ಕಾಗೆ ಕುಟುಂಬದವರಿಗೆ ಈರಣ್ಣ ಕಡಾಡಿ ಸಾಂತ್ವನ; ಜಿಲ್ಲಾಧಿಕಾರಿ; ಎಸ್‌ಪಿ ಭೇಟ್ಟಿ
ಕಾಗವಾಡ, 08; ಶಾಸಕ ರಾಜು ಕಾಗೆ ಅವರ ಜೇಷ್ಠ ಸುಪುತ್ರಿ ಕೃತಿಕಾ ಅನೀಲ ಪಾಟೀಲ ಅವರು ಇತ್ತೀಚಿಗಷ್ಟೇ ನಿಧನ ಹೊಂದಿದ್ದು, ಅವರ ಕುಟುಂಬ ವರ್ಗದರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ, ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಶಾಸಕರ ಮನೆಗೆ ಭೇಟ್ಟಿ ನೀಡಿ, ಅವರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ್ದಾರೆ. ಐಎಎಸ್ ಓದಿರುವ ಕೃತಿಕಾ ಪಾಟೀಲ 36ನೇ ಅತೀ ಚಿಕ್ಕ ವಯಸ್ಸಿನಲ್ಲಿ ನಿಧನ ಹೊಂದಿರುವುದು ನಮಗೆಲ್ಲ ನೋವನ್ನುಂಟು ಮಾಡಿದೆ. ಭಗವಂತನೂ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ನಿಮಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನೂ ದಯಪಾಲಿಸಲಿ ಎಂದು ಈರಣ್ಣ ಕಡಾಡಿ ಸಾಂತ್ವನ ಹೇಳಿದರು. ಈ ವೇಳೆ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ತಹಸೀಲ್ದಾರ ರಾಜೇಶ ಬುರ್ಲಿ, ಡಿವೈಎಸ್‌ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಮಾಜಿ ವಿಧಾನ ಪರಿಷತ ಸದಸ್ಯ ವಿವೇಕರಾವ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ ಸಹ ಇದ್ದರು.