ಬಸವಕಲ್ಯಾಣದ ಹಡಪದ ಅಪ್ಪಣ್ಣನವರ ಅರಿವಿನ ಗುಹೆಯಲ್ಲಿ ಅನ್ಯ ಶರಣರ ಮೂರ್ತಿ ಸ್ಥಾಪನೆ

ಬಸವಕಲ್ಯಾಣದ ಹಡಪದ ಅಪ್ಪಣ್ಣನವರ ಅರಿವಿನ ಗುಹೆಯಲ್ಲಿ ಅನ್ಯ ಶರಣರ ಮೂರ್ತಿ ಸ್ಥಾಪನೆ Installation of the idol of Anya Sharan in the cave of knowledge of Hadapada Appanna in Basavakalya

ಹಡಪದ ಸಮಾಜದಿಂದ 7ರಂದು ಪ್ರತಿಭಟನೆ ಸರ್ಕಾರಕ್ಕೆ ಮನವಿ ರಾಜ್ಯಾಧ್ಯಕ್ಷ ದೇವು ಹಡಪದ ಕರೆ

ಲಕ್ಷ್ಮೇಶ್ವರ " 05: 12ನೇ ಶತಮಾನದ ಕಲ್ಯಾಣದಲ್ಲಿ ಜಗಜ್ಯೋತಿ ಬಸವಣ್ಣನವರ ಆಪ್ತ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದಂತ ಮಲ್ಲಯುದ್ಧ ಪ್ರವೀಣ ವಚನಕಾರರು ಬಸವಣ್ಣವರ ಅಂತಿಮ ಕಾಲದವರೆಗೂ ಜೊತೆ ಯಾಗಿದ್ದು ಅಪ್ಪನೂ ನೀನೇ ಅಣ್ಣನು ನೀನೆ ಕೂಡಲ ಚನ್ನಬಸವಣ್ಣ ಎಂಬ ಅಂಕಿತನಾಮದತೇ ಶಿವ ಶರಣರ ಹಡಪದ ಅಪ್ಪಣ್ಣ ಅಪ್ಪಣ್ಣ ಎಂದು ಕರೆದು ಅತ್ಯಂತ ಹತ್ತಿರ ಇಟ್ಟುಕೊಂಡು ಪ್ರೀತಿಯಿಂದ ನೋಡಿ ಕೊಂಡ ಜಗಜ್ಯೋತಿ ಬಸವಣ್ಣನವರ ಆಪ್ತ ಅಪ್ಪಣ್ಣ ಶರಣರ ಬಸವಕಲ್ಯಾಣದಲ್ಲಿ ರುವಂತ ಅರಿವಿನ ಗವಿಯನ್ನು ಕಲ್ಯಾಣದ ಪಂಚ ಕಮಿಟಿ ಅರಿವಿನ ಗವಿಯಲ್ಲಿ ಅನ್ಯ ಶರಣರ ಮೂರ್ತಿಯನ್ನು ರಾತ್ರೋ ರಾತ್ರಿ ಕೂಡಿಸಿ ಅಟ್ಟಹಾಸ ಮೆರೆದಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘಟನೆಗಳು ಸಮಾಜದ ಎಲ್ಲ ಮುಖಂಡರೊಂದಿಗೆ ರಾಜ್ಯಾದ್ಯಂತ ಇದೇ 7 ಮಂಗಳವಾರ ಶಿವಶರಣ ಹಡಪದ ಅಪ್ಪಣ್ಣ ರಾಜ್ಯ ಸಂಘ ಮತ್ತು ಜಿಲ್ಲಾ ಸಂಘ ತಾಲೂಕ ಸಂಘ ಮಹಿಳಾ ಸಂಘಟನೆಗಳು ಮುಖಾಂತರ ಆಯಾ ಜಿಲ್ಲಾ ಮತ್ತು ತಾಲೂಕು ಗಳಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ತಾಲೂಕ ದಂಡಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು ಎಲ್ಲ ಸಮಾಜ ಬಾಂಧವರು ಈ ಪ್ರತಿಭಟನೆಯ ಮನವಿಯನ್ನು ಸಲ್ಲಿಸುವ ಮೂಲಕ ಹಡಪದ ಅಪ್ಪಣ್ಣ ಶರಣರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯವನ್ನು ಪಡೆದುಕೊಳ್ಳೋಣ ಎಲ್ಲರೂ ಪಾಲ್ಗೊಂಡು ಸರ್ಕಾರಕ್ಕೆ ಎಚ್ಚರಿಕೆ ನೀಡುವ ಮೂಲಕ ಯಶಸ್ವಿಗೊಳಿಸಬೇಕೆಂದು ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷರಾದ ದೇವು ಹಡಪದ ಅವರು ಸಮಾಜ ಬಾಂಧವರಿಗೆ ಕರೆ ನೀಡಿದ್ದಾರೆ.