ಅಕ್ಕನ ಬಳಗ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ
ಹಾವೇರಿ 16: ಇಲ್ಲಿಯ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಹುಕ್ಕೇರಿಮಠದ ಅಕ್ಕನ ಬಳಗ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಸಮಾರಂಭವನ್ನು ಉದ್ಘಾಟಿಸಿದ ಮುಂಡರಗಿಯ ಶಕುಂತಲಾ ಹಂಪಿಮಠ ಅವರು ಮಾತನಾಡಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕು.ಅವರಿಗೆ ಕೇಡು ಬತಯಸಿದರೆ, ಇಡೀ ಸಮಾಜಕ್ಕೆ ಕೇಡು ಬಯಸಿದಂತೆ. ರಾಮಾಯಣ ಮಹಾಭಾರತಗಳು ಈ ಮಾತಿಗೆ ಸರ್ವಕಾಲಿಕ ಸಾಕ್ಷಿಯಾಗಿವೆ ಎಂದರು. ಅಕ್ಕನ ಬಳಗದ ಗೌರವ ಅಧ್ಯಕ್ಷರಾದ ಲಲಿತಮ್ಮ ಹೊರಡಿ ಅವರು ಮಾತನಾಡಿ ಹುಕ್ಕೇರಿಮಠದ ಪೂಜ್ಯರ ಆಶೀರ್ವಾದ ಮತ್ತು ಅಕ್ಕಮಹಾದೇವಿ ಶರಣೆಯ ಚೇತನದಿಂದ 86 ವರ್ಷಗಳ ಕಾಲ ಬಳಗ ನಿರಂತರವಾಗಿ ಮಹಿಳಾ ಚಿಂತನೆಯನ್ನು ಮಾಡುತ್ತಾ ಬಂದಿದೆ ಎಂದರು. ಸನ್ಮಾನಿತರ ಪರವಾಗಿ ಮಾತನಾಡಿದ ದಾದಾಸಾಹೇಬ ಫಾಲ್ಕೆ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ರಾಜೇಶ್ವರಿ ಬಿಷ್ಟನಗೌಡ್ರ ಸಮಾಜದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಮಹಿಳೆಗೆ ಛಲ ಮತ್ತು ಆತ್ಮಬಲ ಬೇಕು ಎಂದರು.ಬಳಗಕ್ಕೆ ನಿರಂತರವಾಗಿ ಸೇವೆ ಸಲ್ಲಿಸಿದ ಹಿರಿಯ ಚೇತನಗಳಾದ ಕಸ್ತೂರಮ್ಮಾ ಆಟವಾಳಗಿ,ಅಕ್ಕಮಹಾದೇವಿ ಬೆನ್ನೂರ, ರಾಜೇಶ್ವರಿ ಬಿಷ್ಟನಗೌಡ್ರ ಹಾಗೂ ಸುರೇಖಾ ಮಳಗಿ ಅವರುಗಳನ್ನು ಸನ್ಮಾನಿಸಲಾಯಿತು. ಅಕ್ಕನಬಳಗದ ರೇಖಾ ಮಾಗನೂರ, ಹೇಮಾ ಮುದ್ಧಿ, ಕಸ್ತೂರಮ್ಮ ಮಹಾರಾಜಪೇಠ, ಸ್ಮೀತಾ ಕುರುಬಗೊಂಡ, ಶಿವಲೀಲಾ ಶಿರಸಪ್ಪನವರ, ಕಮಲಾ ಬುಕ್ಕಶೆಟ್ಟಿ, ಅರುಣಾ ಐರಣಿ,ಸುಮಾ ಗಡಾದ, ಮಂಜುಳಾ ಕಡ್ಡಿ ಮುಂತಾದವರು ಪಾಲ್ಗೊಂಡಿದ್ದರು.