ಅಭ್ಯರ್ಥಿಗಳಿಗೆ ಕೌಶಲ್ಯ ಉನ್ನತಗೊಳಿಸುವ ಯೋಜನೆ ಹೊಂದಿದ್ದು, ಇ-ಕಾಮರ್ಸ್ ಕಾರ್ಯಬಲವನ್ನು ನಿರ್ಮಿಸಲು ಮುಂದಾಗಿದೆ
ಬೆಳಗಾವಿ 12: 2024ರಲ್ಲಿ ಅಕಾಡೆಮಿಯು 3,000 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 600 ಮಹಿಳೆಯರನ್ನು ಒಳಗೊಂಡು, ಅವುಗಳಿಗೆ ಪ್ರಮಾಣಪತ್ರ ನೀಡಿದೆ. ಈ ಮೂಲಕ, ಭಾರತದ ಯುವಜನತೆಗೆ ಇ-ಕಾಮರ್ಸ್ ಕೌಶಲ್ಯವನ್ನು ನೀಡುತ್ತಾ, ಸಮಾವೇಶಕ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ಹಾಗೂ ಅರ್ಹ ಕಾರ್ಯಬಲದ ಆವಶ್ಯಕತೆಯನ್ನು ಪೂರೈಸಲು ಸಹಾಯ ಮಾಡುತ್ತಿದೆ.
ಬೆಂಗಳೂರು, ಡಿಸೆಂಬರ್ 12, 2024: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ 2021 ರಲ್ಲಿ ಸಪ್ಲೈ ಚೇನ್ ಆಪರೇಷನ್ಸ್ ಅಕಾಡೆಮಿ (ಎಸ್ ಸಿಒಎ) ಯನ್ನು ಆರಂಭಿಸಿದ್ದು, ಇದರ ಮೂಲಕ ಇ-ಕಾಮರ್ಸ್ ಸಪ್ಲೈ ಚೇನ್ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ನೀಡುವುದರ ಜೊತೆಗೆ ಪ್ರಮಾಣೀಕರಿಸುವ ಉಪಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಸ್ಥಳೀಯ ಪ್ರದೇಶಗಳ ಸುತ್ತಮುತ್ತಲಿನ ಹಿಂದುಳಿದ ಸಮುದಾಯಗಳ ಯುವ ಜನಾಂಗಕ್ಕೆ ಸಂಪೂರ್ಣ ಉಚಿತವಾಗಿ ಉದ್ಯಮ ಸಂಬಂಧಿತ ತರಬೇತಿಯನ್ನು ನೀಡಿ ಇ-ಕಾಮರ್ಸ್ ಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುವಂತೆ ಮಾಡುವ ಕೆಲಸವನ್ನು ಎಸ್ ಸಿಒಎ ಮಾಡುತ್ತಿದೆ. ಈ ಮೂಲಕ ಸ್ಥಳೀಯ ಸಪ್ಲೈ ಚೇನ್ ಪರಿಸರ ವ್ಯವಸ್ಥೆಯನ್ನು ಇನ್ನಷ್ಟು ಸಬಲವನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದೆ. ಎಸ್ ಸಿಒಎ 2024 ರಲ್ಲಿ 3,000 ಕ್ಕೂ ಅಧಿಕ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಿದೆ. ಇದರಲ್ಲಿ ಶೇ.20 ರಷ್ಟು ಮಹಿಳೆಯರು ಸೇರಿದ್ದಾರೆ. ಈ ಮೂಲಕ ಯುವ ಪೀಳಿಗೆಯನ್ನು ವೈವಿಧ್ಯತೆ ಮತ್ತು ಸೇರೆ್ಡಯಲ್ಲಿ ಫ್ಲಿಪ್ ಕಾರ್ಟ್ ನ ಬದ್ಧತೆಯನ್ನು ತೋರಲಾಗುತ್ತಿದೆ. ಈ ಉಪಕ್ರಮದಡಿ ಅಭ್ಯರ್ಥಿಗಳಿಗೆ ಫ್ಲಿಪ್ ಕಾರ್ಟ್ ನ ಪ್ಲಾಂಟ್ ಗಳಲ್ಲಿ 45 ದಿನಗಳ ನೈಜ ಪ್ರಪಂಚದ ಕಾರ್ಯಾಚರಣೆಯ ಕೌಶಲ್ಯಗಳನ್ನು ಹೇಳಿಕೊಡಲಾಗುತ್ತದೆ ಮತ್ತು ಆನ್ ಲೈನ್ ತರಗತಿಯನ್ನೂ ನಡೆಸಿ ಅಲ್ಲಿ ಉದ್ಯೋಗಾಧಾರಿತ ತರಬೇತಿಯನ್ನೂ ನೀಡಲಾಗುತ್ತದೆ.
