ಬೃಹತ್ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ: ಬೃಹತ್ ಮೆರವಣಿಗೆ
Installation of a huge statue of Sangolli Rayanna: A grand procession
ಬೃಹತ್ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ: ಬೃಹತ್ ಮೆರವಣಿಗೆ
ಮುದ್ದೇಬಿಹಾಳ 11: ತಾಲೂಕಾ ಹಾಲುಮತದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿಯ ನೇತೃತ್ವದಲ್ಲಿ ಕೋಲಾಪುರದಲ್ಲಿ ನಿರ್ಮಿಸಿದ ಬೃಹತ್ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪಟ್ಟಣದ ಆಲಮಟ್ಟಿ ರಸ್ತೆ ಮಾರ್ಗದ ಮೂಲಕ ಬಸವೇಶ್ವರ ವೃತ್ತ ಹಾಗೂ ಡಾ. ಬಿ ಆರ್ ಅಂಬೇಡ್ಕರ ವೃತ್ತದಿಂದ ಅಭ್ಯುದಯ ಪಿಯು ಸಾಯನ್ಸ್ ಕಾಲೇಜು ಆವರಣದವರೆಗೆ ಡೊಳ್ಳು ಕುಣಿತ, ವೀರಗಾಸೆ. ವಿವಿಧ ರೂಪಕ ಗೊಂಬೆಗಳ ಸ್ಥಬ್ದ ಚಿತ್ರ, ಕುದುರೆ ಕುಣಿತ ಹಾಗೂ ಮಹಿಳೆಯರಿಂದ ಕುಂಭ ಕಳಶದೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಯಿತು.
ತಾಲೂಕಾ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮಳ ಬಲಗೈ ಭಂಟನಾಗಿ ಕಿತ್ತೂರ ಸಂಸ್ಥಾನವನ್ನು ರಕ್ಷಣೆ ನಿಂತಿರುವ ಸಂಗೋಳ್ಳಿ ರಾಯಣ್ಣನವರು. ಆತ ದೇಶಕ್ಕಾಗಿ ಬ್ರೀಟಿಷರೊಂದಿಗೆ ಹೋರಾಡಿ ತನ್ನ ಪ್ರಾಣವನ್ನೆ ಪಣಕ್ಕಿಟ್ಟ ವೀರ ಪರಾಕ್ರಮಿ, ಕ್ರಾಂತಿ ವೀರ, ಕಿತ್ತೂರಿ ಕಿಡಿಯಾಗಿದ್ದನು.
ಇಂತಹ ಮಹಾ ಸ್ವತಂತ್ರ ಹೋರಾಟಗಾರ ಪ್ರತಿಮೆಯೂ ಬಹುತೇಕ ಎಲ್ಲಡೆ ಅನಾವರಣಗೊಳಿಸಲಾಗಿತ್ತು ಆದರೇ ಮುದ್ದೇಬಿಹಾಳದಲ್ಲಿ ಮಾತ್ರ ಪ್ರತಿಷ್ಠಾಪಿಸಲು ಸಾಧ್ಯವಾಗಿರಲಿಲ್ಲ ಸಧ್ಯ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣವರ ಪ್ರತಿಮೆಯನ್ನು ಮುದ್ದೇಬಿಹಾಳ ಪಟ್ಟಣದ ಹೃದಯ ಭಾಗದಲ್ಲಿ ಪ್ರತಿಷ್ಠಾಪಿಸಬೇಕು ಎಂದು ತಿರ್ಮಾನಿಸಿ ಇಂದು ಪ್ರತಿಮೆಯನ್ನು ಪಟ್ಟಣಕ್ಕೆ ಅದ್ದೂರಿ ಮೆರವಣಿಗೆ ಮೂಲಕ ಶ್ರದ್ಧಾಭಕ್ತಿಯಿಂದ ಗೌರವದಿಂದ ಕರೆತರಲಾಗುತ್ತಿದೆ ಬೆಂಗಳೂರಿನಲ್ಲಿ ಪ್ರತಿಷ್ಠಾಪನೆಗೊಂಡಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರಥಮವಾಗಿದ್ದರೆ ಎರಡನೆಯದ್ದು ಮುದ್ದೇಬಿಹಾಳದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದೆ ರಾಜ್ಯದಲ್ಲಿಯೇ ಎರಡನೆ ಪ್ರತಿಮೆ ಇದಾಗಿದೆ ಎಂದರೆ ತಪ್ಪಾಗಲಾರದು ಅಷ್ಟೋಂದು ಸುಂದರವಾಗಿ ಕೋಲಾಪೂರದ ಶಿಲ್ಪಿಗಳು ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ. ಇದರಿಂದಾಗಿ ಈ ಭಾಗದ ಬಹುತೇಕ ಕುರುಬ ಸಮಾಜ ಸೇರಿದಂತೆ ಇತರೇ ಸಮಾಜ ಬಾಂಧವರ ಕನಸು ಕನಸಾಗುವುತ್ತಿರುವುದು ಸಂತಸ ತಂದಿದೆ.
