ಗದಗ: ಎಲ್ಲರಿಗೂ ಮನೆ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮಂಜೂರಾತಿ ಪಡೆದ ಅರ್ಹ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಕಾಯರ್ಾರಂಭ ಆದೇಶ ಪತ್ರಗಳನ್ನು ನವೆಂಬರ ಅಂತ್ಯದೊಳಗೆ ಒದಗಿಸಲು ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ಸೂಚಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ ದಿ.5ರಂದು ಜಿಲ್ಲೆಯ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರ ಪುರಸ್ಕೃತ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೌಸಿಂಗ ಫಾರ ಆಲ್ 2022ರ ವರೆಗೆ ಜಾರಿಯಲ್ಲಿದ್ದು ನಿಗದಿತ ಗುರಿ ಇರುವುದಿಲ್ಲ, ನಿವೇಶನ, ಮನೆ ಇರದ ಎಲ್ಲ ಬಡವರಿಗೆ ಸೂರು ಕಲ್ಪಿಸುವ ಕೇಂದ್ರ ಸಕರ್ಾರದ ವಸತಿ ಯೋಜನೆ ಇದಾಗಿದ್ದುಯೋಜನಾವಧಿಯೊಳಗೆ ಅರ್ಹರು ಅಜರ್ಿ ಸಲ್ಲಿಸಿದಲ್ಲಿ ಅದನ್ನು ಗ್ರಾ. ಪಂ.ಗಳು ಸ್ವೀಕರಿಸಿ ಮಂಜೂರಾತಿಗಾಗಿ ಕಳಿಸಬೇಕು. ಬಹು ಎಚ್ಚರಿಕೆಯಿಂದ ನಿವೇಶನ ರಹಿತ ಫಲಾನುಭವಿಗಳ ಮಾಹಿತಿಯನ್ನು ಅಪಲೋಡ ಮಾಡಬೇಕು. ಕೆಲವೆಡೆ ಅವರು ಬಾಡಿಗೆ ಇರುವ ಮನೆಗಳ ಮಾಹಿತಿ ತಂತ್ರಾಂಶದಲ್ಲಿ ನೀಡಿರುವದು ಕಂಡುಬಂದಿದ್ದು ತಪ್ಪು ಮಾಹಿತಿ ಒದಗಿಸಿ ಅರ್ಹರಿಗೆ ಸೌಲಭ್ಯ ತಪ್ಪಿಸಿದಲ್ಲಿ ಸಂಬಂಧಿತ ಅಧಿಕಾರಿಗಳೇ ಜವಾಬ್ದಾರರು. ಶ್ಯಾಮಪ್ರಸಾದ ಮುಖಜರ್ಿ ರೂಬರ್ನ ಯೋಜನೆಯಡಿ, ಜಿಲ್ಲೆಯ ಶಿರಹಟ್ಟಿ, ಮುಂಡರಗಿ ರೋಣ,ನರಗುಂದ ತಾಲೂಕುಗಳಲ್ಲಿ ಕೂಡಾ ಕ್ಲಸ್ಟರ ಆಯ್ಕೆಗೆ ಕ್ರಮ ಜರುಗಿಸಬೇಕು ಎಂದು ಸಂಸದ ಉದಾಸಿ ನುಡಿದರು.
ಸಭೆಯಲ್ಲಿ ಭಾಗವಹಿಸಿದ್ದ ರೋಣ ಶಾಸಕ ಕಳಕಪ್ಪ ಬಂಡಿ ಮಾತನಾಡಿ ನೀರಲಗಿ ಗ್ರಾಮ ಪಂಚಾಯತದಲ್ಲಿ ವಸತಿ ಯೋಜನೆಗೆ ಊರಿಂದ 8 ಕಿ.ಮಿ.ದೂರದ ಜಾಗೆ ಖರೀದಿಸಿದ್ದು ಇದರಿಂದ ಯೋಜನಾ ಉದ್ದೇಶವೇ ವಿಫಲವಾಗುತ್ತಿರುವುದನ್ನು ಉದಾಹರಿಸಿ ವಸತಿ ಅಥವಾ ಸಕರ್ಾರದ ಯೊಜನೆಗಳಿಗೆ ಜಮೀನು ಖರೀದಿಸುವಾಗ ಊರಿನಲ್ಲಿ ಅಥವಾ ಅಕ್ಕಪಕ್ಕದಲ್ಲಿ ವಸತಿಗೆ ಅನುಕೂಲ ಇರುವಂತೆ ಜಾಗೆ ಆಯ್ಕೆ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಗದಗ ಜಿಲ್ಲೆಯನ್ನು ಬರಪೀಡಿತವೆಂದು ರಾಜ್ಯ ಸಕರ್ಾರ ಘೋಷಿಸಿದ್ದು ಗ್ರಾಮೀಣ ಪ್ರದೇಶದಲ್ಲಿ ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಡಿ 21 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಲು ಗದಗ ಜಿ.ಪಂ. ಕ್ರಿಯಾಯೋಜನೆ ರೂಪಿಸಿದೆ. ಗ್ರಾ.ಪಂ.ಗಳು ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳ ಸಮನ್ವಯತೆ ಮೂಲಕ ಗ್ರಾಮಗಳಲ್ಲಿ ಕೃಷಿಕರಿಗೆ, ಕಾಮರ್ಿಕರಿಗೆ ಉದ್ಯೋಗದ ಜೊತೆಗೆ ಜಲ, ನೆಲ ಸಂವರ್ಧನೆ ಕಾಮಗಾರಿಗಳನ್ನು ಪ್ರಾರಂಭಿಸಲು ನಿದರ್ೇಶನ ನೀಡಿದರು.