ಈ ನಿರ್ದಿಷ್ಟ ಕಾರ್ಯಕ್ರಮದಿಂದಾಗಿ ಸ್ಥಳೀಯ ಸುತ್ತಮುತ್ತಲಿನ ಯುವಕರು, ಮಹಿಳೆಯರು, ವಿಶೇಷ ಚೇತನರು, ರಕ್ಷಣಾ ಸಿಬ್ಬಂದಿ ಮತ್ತು ತೃತೀಯಲಿಂಗಿಗಳ ಸಮುದಾಯದ ಜನರಿಗೆ ಇ-ಕಾಮರ್ಸ್ ಕ್ಷೇತ್ರದಲ್ಲಿ ತಮ್ಮ ಉದ್ಯೋಗವನ್ನು ಪಡೆದುಕೊಳ್ಳಲಿರುವ ಅವಕಾಶಗಳು ಹೆಚ್ಚು ಸಿಗುವಂತಾಗಿದೆ. ಈ ಬಗ್ಗೆ ಮಾತನಾಡಿದ ರೀಕಾಮರ್ಸ್ ಮತ್ತು ಕಸ್ಟಮರ್ ಎಕ್ಸ್ ಪೀರಿಯೆನ್ಸ್ ನ ಹಿರಿಯ ಉಪಾಧ್ಯಕ್ಷ ಮತ್ತು ಸಪ್ಲೈ ಚೇನ್ ನ ಮುಖ್ಯಸ್ಥ ಹೇಮಂತ್ ಬದ್ರಿ ಅವರು, “ಲಕ್ಷಾಂತರ ಸ್ಥಳೀಯ ಕಂಪನಿಗಳು ತಮ್ಮ ಇ-ಕಾಮರ್ಸ್ ಪ್ರಯಾಣದಲ್ಲಿ ಬೆಳವಣಿಗೆ ಹೊಂದಲು ಮತ್ತು ದೇಶದ ಅಂತರ್ಗತ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಲು ಸಹಾಯ ಮಾಡುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಬದ್ಧವಾಗಿದೆ. ಈ ಸಪ್ಲೈ ಚೇನ್ ಆಪರೇಷನ್ ಅಕಾಡೆಮಿಯು ವಿದ್ಯಾರ್ಥಿಗಳು ಮತ್ತು ನೀರೀಕ್ಷಿತ ವೃತ್ತಿಪರರಿಗೆ ಉಪಯುಕ್ತ ಕೌಶಲ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಪ್ರಮುಖವಾಗಿ ಇ-ಕಾಮರ್ಸ, ರೀಟೇಲ್ ವ್ಯವಹಾರ ಮತ್ತು ಉಗ್ರಾಣದಲ್ಲಿ ಈ ಉಪಕ್ರಮವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಇ-ಕಾಮರ್ಸ್ ವಲಯಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ತನ್ನನ್ನು ಅರೆ್ಣ ಮಾಡಿಕೊಂಡಿರುವ ಎಸ್ ಸಿಒಎ, ಈ ಉಪಕ್ರಮದ ಮೂಲಕ ಕೌಶಲ್ಯಭರಿತ ಉದ್ಯೋಗಿಗಳ ತುರ್ತು ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ” ಎಂದು ತಿಳಿಸಿದರು.
