ಎಲ್ಲರಿಗೂ ಅಂತರ್ಜಾಲ ಬಳಕೆ ಅರಿವು ಅತ್ಯಗತ್ಯ: ಶೀರೀಶ್ ನಾಯಕ
Internet usage awareness is essential for everyone: Shirish Nayak
ಬೆಳಗಾವಿ, ಫೆ.11 : ಅಂತರ್ಜಾಲ ವಂಚಕರು ಹೊಸ ಹೊಸ ಮಾರ್ಗಗಳ ಮೂಲಕ ಸುಶಿಕ್ಷತರು ಸೇರಿದಂತೆ ಸಾಮಾನ್ಯ ಜನರನ್ನು ವಂಚನೆಗೊಳ ಪಡಿಸುತ್ತಿದ್ದಾರೆ. ಈ ವಂಚನೆಗಳ ತಡೆಗಟ್ಟಲು ಅಂತರ್ಜಾಲ ಬಳಕೆ ಕುರಿತು ಜಾಗೃತಿ ಹೊಂದಬೇಕು ಎಂದು ಎನ್.ಆಯ್.ಸಿ ಜಿಲ್ಲಾ ಸಂಯೋಜಕರಾದ ಶೀರೀಶ್ ನಾಯಕ ಅವರು ಹೇಳಿದರು.
ಮಾಹಿತಿ ತಂತ್ರಜ್ಞಾನ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಫೆ.11) ನಡೆದ ಸುರಕ್ಷಿತ ಅಂತರ್ಜಾಲ ದಿನ-2026ರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅಂತರ್ಜಾಲದ ಮೂಲಕ ಇಡೀ ಜಗತ್ತಿನ ಮಾಹಿತಿಯನ್ನು ಅಂಗೈಯಲ್ಲಿ ಪಡೆಯಬಹುದು. ಅಂತರ್ಜಾಲದ ಮೂಲಕ ನಾವು ಸಾಕಷ್ಟು ಪ್ರಯೋಜನೆ ಪಡೆದುಕೊಳ್ಳ ಬಹುದಾಗಿದೆ. ಆದರೆ ಅಷ್ಟೇ ಅಪಾಯವು ಇದ್ದು ಬಳಕೆ ಸಂದರ್ಭದಲ್ಲಿ ಜಾಗೂರಕರಾಗಿರಬೇಕು.
ಭವಿಷ್ಯದಲ್ಲಿ ಸುರಕ್ಷಿತ ಆನ್‌ಲೈನ್ ಸೇವೆ ಅತ್ಯಗತ್ಯವಾಗಿದ್ದು ಇದರ ಸಾಧಕ, ಬಾಧಕಗಳ ಕುರಿತು ಅರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿ, ಸಿಬ್ಬಂದಿಗಳು ಮುಂದಾಗುವಂತೆ ಅವರು ತಿಳಿಸಿದರು.
ಇಂಟರ್ನೆಟ್ ಮಾಹಿತಿ ಹಂಚಿಕೊಳ್ಳಲು ಪರಸ್ಪರ ಸಂವಹನಕ್ಕಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಇಂಟರ್ನೆಟ್ ಮೂಲಕ ವೈರಸ್ ಅಪಾಯ, ಹಣಕಾಸಿನ ವಂಚನೆಗಳು, ದಾರಿ ತಪ್ಪಿಸುವ ಮಾಹಿತಿ ಮುಂತಾದ ಅಪಾಯಗಳನ್ನು ನಾವು ನೋಡಬಹುದಾಗಿದೆ.
ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) (ಂಋ) ಎಐ ಬಗ್ಗೆ ಜಾಗೃತರಾಗಬೇಕು. ಎಐ ಸಂಬಂಧಿತ ಅಪಾಯಗಳ ಅರಿವು ಪ್ರತಿಯೊಬ್ಬರು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಯುಪಿಐ ಪೇಮೆಂಟ್ ಪಾವತಿಸುವಾಗ ಹಣ ವರ್ಗಾಯಿಸುವ ಸಂಖ್ಯೆ ಮತ್ತು ಲಿಂಕ್ ಅಧಿಕೃತವಾಗಿರುವ ಕುರಿತು ಖಚಿತ ಪಡಿಸಿಕೊಳ್ಳಬೇಕು.
