ಲೋಕದರ್ಶನ ವರದಿ
ಧಾರವಾಡ 14: ಪ್ರತಿಭಾನ್ವಿತರನ್ನು, ಸಾಧಕರನ್ನು ಸಮಾಜ ಗುರುತಿಸಿ ಗೌರವಿಸುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರತಿಭಾನ್ವಿತ ವಿದ್ಯಾಥರ್ಿಗಳು ಹೆಚ್ಚಿನ ಸಾಧನೆ ಮಾಡಲು ಪ್ರೇರೆಪಿಸುವುದು ಸಂಘದ ಆಶಯವಾಗಿದೆ ಎಂದು ಕನರ್ಾಟಕ ಕುರುಬ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ಸ್ಥಳೀಯ ಸರಕಾರಿ ನೌಕರರ ಭವನದಲ್ಲಿ ಕನರ್ಾಟಕ ಕುರುಬರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡ ಸಂಘದ ಪ್ರಥಮ ವಾಷರ್ಿಕೋತ್ಸವ ಹಾಗೂ ದಾನಿಗಳಿಗೆ, ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಸತ್ಕಾರ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಕನರ್ಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಜ್ಞಾನ ಮತ್ತು ಅಂಕಗಳು ಎಲ್ಲ ಕ್ಷೇತ್ರಗಳಲ್ಲಿ ಗೌರವ ಪಡೆಯುವವು. ಸಮಾಜದಲ್ಲಿ ಸಜ್ಜನರಿಗೆ ಒಳ್ಳೆಯವರಿಗೆ ಹೆಚ್ಚು ಮಾರ್ಯದೆ ಲಭಿಸಲಿದೆ. ಇಂಥ ಗುಣವನ್ನು ಯುವಕರು, ವಿದ್ಯಾಥರ್ಿಗಳು ಬೆಳೆಸಿಕೊಂಡು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಎಂದರು.
ಸಭೆಯಲ್ಲಿ ಉಪಸ್ಥಿತರಿರುವ ಬಳ್ಳಾರಿ ಡಿ.ವಾಯ್.ಎಸ್.ಪಿ. ಸಿದ್ದು ಪಾಟೀಲ, ಕನರ್ಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರು ಬಿ.ಎಫ್, ಚಾಕಲಬ್ಬಿ, ಬೆಳಗಾವಿ ವಿಭಾಗದ ಕೆ.ಎಸ್. ಅಸೂಟಿ ಮತ್ತಿತರರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ನಿಂಗಪ್ಪ ಸವಣೂರ ಅಧ್ಯಕ್ಷತೆವಹಿಸಿ ಮಾತನಾಡಿ- ಸಮಾಜದ ನೌಕರರು ಒಗ್ಗಟಿನಿಂದ ಸಂಘವನ್ನು ಬೆಳೆಸಬೇಕು ಅದರೊಂದಿಗೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಸಹಕರಿಸಬೇಕೆಂದು ದಾನಿಗಳಲ್ಲಿ ಮನವಿ ಮಾಡಿಕೊಂಡರು.
ದಿವ್ಯ ಸಾನಿಧ್ಯವನ್ನು ವಹಿಸಿದ ಬಸವರಾಜ ದೇವರು ಮನ್ಸೂರಮಠ ಅವರು ಆಶೀರ್ವಚನ ನೀಡಿ ಮಾತನಾಡುತ್ತಾ- ಸಂಘವು ರಾಜ್ಯ ಮಟ್ಟದಲ್ಲಿ ಬೆಳೆಯಬೇಕು. ಅದರೊಂದಿಗೆ ಸಮಾಜದಲ್ಲಿ ಆಥರ್ಿಕವಾಗಿ ಹಿಂದುಳಿದ ವಿದ್ಯಾಥರ್ಿಗಳಿಗೆ ಉಚಿತವಾದ ಶಿಕ್ಷಣ ನೀಡುವಲ್ಲಿ ಸಂಘ ಪ್ರಯತ್ನಿಸಬೇಕು. ಕುರುಬ ಸಮಾಜದ ಯುವಕರು, ಉನ್ನತ ಶಿಕ್ಷಣ ಪಡೆದು ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಬೇಕು. ಆ ದಿಸೆಯಲ್ಲಿ ಜ್ಞಾನಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸತ್ಕಾರ ಕಾರ್ಯಕ್ರಮ ಸಮಾಜದ ಋಣ ತೀರಿಸಲು ಯುವ ಪೀಳಿಗೆ ಮುಂದಾಗಬೇಕು. ಒಟ್ಟಾಗಿ ದುಡಿಯಲು ಪ್ರಯತ್ನಿಸಿ ಎಂದು ಅವರು ಕರೆ ನೀಡಿದರು.
ದಾನಿಗಳಿಗೆ, ಕುರುಬ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಎಸ್.ಎಸ್.ಎಲ್.ಸಿ., ಪಿಯುಸಿ ಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾಥರ್ಿಗಳನ್ನು ಸತ್ಕರಿಸಲಾಯಿತು.
ಶಿವಾನಂದ ಶಂಭೋಜಿ ಅವರು ಸ್ವಾಗತಿಸಿದರು. ಕೆ.ಎಸ್. ಕಟಗಿ, ಪ್ರಕಾಶ ಭೂತಾಳಿ ಅವರು ಅತಿಥಿಗಳನ್ನು ಪರಿಚಯಿಸಿದರು, ಸಂಘದ ಕಾರ್ಯದಶರ್ಿ ಡಾ ಮಾಲತೇಶ ಚೂರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ಹನುಮಗೌಡ ವರದಿವಾಚನ ಮಾಡಿದರು, ಸಿ.ಬಿ. ಮುತ್ತಗಿ ಸತ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು, ಬಸವರಾಜ ಹೊರಕೇರಿ ಅವರು ಕಾರ್ಯಕ್ರಮ ನಿರೂಪಿಸಿದರು.ಕುಮಾರ ಪಡೆಪ್ಪನವರ ಅವರು ವಂದಿಸಿದರು.