ಎಸ್ ಸಿಒಎ ಯುವಕರಿಗೆ ತರಬೇತಿ ಅವಧಿಯಲ್ಲಿ ಯಾವುದೇ ಹಣಕಾಸಿನ ಅಡೆತಡೆಗಳಿಲ್ಲದೇ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಇದು ವೃತ್ತಿಪರ ಪ್ರಗತಿಯನ್ನು ಹೊಂದಲು ಎಲ್ಲರಿಗೂ ಅವಕಾಶವನ್ನು ಕಲ್ಪಿಸುವ ರೀತಿಯಲ್ಲಿ ಫ್ಲಿಪ್ ಕಾರ್ಟ್ ಪಠ್ಯಕ್ರಮವನ್ನು ರೂಪಿಸಲಾಗಿದೆ ಮತ್ತು ಅದರಂತೆ ನಿರ್ವಹಣೆಯನ್ನೂ ಮಾಡಲಾಗುತ್ತದೆ. ಇದು ಉದ್ಯಮದ ಕ್ರಿಯಾತ್ಮಕವಾದ ಬೇಡಿಕೆಗಳಿಗೆ ಕಸ್ಟಮೈಸ್ ಮಾಡಿದ ಸಂಪೂರ್ಣ ಮತ್ತು ತೀವ್ರ ರೀತಿಯಾದ ಕಲಿಕೆಯ ಅನುಭವವನ್ನು ನೀಡುತ್ತದೆ. ಎಸ್ ಸಿಒಎ ಯಲ್ಲಿ ಪಾಲ್ಗೊಳ್ಳುವವರಿಗೆ ಉದ್ಯಮ-ಸಂಬಂಧಿತ ಕೌಶಲ್ಯಗಳನ್ನು ನೀಡುತ್ತದೆ ಮತ್ತು ಅವರ ಆಸಕ್ತಿಗಳಿಗೆ ತಕ್ಕಂತೆ ವೈವಿಧ್ಯಮಯ ಇ-ಕಾಮರ್ಸ್ ಡೊಮೇನ್ ಗಳಲ್ಲಿ ಅನುಭವವನ್ನು ಪಡೆಯಲು ಅವರಿಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ. ಇಲ್ಲಿನ ಪಠ್ಯಕ್ರಮವು ವೇರ್ ಹೌಸ್ ಅಸೋಸಿಯೇಟ್ ಟ್ರೈನಿಂಗ್ ಮಾಡ್ಯೂಲ್ ಅನ್ನು ಹೊಂದಿದ್ದು, ಇದು ಪಿಕ್ಕರ್, ಪುಟ್ಟರ್, ಪ್ಯಾಕರ್, ಸೆಗ್ರಿಗೇಟರ್, ಸಾರ್ಟರ್, ಕ್ವಾಲಿಟಿ ಚೆಕ್ ಎಕ್ಸಿಕ್ಯೂಟಿವ್, ಡೇಟಾ ಎಂಟ್ರಿ ಆಪರೇಟರ್ ಮತ್ತು ಇಶ್ಯೂ ರೆಸಲ್ಯೂಶನ್ ಎಕ್ಸಿಕ್ಯೂಟಿವ್ ನಂತಹ ಅಗತ್ಯ ಕಾರ್ಯಾಚರಣೆಯ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಸಿದ್ಧಪಡಿಸುತ್ತದೆ. ಈ ಸಮಗ್ರ ವಿಧಾನವು ಇ-ಕಾಮರ್ಸ್ ಪೂರೈಕೆ ಜಾಲ ವಲಯದಲ್ಲಿ ಬದಲಾಗುತ್ತಿರುವ ಬೇಡಿಕೆಗಳನ್ನು ನಿಭಾಯಿಸಲು ತರಬೇತಿ ಪಡೆದವರು ಸಿದ್ಧರಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ ಮತ್ತು ಭಾರತದ ವೇಗವಾಗಿ ಬೆಳೆಯುತ್ತಿರುವ ವ್ಯವಹಾರಗಳಲ್ಲಿ ಒಂದಾದ ಕ್ಷೇತ್ರ ಎಂಬುದನ್ನು ಖಚಿತಪಡಿಸುತ್ತದೆ.
ಹಲವು ವರ್ಷಗಳಿಂದ ಫ್ಲಿಪ್ ಕಾರ್ಟ್ ದೇಶಾದ್ಯಂತ ತನ್ನ ಸಾವಿರಾರು ಸಪ್ಲೈ ಚೇನ್ ಸಿಬ್ಬಂದಿಗೆ ತರಬೇತಿಯನ್ನು ನೀಡಿದೆ. ಇದರಿಂದ ಸಿಬ್ಬಂದಿಯು ತಮ್ಮ ಕೌಶಲ್ಯಮಟ್ಟವನ್ನು ಹೆಚ್ಚಿಸಿಕೊಳ್ಳಲು ಮತ್ತು ಅರ್ಥಪೂರ್ಣವಾದ ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶಗಳನ್ನುಗಳಿಸಿದ್ದಾರೆ.