ಸಮ್ಮೇಳನ ಗೋಷ್ಠಿಯಲ್ಲಿ ಕುಲಕರ್ಣಿ ಅವರಿಗೆ ಆಮಂತ್ರಣ
ವಿಜಯಪುರ- 17: ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರನ್ನು 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಗೋಷ್ಠಿಯೊಂದರಲ್ಲಿ ಡಿ.21 ಬೆಳಿಗ್ಗೆ 9.30 ಗಂಟೆಗೆ ಉತ್ತರ ಕರ್ನಾಟಕದ ಜೀವನಾಡಿಯಾದ ಕೃಷ್ಣೆ ಮತ್ತು ಮಹದಾಯಿ ಬಗ್ಗೆ ಮಾತನಾಡಲು ಆಮಂತ್ರಿಸಿದ್ದಾರೆಂದು ಸಂಯೋಜನಾಧಿಕಾರಿ ಡಾ. ವಿ.ಡಿ.ಐಹೊಳ್ಳಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.