ಇನ್ನರ್ ವಿಲ್ ಪದಾಧಿಕಾರಿಗಳ ಪದಗ್ರಹಣ: ಅಧ್ಯಕ್ಷರಾಗಿ ಚನ್ನಮ್ಮ ಆರ್ ಪಾಟೀಲ್ ಆಯ್ಕೆ

ಇನ್ನರ್ ವಿಲ್ ಪದಾಧಿಕಾರಿಗಳ ಪದಗ್ರಹಣ: ಅಧ್ಯಕ್ಷರಾಗಿ ಚನ್ನಮ್ಮ ಆರ್ ಪಾಟೀಲ್ ಆಯ್ಕೆ     Inner City office bearers take oath: Channamma R. Patil elected as president

ಇನ್ನರ್ ವಿಲ್ ಪದಾಧಿಕಾರಿಗಳ ಪದಗ್ರಹಣ: ಅಧ್ಯಕ್ಷರಾಗಿ ಚನ್ನಮ್ಮ ಆರ್ ಪಾಟೀಲ್ ಆಯ್ಕೆ     

ಯಲಬುರ್ಗಾ  14 :ಇನ್ನರ್ ವೀಲ್‌ಕ್ಲಬ್ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನ ಸೇವೆ ಮಾಡುತ್ತಿದೆಎಂದುಜಿಲ್ಲಾಅಧ್ಯಕ್ಷರು ಪ್ರತಿಮಾ ಪಟ್ಟಣಶೆಟ್ಟಿ ಹೇಳಿದರು  ಪಟ್ಟಣದಗುರುಭವನದಲ್ಲಿ ಭಾನುವಾರ ನಡೆದ 2025-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,  ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲುಆತ್ಮವಿಶ್ವಾಸವನ್ನುತೋರಬೇಕುಎಂದರು. ನೂತನಅಧ್ಯಕ್ಷರಾಗಿಚನ್ನಮ್ಮಆರ್ ಪಾಟೀಲ್, ಉಪಾಧ್ಯಕ್ಷರುಜ್ಯೋತಿ ಕೆ ಪಲ್ಲೆದ, ಕಾರ್ಯದರ್ಶಿ ಸುನೀತಾಎಮ್ ಪತಂಗರಾಯ್, ಖಜಂಚಿ ಪದ್ಮಾ ಹಿರೇಮಠ , ಋಓ ನೇತ್ರಾ ಬುಸುನೂರಮಠ , ಎಡಿಟರ್ರ್‌ ಮಂಜುಳಾ ಹಾಲಕೇರಿಅವರುಅಧಿಕಾರ ಸ್ವೀಕಾರ ಮಾಡಿದರು.  ಇದೇ ಸಂದರ್ಭದಲ್ಲಿ 2024-25ನೇ ಸಾಲಿನ ಅಧ್ಯಕ್ಷೆಯಾಗಿದ್ದ ಶಕುಂತಲಾದೇವಿ ಮಾಲಿಪಾಟೀಲ್‌ಅವರು ನೂತನಅಧ್ಯಕ್ಷೆರಾಗಿಆಯ್ಕೆಗೊಂಡಚೆನ್ನಮ್ಮಆರ್‌.ಪಾಟೀಲ್‌ಅವರಿಗೆಅಧಿಕಾರ ಹಸ್ತಂತರಿಸಿದರು.  

ಅಧಿಕಾರ ಸ್ವೀಕರಿಸಿ ಬಳಿಕ ಮಾತನಾಡಿದಅವರು ‘ಕ್ಲಬ್ ವತಿಯಿಂದ ಹಿರಿಯರಾದ ಮಾತೋಶ್ರೀ ಸಮನಾದ ಶಕುಂತಲಾದೇವಿ ಮಾಲಿಪಾಟೀಲ್‌ಅಮ್ಮನವರ ಮಾರ್ಗದರ್ಶನದಲ್ಲಿ ಸಾಮಾಜಿಕ ಮತ್ತುಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಮಾಡಲುಆದ್ಯತೆ ನೀಡಲಾಗುವುದು‘ ಎಂದರು.  ನಂತರ ಕಾರ್ಯದರ್ಶಿ ಸುನೀತಾಎಮ್ ಪತಂಗರಾಯ್‌ಅವರು ಮಾತನಾಡಿ, ಇನ್ನರ ವಿಲ್ ಕ್ಲಭಒಂದುಅಂತರರಾಷ್ಟ್ರೀಯ ಮಹಿಳಾ ಸಂಘಟನೆಯ ಶಕ್ತಿಯಾಗಿದೆ.ಹಿರಿಯರ ಮಾರ್ಗದರ್ಶನ ಮೇಲೆ ಹಾಗೂ ಕ್ಲಬ್ನ ನಿಯಮಗಳ ಮೇಲೆ ಸಂಘವನ್ನು ನಡೆಸಲಾಗುವದುಎಂದರು.ಕಾರ್ಯಕ್ರಮವನ್ನು ಅನುಷಾ ಆರ್ ಪಾಟೀಲ್‌ಅವರು ನಿರೂಪಿಸಿ, ವಂದಿಸಿದರು. ಈ ವೇಳೆ ಪಪಂ ಸದಸ್ಯೆಡಾ.ನಂದಿತಾ ಶಿವನಗೌಡ ದಾನರೆಡ್ಡಿ, ಕೊಪ್ಪಳದ ಇನ್ನರ ವಿಲ್ ಕ್ಲಬ್ಬಿನ ಸುಜಾತ ಪಟ್ಟಣಶೆಟ್ಟಿ , ಪತ್ರಿಕಾ ಮಾಧ್ಯಮದ ಮಿತ್ರರೂ, ಜನಪ್ರತಿನಿದಿಗಳು ಹಾಗೂ ಸಂಘದ ಸದಸ್ಯರುಇದ್ದರು.