ಸಾಮಾಜಿಕ ಜಾಲತಾಣ ಹ್ಯಾಕಿಂಗ್:
ದುರ್ಬಲ ಮತ್ತು ಮರುಬಳಕೆ ಮಾಡಿದ ಪಾಸವರ್ಡ್ ಗಳನ್ನು ಬಳಸಬಾರದು. ನಕಲಿ ವೆಬ್ ಸೈಟ್ ಬೇಟಿ ಮತ್ತು ಲಿಂಕ್ ಗಳ ಪ್ರವೇಶ ಅಪಾಯಕಾರಿ ಇದರಿಂದ ವಂಚನೆಗೆ ಒಳಗಾಗುವ ಸಾಧ್ಯತೆ ಇವೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಕಾನೂನು ಬಾಹಿರ ಉದ್ದೇಶಗಳಿಗೆ ಬಳಸಲಾಗಿದೆ ಎಂದು ನಕಲಿ ಕರೆಗಳು ಬೆದರಿಕೆಗಳು ಬರುವ ಸಾಧ್ಯತೆ ಇದ್ದು ಅಂತಹ ಕರೆಗಳು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬೇಕು.
ಫಿಶಿಂಗ್ ವೆಬ್ ಸೈಟ್: ಪ್ರಮುಖ ಇ ಕಾಮರ್ಸ್ ವೆಬ್ ಸೈಟ್ ಮಾದರಿಯಲ್ಲಿ ವಿನ್ಯಾಸಗೊಳಿಸಿ ಸೂಕ್ಷ್ಮವಾಗಿ ಅಕ್ಷರ ಬದಲಾವಣೆ ಮೂಲಕ ಗ್ರಾಹಕರನ್ನು ಸೆಳೆದು ಮೋಸ ವಂಚನೆಗಳು ನಡೆಯುತ್ತಿವೆ ಆದ್ದರಿಂದ ವೆಬ್ ಸೈಟ್ ಖಾತ್ರಿಪಡಿಸಿಕೊಂಡು ಪ್ರವೇಶ ಮಾಡಬೇಕು. ಅಂತರ್ಜಾಲ ಬಳಕೆ ಸಂದರ್ಭದಲ್ಲಿ ಅತೀ ಜಾಗರೂಕರಾಗಿರಬೇಕು. ಯಾವುದೇ ಸಂದರ್ಭದಲ್ಲೂ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳದಂತೆ ತಿಳಿಸಿದರು.
ಫಿಶಿಂಗ್ ವೆಬ್ ಸೈಟ್ ಅಧಿಕೃತ ಬ್ಯಾಂಕ್ ಮಾದರಿಯಲ್ಲೇ ಇದ್ದು ಕೆಲವು ವ್ಯತ್ಯಾಸ ಇರುತ್ತದೆ. ಹಾಗಾಗಿ ವೆಬ್ ಸೈಟ್ ಬಗ್ಗೆ ಅಧಿಕೃತ ಮಾಹಿತಿ ಪಡೆದು ಖಚಿತ ಪಡಿಸಿಕೊಂಡ ಬಳಿಕ ಮಾತ್ರ ಪ್ರವೇಶಿಸಬೇಕು. ಡಿಜಿಟಲ್ ಅರೆಸ್ಟ ಎಂಬುದು ಇಂದು ಹೆಚ್ಚು ಕೇಳಿ ಬರುತ್ತಿದೆ. ಇದರಲ್ಲಿ ವಂಚಕರು ಕರೇ ಮಾಡಿ ಸಂವಹನ ನಡೆಸುವ ಮೂಲಕ ವಂಚಿಸಲು ಪ್ರಯತ್ನಿಸುವರು.ಇಂತಹ ಸಂದರ್ಭದಲ್ಲಿ ತಮ್ಮ ಹತ್ತಿರದ ಪೋಲಿಸ್ ಠಾಣೆಗೆ ತೆರಳಿ ಈ ಕುರಿತು ದೂರು ದಾಖಲಿಸಬೇಕು.
ಅಪರಿಚಿತ ಲಿಂಕ್, ನಕಲಿ ಪ್ರೊಫೈಲ್ ಬಗ್ಗೆ ಎಚ್ಚರವಿರಲಿ. ಅಸುರಕ್ಷಿತ ಲಿಂಕ್, ಮೇಲ್ ಸಂದೇಶ ಗಳಿಗೆ ಪ್ರತಿಕ್ರಿಯಿಸಿ ವಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ಡಿಜಿಟಲ್ ಬಂಧನ ಹಗರಣದಲ್ಲಿ, ವಂಚಕರು ತಮ್ಮ ಇಂಟರ್ ನೆಟ್ ಬಳಕೆದಾರನು ವಂಚಿಸಲು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುತ್ತಾರೆ. ಅಂತಹ ಯಾವುದೇ ಯಾವುದೇ ಮಾಹಿತಿ ಬಂದರೆ ಸೈಬರ್ ಸಹಾಯವಾಣಿಗೆ ವರದಿ ಮಾಡಬೇಕು.
ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ ಎನ್ನುವುದು ಆನ್‌ಲೈನ್ ವಂಚನೆಯಾಗಿದ್ದು, ಇದರಲ್ಲಿ ಇಂಟರ್ ನೆಟ್ ಬಳಕೆದಾರರ ಹಣವನ್ನು ವಂಚಿಸುತ್ತಾರೆ. ಸ್ಕ್ಯಾಮರ್‌ಗಳು ನೆಟ್ ಬಳಕೆದಾರ ಬೆದರಿಸಿ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಸುಳ್ಳು ಆರೋಪ ಹೊರಿಸುತ್ತಾರೆ. ನಂತರ ಅವರು ಹಣಕ್ಕಾಗಿ ಬೇಡಿಕೆ ಇಡುತ್ತಾರೆ ಮತ್ತು ಪಾವತಿ ಮಾಡಲು ಅವರ ಮೇಲೆ ಒತ್ತಡ ಹೇರುತ್ತಾರೆ. ಇಂತಹ ಬೆದರಿಕೆ ಕುರಿತು ಎಚ್ಚರಿಕೆ ವಹಿಸಬೇಕು.
ಅಪರಿಚಿತ ಸಂದೇಶಗಳು, ಇ-ಮೇಲ್ ಗಳನ್ನು ಬಳಸಬಾರದು. ಅಂತರ್ಜಾಲ ಬಳಕೆ ಸಂದರ್ಭದಲ್ಲಿ ಬಲವಾದ ಪಾಸವರ್ಡಗಳನ್ನು ಹೊಂದಬೇಕು, ಒಂದೇ ಪಾಸವರ್ಡನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಬಳಸಬಾರದು, ಮೋಬೈಲ್ ಹಾಗೂ ಕಂಪ್ಯೂಟರ್ ಗಳಿಗೆ ಕಡ್ಡಾಯವಾಗಿ ಪಾಸವರ್ಡಗಳನ್ನು ಅಳವಡಿಸಬೇಕು. ಸಾಮಾಜಿಕ ಜಾಲತಾಣಗಳ ಬಳಕೆ ಸಂದರ್ಭದಲ್ಲಿ ಅತೀ ಜಾಗರೂಕತೆಯಿಂದ ಬಳಸಬೇಕು. ಅಲ್ಲದೇ ವೈಯಕ್ತಿಕ ಹಾಗೂ ಅನಗತ್ಯ ಮಾಹಿತಿಯನ್ನು ಹಂಚಿಕೊಳ್ಳಬಾರದು.
ಯಾವಾಗಲೂ ಪರವಾನಿಗೆ ಪಡೆದ ಸಾಫ್ಟವೆರ್ ಬಳಕೆ, ಅವಧಿ ಮೀರಿದ ಸಾಫ್ಟವೇರ ಮತ್ತು ಹಾರ್ಡವೇರ ಬಳಸದೇ ಇರುವ ಮೂಲಕ ಡಿಜಿಟಲ್ ಸ್ವಚ್ಛತೆಗೆ ಗಮನ ಹರಿಸಬೇಕು. ವಂಚನೆ ಸಂದರ್ಭದಲ್ಲಿ 1930 ಸಹಾಯವಾಣಿಗೆ ಕರೇ ಮಾಡಿ ದೂರು ದಾಖಲಿಸ ಬಹುದಾಗಿದೆ. ಸಹಾಯವಾಣಿಗೆ ದೂರು ದಾಖಲಿಸಿದ ನಂತರದ 24 ಗಂಟೆಯಲ್ಲಿ ಎಸ್.ಎಂ.ಎಸ್. ಮೂಲಕ ಸ್ವೀಕರಿಸಿದ ಸ್ವೀಕೃತ ಸಂಖ್ಯೆಯೊಂದಿಗೆ ಸೈಬರ ಸೆಲ್ ನಲ್ಲಿ ಎಫ್.ಆಯ್.ಆರ್. ದಾಖಲಿಸಬೇಕು ಎಂದು ಎನ್.ಆಯ್.ಸಿ ಜಿಲ್ಲಾ ಸಂಯೋಜಕರಾದ ಶೀರೀಶ್ ನಾಯಕ ಅವರು ತಿಳಿಸಿದರು. ಕಾರ್ಯಾಗಾರದಲ್ಲಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 