ಕಾಗವಾಡ 04: ಪಟ್ಟಣದ ಸ್ವಚ್ಛತೆಗಾಗಿ ಪೌರಕಾಮರ್ಿಕರು ದಿನನಿತ್ಯ ಕಾರ್ಯ ನಿರ್ವಹಿಸುತ್ತಾರೆ. ಪಟ್ಟಣ ಸ್ವಚ್ಛತೆ ಕಾಪಾಡವುದು ಅವರ ಕೆಲಸವಾದರು ಅವರಿಗೆ ಜೀವ ರಕ್ಷಣೆ ಭದ್ರತೆ ಇರುವದಿಲ್ಲಾ. ಈ ಕಾರಣ ಪುರಸಭೆ ವತಿಯಿಂದ ಎಲ್ಲ ಪೌರಕಾಮರ್ಿಕರಿಗಾಗಿ ಜೀವ ವಿಮೆ ಪಾಲಿಸಿ ಮಾಡಲಾಗಿತ್ತು. ಪೌರಕಾಮರ್ಿಕ ಮಾಳಪ್ಪಾ ಕಾಂಬಳೆ ಇವರ ನಿಧನದವಾದ ನಂತರ, ಇವರ ಕುಟುಂಬದವರಿಗೆ 1.50 ಲಕ್ಷ ರೂ. ಚೆಕ್ ಶಾಸಕ ಶ್ರೀಮಂತ ಪಾಟೀಲ ಇವರಿಂದ ವಿತರಿಸಲಾಯಿತು.
ಸೋಮವಾರ ದಿ. 3ರಂದು ಉಗಾರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಾಸಕರು ಚೆಕ್ ಹಸ್ತಾಂತರಿಸಿದರು.
ಪೌರಕಾಮರ್ಿಕರು ಚರಂಡಿ ಸ್ವಚ್ಛತೆಗೊಳಿಸುವುದು, ತ್ಯಾಜ ವಸ್ತುಗಳು ಸಂಗ್ರಹಿಸಿ ಸಾಗಿಸುವುದು ಮುಂತಾದ ಕಾರ್ಯ ಮಾಡುತ್ತಾರೆ. ಅದರಲ್ಲಿ ಯಾವುದೇ ಹಾವು ಕಡಿತ, ಇನ್ನಿತರ ಭಯ ಇರುತ್ತದೆ. ಇವರ ಕುಟುಂಬಗಳಿಗೆ ಭದ್ರತೆ ಇಲ್ಲವಾಗಿತ್ತು. ಪುರಸಭೆಯಲ್ಲಿ ಪೌರಕಾಮರ್ಿಕರಿಗೆ ಭದ್ರತೆ ನೀಡಲು ಜೀವ ವಿಮೆ ಪಾಲಿಸಿ ಮಾಡಲಾಗಿದೆ ಎಂದು ಪುರಸಭೆ ಸದಸ್ಯ ಮಂಜುನಾಥ ತೇರದಾಳೆ ಹೇಳಿದರು.
ಪೌರಕಾಮರ್ಿಕರಿಗೆ ಸನ್ಮಾನ:
ಕಳೆದ 9 ತಿಂಗಳಗಳಿಂದ ಪೌರ ಕಾಮರ್ಿಕರಿಗೆ ಸರಕಾರದಿಂದ ದೊರೆಯುವ ಸಂಬಳ ನೀಡಿಲ್ಲಾ. ಇದು ರಾಜ್ಯಾದ್ಯಂತ ಸಮಸ್ಯೆಯಿದೆ. ಇದಕ್ಕೆ ಬಲವಾದ ಕಾರಣವುಯಿದೆ. ಆದರೂ, ಪುರಸಭೆಯಿಂದ ಕಾಮರ್ಿಕರಿಗೆ ಸ್ವಲ್ಪಮಟ್ಟದಲ್ಲಿ ಸಂಬಳ ನೀಡುತ್ತಾ ಬಂದಿದ್ದೇವೆ. 20 ಕಾಮರ್ಿಕರ ಕೆಲಸವಿದ್ದರೂ ಪುರಸಭೆಯಲ್ಲಿ 9 ಕಾಮರ್ಿಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪ್ರಾಮಾಣಿಕ ಸೇವೆ ಕಂಡು ಪುರಸಭೆ ವತಿಯಿಂದ ಅವರನ್ನು ಶಾಲ್ ಹೊದಿಸಿ, ಶಾಸಕರು ಸನ್ಮಾನಿಸಿದರು ಎಂದು ಪುರಸಭೆ ಸದಸ್ಯ ಪ್ರಫೂಲ ಥೋರುಶೆ ಹೇಳಿದರು.
ಪುರಸಭೆ ಆಧ್ಯಕ್ಷ ಶಶಿಕಾಂತ ಕಾಂಬಳೆ, ಉಪಾಧ್ಯಕ್ಷೆ ಸ್ವಾತಿ ಕುಂಬಾರ, ಉಜ್ವಲಾ ಶೆಟ್ಟಿ, ಸುಭಾಷ ಕುರಾಡೆ, ಅಲ್ತಾಫ ನದಾಫ, ಅವಿನಾಶ ಮೋರೆ, ನಂದಿಣಿ ಫರಾಕಟ್ಟೆ, ಬಾಳಕೃಷ್ಣ ಪಾಟೀಲ, ಸುರೇಶ ಥೋರುಶೆ, ಸುಜಯ ಫರಾಕಟ್ಟೆ, ಇಂದುತಾಯಿ ಬಸ್ತವಾಡೆ, ಪ್ರಕಾಶ ಥಬಾಜ, ವಿಜಯ ಆಸೂದೆ, ಶ್ರೀಕಾಂತ ಖರಾಡೆ, ಸೇರಿದಂತೆ ಅನೇಕರು ಇದ್ದರು.