ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ International Women's Day celebrated at Prajapita Brahmakumari Ishwari University

ಕೊಪ್ಪಳ 13: ಮಹಿಳೆಯರು ಸದ್ವಿಚಾರ ಸಚ್ಚಾರಿತ್ರ್ಯ ಸದ್ಗುಣಗಳಿಂದ ತಮ್ಮನ್ನು ಶೃಂಗರಿಸಿಕೊಳ್ಳಿ ಆಗ ಜೀವನವೇ ಸುಖ ಶಾಂತಿ, ಆನಂದಮಯ ಜೀವನವಾಗುತ್ತದೆ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ ಕರೆ ನೀಡಿದರು. ಅವರು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಏರಿ​‍್ಡಸಿದ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಾ ಮಹಿಳೆಯರು ಸಿನಿಮಾ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಗಳಿಗೆ ವಶರಾಗದೆ ಮರ್ಯಾದೆಯ ಚೌಕಟ್ಟಿನಲ್ಲಿ ಇದ್ದಾಗ ಅದೇ ಹೆಣ್ಣಿಗೆ ರಕ್ಷಣೆಯಾಗುತ್ತದೆ ನಮ್ಮ ದೇಶದಲ್ಲಿ ವಿದ್ಯೆಗೆ ಸರಸ್ವತಿ, ಧನ ಸಂಪತ್ತಿಗೆ ಲಕ್ಷ್ಮಿ, ಶಕ್ತಿಗೆ ದುರ್ಗೆಯನ್ನು ತೋರಿಸುತ್ತಾರೆ ಸ್ತ್ರೀಯರಿಗೆ ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯ ಗೌರವದ ಸ್ಥಾನವಿದೆ ಎಂದರು, ಮುಂದುವರೆದು ಮಾತನಾಡಿ ಮಹಿಳೆಯರಿಗೆ ಆಧ್ಯಾತ್ಮ ಬಲವೇ ಸತ್ಯವಾದ ರಕ್ಷಾ ಕವಚ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಆಗುವುದರ ಜೊತೆಗೆ ಮಾನಸಿಕವಾಗಿ ಆಂತರಿಕವಾಗಿ ಸಶಕ್ತರಾಗಬೇಕು.

ಅದಕ್ಕೆ ಆಧ್ಯಾತ್ಮ ಮತ್ತು ಧ್ಯಾನ ಆಧಾರವಾಗಿದೆ. ಮಹಿಳೆ ತ್ಯಾಗ ಸಹನೆ ಪ್ರೀತಿ ವಾತ್ಸಲ್ಯ ಕ್ಷಮೆಯ ಪ್ರತಿರೂಪ. ಮನೆ ಮಂದಿರವಾಗಬೇಕಾದರೆ ಮಹಿಳೆಯರ ಪಾತ್ರ ಬಹಳ ಮುಖ್ಯ ಎಂದರು. ಅತ್ತೆಯರು ಸೊಸೆಯರನ್ನ ಮಗಳಂತೆ ಕಾಣಬೇಕು ಸೊಸೆಯರು ಅತ್ತೆಯರನ್ನು ತಾಯಿಯಂತೆ ಕಾಣಬೇಕು ಈಶ್ವರಿಯ ಜ್ಞಾನಮಾರ್ಗದಲ್ಲಿ ನಡೆಯುತ್ತಾ ಪರಸ್ಪರ ಪ್ರೀತಿ ಸ್ನೇಹ ಹೊಂದಾಣಿಕೆಯಿಂದ ಜೀವನ ನಡೆಸಲು ತಿಳಿ ಹೇಳಿದರು ಇದೇ ಸಂದರ್ಭದಲ್ಲಿ ಅತ್ತೆಯರಿಗೆ ಸೊಸೆಯರಿಂದ ಸನ್ಮಾನ ಏರಿ​‍್ಡಸಲಾಗಿತ್ತು  ಸೊಸೆಯರು ತಮ್ಮ ಅತ್ತೆಯರಿಗೆ ಉಡುಗೊರೆ ನೀಡಿ ಸನ್ಮಾನಿಸಿ ಅವರಿಂದ ಆಶೀರ್ವಾದ ಪಡೆದರು ಅತ್ತೆಯರು ಸೊಸೆಯರಿಗೆ ಧನ್ಯವಾದ ಹೇಳಿದರು ಸುಮಾರು 500 ಜನ ಕಾರ್ಯಕ್ರಮದ ಲಾಭ ಪಡೆದು ಅರ್ಥಪೂರ್ಣ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು, ಬಿಕೆ ಸ್ನೇಹಕ್ಕ ಕಾರ್ಯಕ್ರಮ ನಿರೂಪಿಸಿದರು.