ಶ್ರೀಕಾಂತ್ ಕಲಾಲ್ ನೇತೃತ್ವದ ಬುಡಕನ್ ತಂಡಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ
International title for Budakan team led by Srikanth Kalal
ಶ್ರೀಕಾಂತ್ ಕಲಾಲ್ ನೇತೃತ್ವದ ಬುಡಕನ್ ತಂಡಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ
ಕೊಪ್ಪಳ 10: ಕೊಪ್ಪಳ ತಾಲೂಕಿನ ಹೃದಯ ಭಾಗದಲ್ಲಿರುವ ಸಾಯಿ ಬುಡಕನ್ ಸಂಸ್ಥೆ ಶಿವಮೊಗ್ಗದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಐದು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ದಿನಾಂಕ 09/08/2025 ರಂದು ಶಿವಮೊಗ್ಗದಲ್ಲಿ ನಡೆದ 6ನೇ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಕೊಪ್ಪಳದ ಪ್ರಖ್ಯಾತಿ ಸಂಸ್ಥೆಯಾದ ಸಾಯಿ ಬುಡಕನ್ ಕರಾಟೆ ಸಂಸ್ಥೆ ಶ್ರೀಕಾಂತ್ ಕಲಾಲ್ ನೇತೃತ್ವದಲ್ಲಿ ನಾಲ್ಕು ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿ ಐದು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.ಸಂಜಯ್ ಕುಮಟೆಯಲ್ಲಿ ಪ್ರಥಮ, ಗಣೇಶ್ ರೇವಣಪ್ಪ ಕಟಸ್ ವಿಭಾಗದಲ್ಲಿ ದ್ವಿತೀಯ, ಸಂತೋಷ್ ಕಟಸ್ ಹಾಗೂ ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ, ದೃತಿ ಬಿ ಕಟಾಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಸಾಯಿ ಬುಡಕನ್ ಕರಾಟೆ ಕ್ಲಬ್ ಮುಖ್ಯಸ್ಥ ಶ್ರೀಕಾಂತ್ ಕಲಾಲ್ ಶುಭ ಹಾರೈಸಿದರು. ಈ ವೇಳೆ ಶಿವಮೊಗ್ಗ ಸಿಟಿ ಕರಾಟೆ ಕ್ಲಬ್ ಸಂಸ್ಥೆಯ ಮುಖ್ಯಸ್ಥ ವಿನೋದ್ ಹಾಗೂ ಪೆರಾರಿ ಮೊಲಾಲಿ ಶುಟೋಕನ್ ಕರಾಟೆ ಅಮೆರಿಕ ಸಂಸ್ಥೆಯ ಅಧ್ಯಕ್ಷ ತರಬೇತಿದಾರ ಮೌಲ ಇನ್ನಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 