ಮುಂಬರುವ ಎರಡು ಮೂರು ತಿಂಗಳಲ್ಲಿ ರಾಜ್ಯದ ಹಾಗೂ ಜಿಲ್ಲೆಯ, ಮತಕ್ಷೇತ್ರದ ಎಲ್ಲ ಸಮಾಜ ಬಾಂಧವರು, ವಿವಿಧ ಗಣ್ಯರ ಮುಖಂಡರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರನ್ನು ಕರೆಸಿ ಅವರಿಂದ ಅದ್ದೂರಿಯಿಂದ ಲೋಕಾರೆ್ಣಗೊಳಿಸಲಾಗುವುದು ಎಂದರು.
ಮುಖಂಡರಾದ ನಾಗಪ್ಪ ರೂಢಗಿ, ಬಸಪ್ಪ ಮೇಲಿನಮನಿ, ಸಾಬಣ್ಣ ನಡಿಗೇರಿ, ಸಂತೋಷ ನಾಯ್ಕೋಡಿ, ಅಯ್ಯಾಳಿಂಗ ಮೇಲಿನಮನಿ, ಮಹೇಶ ಪೂಜಾರಿ, ನಿಂಗಪ್ಪ ಬಪ್ಪರಗಿ, ಮಲ್ಲಣ್ಣ ಅಪರಾಧಿ, ಮಲ್ಲಣ್ಣ ಕೆಸರಟ್ಟಿ, ಸಂಗಣ್ಣ ಮೇಲಿನಮನಿ, ಎಸ್ ಜಿ ಹರಿಂದ್ರಾಳ, ಬಿ ಎಸ್ ಮೇಟಿ, ಎನ್ ಎಸ್ ತುರಡಗಿ, ವಾಯ್ ಎಚ್ ವಿಜಯಕರ, ಯಲ್ಲಪ್ಪ ನಾಯಕಮಕ್ಕಳ, ಭಗವಂತ ಕಬಾಡೆ, ಸೋಮಗೌಡ ಪಾಟೀಲ (ನಡಹಳ್ಳಿ) ಬಿ ಕೆ ಬಿರಾದಾರ, ಸಿ ಬಿಅಸ್ಕಿ, ಕಾಮರಾಜ ಬಿರಾದಾರ, ಶ್ರೀಕಾಂತ ಚಲವಾದಿ, ಮೈಬೂಬ ಗೊಳಸಂಗಿ, ಕೆ ಆರ್ ಬಿರಾದಾರ, ಮುತ್ತಣ್ಣ ಹುಗ್ಗಿ, ಮುತ್ತಣ್ಣ ಮುತ್ತಣ್ಣನವರ, ಭೀಮಶೇಪ್ಪ ಮದರಿ, ಎಸ್ ಎನ್ ಲಕ್ಕಣ್ಣವರ, ಸಂಗಮ್ಮ ದೇವರಳ್ಳಿ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 