ವಾರ್ಡ ನಂ 11 ರಲ್ಲಿ ವಿಶ್ವ ಮಹಿಳಾ ದಿನಾಚರಣೆ
ಗದಗ 10: ನಗರದ 11ನೇ ವಾರ್ಡಿನ ಶಿವ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಮಹಿಳಾ ಸಂಘ, ಶಿವಬಸವ ಸುಧಾರಣಾ ಸಮಿತಿ ಹಾಗೂ ಶಿವ ಬಸವೇಶ್ವರ ಗಜಾನನ ಯುವಕ ಸಂಘದವರ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಾರ್ಡಿನ ಗುರು ಹಿರಿಯರು ಹಾಗೂ ಮಾತೆಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ರಂಗೋಲಿ ಸ್ಪರ್ಧೆ, ಭಕ್ತಿ ಗೀತೆ, ಜಾನಪದ ಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.