ಎನ್.ಜಿ.ಓ ಕಾಲೋನಿಯ ಶಿವಶಕ್ತಿ ಮಹಿಳಾ ಮಂಡಳದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಕೊಪ್ಪಳ 10: ನಗರದ. ಎನ್.ಜಿ.ಓ ಕಾಲೋನಿಯ ಶಿವಶಕ್ತಿ ಮಹಿಳಾ ಮಂಡಳದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಜರುಗಿತು. ಮಹಿಳಾ ದಿನಾಚರಣೆಯನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಲಾಯಿತು. ಉದ್ಘಾಟಿಸಿ ಬಳಿಕ ಮಾತನಾಡಿದ ಗೌರವ ಕಾರ್ಯದರ್ಶಿ ರೇಣುಕಾ ಎನ್.ಡೊಳ್ಳಿನ ಮಾತನಾಡಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ, ಇಪ್ಪತೈದು ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಹದಿಮೂರು ವಾರಗಳ ಕಾಲ ಮುಷ್ಕರ ನಡೆಸಿದ ಮಹಿಳೆಯರನ್ನು ಬಂಧಿಸಿದ್ದರು. ಮಹಿಳೆಯರ ಟ್ರೇಡ್ ಯೂನಿ ಯನ್ ಲೀಗ್‌ನವರು ಜಾಮೀನು ನೀಡಿ ಬಂಧಿತ ಮಹಿಳಾ ಕೆಲಸಗಾರರನ್ನು ಬಿಡಿಸಿಕೊಂಡರು. ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್‌ಕಿನ್. ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ ಹದಿನೇಳು ದೇಶಗಳ ಪ್ರತಿನಿಧಿಗಳು ಸೇರಿದ್ದರು. ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ಪ್ರಮುಖ ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು.
ಕ್ಲಾರಾ ಜೆಟ್‌ಕಿನ್ ಇದೇ ಸಮ್ಮೇಳನದಲ್ಲಿ ಮಾರ್ಚ್ ಎಂಟನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಭಾರತದಲ್ಲೂ ಮಹಿಳೆಯರು ಸ್ವಚ್ಛಂದವಾಗಿ ಬದುಕಲು ನಮಗೂ ಅನೇಕ ಹಕ್ಕುಗಳನ್ನು ನೀಡಿದ ಸಂವಿಧಾನ ಶಿಲ್ಪಿ, ಭಾರತ ಭಾಗ್ಯವಿಧಾತ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ನೀಡಿದ ಸಂವಿಧಾನ ನಮಗೆಲ್ಲರಿಗೂ ಸಮಾನ ಮೂಲಭೂತ ಹಕ್ಕು, ಕರ್ತವ್ಯಗಳನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ, ಇತಿಹಾಸವನ್ನು ಅರೆತು ಶಿಕ್ಷಣ ಪಡೆದು ಸಂಘಟಿತರಾಗಬೇಕಿದೆ ಎಂದರು.
ಮ್ಯೂಸಿಕಲ್ ಚೇರನ ಹಿರಿಯರ ವಿಭಾಗದಲ್ಲಿ ಅಮೃತವ್ವ ಹೂಗಾರ ವಿಜೇತೆ, ಕಿರಿಯರ ವಿಬಾಗದಲ್ಲಿ ರೇಣುಕಾ ಎನ್.ಡೊಳ್ಳಿನ ವಿಜೇತೆ, ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಸದಸ್ಯರಿಗೂ ಅಡುಗೆ ಬಳಸುವ ಮಸಾಲ ಖಾರಾದ ಪೊಟ್ಟಣವನ್ನು ಉಡುಗೊರೆಯಾಗಿ ರೇವತಿ ಹೀರೆಮಠ ನೀಡಿದರು. ಕಾರ್ಯಕ್ರಮದಲ್ಲಿ ರೇಣುಕಾ ದಿವಟರ್,ಕಸ್ತೂರಿ ಚಿಕರೆಡ್ಡಿ, ಶಕುಂತಲಾ ತಿಮ್ಮಿಕೇರಿ ಮಾತನಾಡಿದರು. ಅಧ್ಯಕ್ಷೆ ಗೌರಮ್ಮ ಗಾರವಾಡಮಠ, ಗೌರವ ಅಧ್ಯಕ್ಷೆ ಸುಮಿತ್ರ ಪುರಾಣಿಕ ಮಠ, ಉಪಾಧ್ಯಕ್ಷೆ ಗಂಗಮ್ಮ ಪಾಟೀಲ, ಅನ್ನಪೂರ್ಣ ಮಂಡಸೊಪ್ಪಿ, ನಿರ್ಮಲಾ ಸಾಲಿಮಠ ಉಪಸ್ಥಿತರಿದ್ದರು. ಸಹನಾ ಪಾಟೀಲ ಸ್ವಾಗತಿಸಿದರು, ಶಿಲ್ಪಾರಾಣಿ ಪುರಾಣಿಕಮಠ ನಿರೂಪಿಸಿದರು, ಸಹನಾ ಪಾಟೀಲ ಸ್ವಾಗತಿಸಿದರು.