾನಂದ ಹೊಳಿ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ 26 ಕಾಲೇಜಿನಿಂದ ಆಗಮಿಸಿದ 74 ಸ್ಪರ್ಧಿಗಳು, ದೈಹಿಕ ಶಿಕ್ಷಣ ನಿರ್ದೇಶಕರು, ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎ.ಎಫ್.ಬದಾಮಿ, ವಿ.ಎಸ್.ಮೀಶಿ, ಡಾ.ಎನ್.ಎ.ಕೌಜಗೇರಿ, ಎ.ಎ.ಹಳ್ಳೂರ, ಸ್ನೇಹಾ ಗಂಗಲ, ಕಿರಣಕುಮಾರ್ ಲಮಾಣಿ, ಪಿ.ಎಫ್.ಹಾದಿಮನಿ, ಎಂ.ಎನ್.ಸಂಗೊಳ್ಳಿ, ಕೆ.ಬಿ.ನರಗುಂದ, ಎಸ್.ಜೆ.ಮಜ್ಜಗಿ, ಅಶೋಕ ಪಮ್ಮಾರ, ಬಿ.ಬಿ.ಕಬಾಡಗಿ, ಡಾ.ಎಚ್.ಎನ್.ಲೋಕೇಶ್, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 