11ರಂದು ಮಿರಜ್‌ದ ಡಾ. ಸಚಿನ ಆಸ್ಪತ್ರೆಯಲ್ಲಿ ಬಂಜೆತನ ನಿವಾರಣೆ, ಉಪಚಾರ ಶಿಬಿರ
Infertility prevention and treatment camp at Dr. Sachin Hospital, Miraj on 11th
ಕಾಗವಾಡ 08: ಮಹಾರಾಷ್ಟ್ರದ ಮಿರಜ ಪಟ್ಟಣದ ಸಚೀನ ಆಸ್ಪತ್ರೆಯಲ್ಲಿ ರವಿವಾರ ದಿ. 11 ರಂದು ಉಚಿತ ಮಹಿಳೆಯರ ಲೈಂಗಿಕ ರೋಗಗಳು, ಬಂಜೆತನ ನಿವಾರಣೆ ಹಾಗೂ ಉಪಚಾರ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಖ್ಯಾತ ಸ್ತ್ರೀರೋಗ ತಜ್ಞ ಡಾ. ಸಚೀನ ಸುಗಣ್ಣವರ ತಿಳಿಸಿದ್ದಾರೆ.
ಮಿರಜದಲ್ಲಿನ ಸಚೀನ ಆಸ್ಪತ್ರೆಯು ಬಂಜೆತನ ನಿವಾರಣೆ ಹಾಗೂ ಮಹಿಳೆಯರ ಲೈಂಗಿಕ ರೋಗಗಳ ನಿವಾರಣೆ ಕುರಿತು ಕಳೆದ ಹಲವಾರು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರಿ್ಡಸಿ, ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ಕಾರ್ಯವನ್ನು ಕೈಗೊಳ್ಳುತ್ತಿದೆ.
ಈ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ, ಅತ್ಯಾಧುನಿಕ ಯಂತ್ರೋಪಕರಣಗಳು ಜೊತೆಗೆ ಆಸ್ಪತ್ರೆಯು ಹೈಟೆಕ್ ಸೌಲಭ್ಯವನ್ನು ಹೊಂದಿದೆ. ಪ್ರತಿ ತಿಂಗಳು ಮಹಿಳೆಯರ ಎಲ್ಲ ಲೈಂಗಿಕ ರೋಗಗಳ ಮತ್ತು ಬಂಜೆತನ ನಿವಾರಣೆ ಹಾಗೂ ಉಪಚಾರ ಶಿಬಿರವನ್ನು ಉಚಿತವಾಗಿ ಹಮ್ಮಿಕೊಳ್ಳುತ್ತಿದೆ.
ಈಗಾಗಲೇ ಶಿಬಿರದ ಲಾಭವನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಅನೇಕ ರೋಗಿಗಳು ಪಡೆದುಕೊಂಡಿದ್ದಾರೆ. ಲೈಂಗಿಕ ರೋಗಗಳಿಂದ ಬಳಲುವ ಹಾಗೂ ಮಕ್ಕಳಾಗದೇ ಇರುವ ದಂಪತಿಗಳು ರವಿವಾರ ದಿ. 11 ರಂದು ಬೆಳಗ್ಗೆ 9 ರಿಂದ ಸಂಜೆ 4 ರ ವರೆಗೆ ಜರುಗುವ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಉಪಚಾರ ಮತ್ತು ಕಡಿಮೆ ಖರ್ಚಿನಲ್ಲಿ ಶಸ್ತ್ರಕ್ರಿಯೆ ಮಾಡಲಾಗುವುದು. ಇದರ ಲಾಭವನ್ನು ಪಡೆದುಕೊಳ್ಳುವಂತೆ ಡಾ. ಸಚಿನ ಸುಗಣ್ಣವರ ಮತ್ತು ನೇಹಾ ಸುಗಣ್ಣವರ ಕರೆ ನೀಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 