ನಿರ್ಭಯ ವಿಶೇಷ ಮಹಿಳಾ ಪೊಲೀಸ್ ಪಡೆಗೆ ಚಾಲನೆ
ಹಾವೇರಿ: ನಿರ್ಭಯ ಹೆಸರು ಕೇಳಿದರೆ ಪುಂಡಪೋಕರಿಗಳು ಓಡಿಹೋಗುವ ಸನ್ನಿವೇಶ ನಿಮರ್ಾಣವಾಗಬೇಕು. ಈ ನಿಟ್ಟಿನಲ್ಲಿ 'ನಿರ್ಭಯ' ವಿಶೇಷ ಮಹಿಳಾ ಪೊಲೀಸ್ ಪಡೆ ಚುರುಕುತನದಿಂದ ಕಾರ್ಯನಿರ್ವಹಿಸಬೇಕು ಎಂದು ದಾವಣಗೆರೆ ಪೂರ್ವ ವಲಯ ಐ.ಜಿ.ಪಿ ಬಿ.ದಯಾನಂದ ಅವರು ಹೇಳಿದರು.
ಶುಕ್ರವಾರ ನಗರದ ಶಿವಶಕ್ತಿ ಪ್ಯಾಲೇಸ್ನಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಲಾದ ನಾಗರಿಕರ ಬಂದೂಕು ತರಬೇತಿ ಕಾರ್ಯಕ್ರಮದ ಸಮಾರಂಭ ಹಾಗೂ 'ನಿರ್ಭಯ' ವಿಶೇಷ ಮಹಿಳಾ ಪೊಲೀಸ್ ಪಡೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿವ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಮಟ್ಟಾಹಾಕುವ ಉದ್ದೇಶದಿಂದ ರಾಜ್ಯಾದ್ಯಂತ ವಿವಿಧ ಹೆಸರಿನಲ್ಲಿ ವಿಶೇಷ ಮಹಿಳಾ ಪೊಲೀಸ್ ಪಡೆಗಳು ಕಾರ್ಯನಿರ್ವಹಿಸುತ್ತಿವೆ.
ಬೆಂಗಳೂರಿನಲ್ಲಿ ಮಹಿಳಾ ಸಿಬ್ಬಂದಿಯೊಳಗೊಂಡ ಅಭಯ ಹೆಸರಿನ ಗಸ್ತುವಾನ ಕಾರ್ಯನಿರ್ವಹಿಸುತ್ತಿದೆ. ಮೈಸೂರಿನಲ್ಲಿ ಚಾಮುಂಡಿ ಹೆಸರಿನಲ್ಲಿ, ಬೇರೆ ಕಡೆಯಲ್ಲಿ ಚನ್ನಮ್ಮ ಹೆಸರಿನಲ್ಲಿ ಕಾರ್ಯಪ್ರವೃತ್ತರಾದರೆ ಹಾವೇರಿಯಲ್ಲಿ ನಿರ್ಭಯ ಹೆಸರಿನಲ್ಲಿ ಕಾಯರ್ಾರಂಭ ಮಾಡಲಾಗುತ್ತಿದೆ.
ಈ ಪಡೆಗಳಿಗೆ ಈಗಾಗಲೇ ಅಗತ್ಯ ತರಬೇತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಗಸ್ತು ವಾಹನ ನೀಡಲಾಗುವುದು ಹಾಗೂ ಹೆಚ್ಚಿನ ತರಬೇತಿ ಹಾಗೂ ಸೌಲಭ್ಯಗಳು ಬೇಕು ಎಂದು ಕಂಡುಬಂದರೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಇತ್ತೀಚಿಗೆ ನಾಗರಿಕ ಬಂದೂಕು ತರಬೇತಿ ಸಾಕಷ್ಟು ಪ್ರಚಲಿತ ಪಡೆಯುತ್ತಿದೆ.
ನಾಗರಿಕರು ಆಯುಧ ಬಳಕೆ ಕುರಿತು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಆಯುಧ ಬಳಕೆ ಬಗ್ಗೆ ಮಾಹಿತಿ ಇಲ್ಲದಿದ್ದರೆ ಅವಘಡಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ ಹಾಗೂ ಈಗ ಆಯುಧ ಲೈಸನ್ಸ್ ಪಡೆಯಲು ತರಬೇತಿ ಕಡ್ಡಾಯವಾಗಿದೆ.
ನಾಗರಿಕ ಬಂದೂಕು ತರಬೇತಿ ಆಯೋಜನೆಯಿಂದ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯ ಉತ್ತಮ ಬಾಂಧವ್ಯ ಬೆಳೆಯಲು ಸಹಕಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 32 ಕಾನಸ್ಟೇಬಲ್ ಹಾಗೂ ಹೆಡ್ ಕಾನಸ್ಟೇಬಲ್ಗಳಿಗೆ ಮಹಿಳಾ ದೌರ್ಜನ್ಯ ತಡೆಗೆ ಹಾಗೂ ಆತ್ಮ ರಕ್ಷಣೆಗೆ ಒಳಾಂಗಣ ಹಾಗೂ ಹೊರಾಂಗಣ ತರಬೇತಿ ನೀಡಲಾಗಿದೆ.
ಕಿರುಕುಳ ನೀಡುವ ಪುಂಡಪೋಕರಿಗಳಿಗೆ ಮೊದಲು ಹಿರಿಯ ಸಮ್ಮುಖದಲ್ಲಿ ಬುದ್ದಿವಾದ ಹೇಳಲಾಗುವುದು. ಮತ್ತೆ ಕಿರಿಕುಳು ನೀಡಿದಲ್ಲಿ ನಿದರ್ಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿ.ಆರ್.ಟಿ.ಸಿ. ಕಾರ್ಯದಶರ್ಿ ಡಾ.ಮೃತ್ಯುಂಜಯ ತುಕರ್ಾಣಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಬಂದೂಕು ತರಬೇತಿ ಪಡೆದ ನಾಗರಾಜ ಈಳಗೇರಿ ಹಾಗೂ ಮಲ್ಲಿಕಾಜರ್ುನಯ್ಯ ಮಹಾಂತಿಮಠ ಅವರು ಅನಿಸಿಕೆ ಹಂಚಿಕೊಂಡರು.
ಪ್ರಮಾಣಪತ್ರ ವಿತರಣೆ: ಬಂದೂಕು ತರಬೇತಿ ಪಡೆದ ನಾಗರಿಕರಿಗೆ ಇದೇ ಸಂದರ್ಭದಲ್ಲಿ ಅಧಿಕಾರಿಗಳು ಪ್ರಮಾಣಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಜಗದೀಶ, ಡಿ.ವೈ.ಎಸ್.ಪಿ.ಕುಮಾರಪ್ಪ ಇತರರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 