ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಹುಬ್ಬಳ್ಳಿ, 27; ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅವ್ವ ಸೇವಾ ಟ್ರಸ್ಟ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾನಪದ ಹಾಡನ್ನು ಪ್ರಸ್ತುತ ಪಡಿಸಿದ ವಿದ್ಯಾನಗರದ ಮೈತ್ರಿ ಮಹಿಳಾ ಮಂಡಳದ ಸದಸ್ಯರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಸಂತ ಲದ್ವಾ ಹಾಗೂ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕಸಾಪದ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಗೌರವ ಕಾರ್ಯದರ್ಶಿ ಪ್ರೊ ಕೆ.ಎಸ್.ಕೌಜಲಗಿ, ತಾಲುಕಾಧ್ಯಕ್ಷ ವಿದ್ಯಾ ವಂಟಮುರಿ, ಕಾರ್ಯದರ್ಶಿ ಸಿದ್ದಮ್ಮ ಅಡಿವೆಣ್ಣವರ, ಮೈತ್ರಿ ಮಹಿಳಾ ಮಂಡಳದ ಸದಸ್ಯರಾದ ರತ್ನಮಾಲಾ ಬದ್ದಿ, ವಿದ್ಯಾ ಕಾಟವೆ, ಪ್ರಭಾವತಿ ಪೂಜಾರಿ, ಸಂಗೀತಾ ಮೆಣನಿ, ರತ್ನಮಾಲಾ ಇರಕಲ್, ರಾಜೇಶ್ವರಿ ಮೇತ್ರಾಣಿ, ವಿದ್ಯಾ ಜಿತೂರಿ, ಹಾಗೂ ಎಸ್.ಕೆ.ಆದಪ್ಪನವರ, ಚನ್ನಬಸಪ್ಪ ಧಾರವಾಡಶೆಟ್ಟರ, ಶೋಭಾ ಜಾಬಿನ, ಮುಂತಾದವರು ಇದ್ದರು.