ಗ್ರಾ.ಪಂ. ಮಟ್ಟದಲ್ಲಿ ಆಧಾರ ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು ಇಲ್ಲಿ ಪ್ರತೇಕವಾಗಿ ಒರ್ವ ಕಂಪ್ಯೂಟರ ಆಪರೇಟರ ಸಿಬ್ಬಂದಿಯನ್ನ ಪ್ರತಿ ಗ್ರಾ.ಪಂ.ಗೆ ಒದಗಿಸಲು ಸಕರ್ಾರಕ್ಕೆ ಪ್ರಸ್ತಾವನೆ ಕಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 2011ರ ಜನಗಣತಿ ರೀತ್ಯ 1,39,782 ಕುಟುಂಬಗಳಿದ್ದು ಇವುಗಳ ಪೈಕಿ 1,28,921 ಕುಟುಂಬಗಳು ಉದ್ಯೋಗ ಚೀಟಿಗಳನ್ನು ಪಡೆದಿವೆ. 3,25,130 ನೊಂದಾಯಿತ ಕೂಲಿಕಾಮರ್ಿಕರಿದ್ದು 2,60,918 ಕಾಮರ್ಿಕರ ಆಧಾರ ಜೊಡನೆಯಾದ ಬ್ಯಾಂಕ ಖಾತೆಗಳಿವೆ. 2014-15 ರಿಂದ 2018-19ರ ಅಕ್ಟೋಬರ ಅಂತ್ಯದ ವರೆಗೆ 204.44 ಕೋಟಿ ರೂ.ಗಳನ್ನು ಯೋಜನೆಯಡಿ ವೆಚ್ಚ ಮಾಡಲಾಗಿದೆ. 2017-18ರಲ್ಲಿ 26.75 ಲಕ್ಷ ಹಾಗೂ 2018ರ ಅಕ್ಟೋಬರ ಅಂತ್ಯದವರೆಗೆ 13.97 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಡೆಸಿದ ಸಮೀಕ್ಷೆ ರೀತ್ಯ ಮನೆ ಇಲ್ಲದ 45,014 ಹಾಗೂ ನಿವೇಶನ ಇಲ್ಲದ 25,051 ಕುಟುಂಬಗಳನ್ನು ಗುರುತಿಸಲಾಗಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ 2016-18ರ ಅವಧಿಯಲ್ಲಿ 5,548 ಗುರಿ ಪೈಕಿ 4,582 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು 1,817 ಮನೆಗಳು ಪೂರ್ಣಗೊಂಡಿದ್ದು, 1,539 ಪ್ರಗತಿಯಲ್ಲಿದ್ದು 1,221 ಮನೆಗಳ ನಿಮರ್ಾಣ ಕಾರ್ಯ ಆರಂಭವಾಗಿಲ್ಲ. 13ನೇ ಹಣಕಾಸು ಯೋಜನೆಯಡಿ 122 ಗ್ರಾಮ ಪಂಚಾಯತಗಳಿಗೆ 2010-15ರ ಅವಧಿಯಲ್ಲಿ 37.01 ಕೋಟಿ ರೂ. ಬಿಡುಗಡೆಯಾಗಿದ್ದು 4264 ಕಾಗಾರಿಗಳಿಗೆ 36 ಕೋಟಿ ರೂ. ವೆಚ್ಚ ಹಾಗೂ 14ನೇ ಹಣಕಾಸು ಯೋಜನೆಯಡಿ 2015-18ರ ಅವಧಿಯಲ್ಲಿ 41.07 ಕೋಟಿ ಬಿಡುಗಡೆಯಾಗಿದ್ದು 4195 ಕಾಮಗಾರಿಗಳಿಗೆ 37.14 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಜಿ.ಪಂ. ಉಪಕಾರ್ಯದಶರ್ಿ ಎಸ್.ಸಿ.ಮಹೇಶ ವಿವರ ನೀಡಿದರು. ಶಾಸಕ ರಾಮಣ್ಣ ಲಮಾಣಿ, ಜಿ.ಪಂ.ಮುಖ್ಯ ಯೋಜನಾಧಿಕಾರಿ ಬಿ.ಆರ್. ಪಾಟೀಲ, ತಾಲೂಕಾ ಪಂಚಾಯತ ಕಾರ್ಯ ನಿವರ್ಾಹಕ ಅಧಿಕಾರಿಗಳು. ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.