ನಮ್ಮೂರ ಬಾನುಲಿ ರೇಡಿಯೋದಲ್ಲಿ ಶ್ರೀ ಸಿದ್ದಬಸವ ದೇವರ ಸಂದರ್ಶನ
Interview of Shri Siddha Basava Dev on Nammura Banuli Radio
ಯಮಕನಮರಡಿ, 30 : ಹುಕ್ಕೇರಿ ತಾಲ್ಲೂಕಿನ ಕರಗುಪ್ಪಿ-ಯಲ್ಲಾಪುರದಲ್ಲಿರುವ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ 90.8 ಎಫ್‌ಎಂನಲ್ಲಿ ಶನಿವಾರ ವಿಶೇಷ ಸಂದರ್ಶನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶೂನ್ಯ ಸಂಪಾದನಾ ಪೀಠ, ಹುಣಸಿಕೊಳ್ಳ ಮಠ, ಯಮಕನಮರಡಿ ಅವರ ಪೂಜ್ಯ ಶ್ರೀ ಸಿದ್ದಬಸವ ದೇವರು ಅವರು “ಅನುಭವ ಮಂಟಪದ ಆಡಳಿತ” ವಿಷಯದ ಕುರಿತು ತಮ್ಮ ದಾರ್ಶನಿಕ ಚಿಂತನೆಗಳು ಮತ್ತು ಸಾಮಾಜಿಕ ದೃಷ್ಟಿಕೋಣಗಳನ್ನು ಹಂಚಿಕೊಂಡರು.
ಶ್ರೀಗಳು ಅನುಭವ ಮಂಟಪದ ಐತಿಹಾಸಿಕ ಹಿನ್ನೆಲೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಮೇಲೆ ಆಧಾರಿತ ಅದರ ಆಡಳಿತ ಮಾದರಿ ಹಾಗೂ ಇಂದಿನ ಆಡಳಿತ ವ್ಯವಸ್ಥೆಗೆ ಅದರ ಪ್ರಸ್ತುತತೆಯನ್ನು ಸರಳವಾಗಿ ವಿವರಿಸಿದರು. ಅವರ ವಿಚಾರಧಾರೆಗಳು ಶ್ರೋತೃಗಳಲ್ಲಿ ಚಿಂತನೆಗೆ ಪ್ರೇರಣೆ ನೀಡುವಂತಾಗಿದ್ದು, ಕಾರ್ಯಕ್ರಮವು ಜ್ಞಾನವರ್ಧಕ ಸಂಭಾಷಣೆಯಾಗಿ ಮೂಡಿಬಂದಿತು.
ಈ ವೇಳೆ ಪೂಜ್ಯ ಶ್ರೀ ಸಿದ್ದಬಸವ ದೇವರಿಗೆ ಸತ್ಕಾರ ನೆರವೇರಿಸಲಾಯಿತು. ಜೊತೆಗೆ ಆರ್ಜೆ ಮೀರಾ ಅವರು ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ವಿವಿಧ ಕಾರ್ಯಕ್ರಮಗಳ ಕುರಿತು ಪರಿಚಯ ನೀಡಿ ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಎಂ.ಎಸ್. ಚೌಗಲಾ, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ನಿರೂಪಕರಾದ ಆರ್ಜೆ ಚೇತನ, ಆರ್ಜೆ ಮೀರಾ, ಸಂದರ್ಶಕರಾದ ಡಾ. ಶ್ರೀರಂಗ ಜೋಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 