ಕೈಗಾರಿಕೆಗಳ ಹೊಗೆ, ಕಾಳಿನದಿ ಒಡಲು ಸೇರುವ ರಾಸಾಯನಿಕ ಮಿಶ್ರಿತ ನೀರು ಮಾಲಿನ್ಯಗಳಿಂದ ಆರೋಗ್ಯದ ಮೇಲೆ ಪರಿಣಾಮ
Industrial fumes and chemical-laden water pollution that flows into the Kali River have an impact o
ದಾಂಡೇಲಿ 02 : ದಾಂಡೇಲಿಯ ಮಲೀನ ಪರಿಸರವು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಲಿದೆ. ವಾಯು, ನೀರು, ಮಣ್ಣಿನ ಮಾಲಿನ್ಯದಿಂದ ಉಂಟಾಗುವ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಥಳೀಯ ಕೈಗಾರಿಕೆಗಳಿಂದ ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ ಎನ್ನುವ ಕಾರಣಕ್ಕೆ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಸ್ಥಳೀಯರಿಗೆ ಬಂದೊದಗಿದೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿಯ ಪರಿಸರದಲ್ಲಿ ಮಣ್ಣಿನ ಧೂಳು ಒಂದೆಡೆಯಾದರೆ, ಆಕಾಶದಿಂದ ಬೀಳುವ ಹಾರುಬೂದಿ, ಕೈಗಾರಿಕೆಗಳು ಉಗುಳುವ ಹೊಗೆ, ಕಾಳಿನದಿ ಒಡಲು ಸೇರುವ ರಾಸಾಯನಿಕ ಮಿಶ್ರಿತ ನೀರು ಇಂತಹ ಮಾಲಿನ್ಯಗಳಿಂದ ಜನರ ಆರೋಗ್ಯದ ಮೇಲೆ ಉಂಟಾಗುವ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಉಸಿರಾಟದ ಖಾಯಿಲೆಗಳಿಂದ ಜನ ಬಳಲುತ್ತಿದ್ದಾರೆ.
ವಾಯು ಮಾಲಿನ್ಯದಿಂದ ಅಸ್ತಮಾ, ಬ್ರಾಂಕೈಟಿಸ್, ಶ್ವಾಸಕೋಶದ ಸೋಂಕುಗಳು ಹೆಚ್ಚಾಗುತ್ತಿದೆ. ದಿನನಿತ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ರೋಗಿಗಳು ಸಾಲುಗಟ್ಟಿ ನಿಂತಿರುತ್ತಾರೆ. ಇದು ಒಂದೆಡೆಯಾದರೆ, ನೀರಿನ ಮೂಲಕ ಹರಡುವ ರೋಗಗಳು ಹೆಚ್ಚುತ್ತಿದೆ. ಗ್ರಾಮಸ್ಥರು, ನಗರವಾಸಿಗಳಿಗೆ ಅಜೀರ್ಣ, ಟೈಪಾಯಿಡ್, ಜ್ವರದ ಸಮಸ್ಯೆಗಳು ಉಂಟಾಗುತ್ತಿದೆ. ಚರ್ಮ ಹಾಗೂ ಕಣ್ಣು ಸಮಸ್ಯೆಗಳು ಹೆಚ್ಚಿವೆ. ಕಲುಷಿತ ವಾತಾವರಣದಿಂದ ಅಲರ್ಜಿ, ಚರ್ಮದ ತುರಿಕೆ, ಕಣ್ಣು ಊರಿಯುತ ಸಾಮಾನ್ಯವಾಗಿದೆ. ಇದರಿಂದ ದೀರ್ಘಕಾಲದ ಪರಿಣಾಮಗಳು ರೋಗಿಗಳಲ್ಲಿ ಗೋಚರಿಸುತ್ತಿದ್ದು, ಹೃದಯ ಸಂಬಂದಿತ ಖಾಯಿಲೆಗಳು, ಕ್ಯಾನ್ಸರ್ ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಲಿದೆ. ಪರಿಸರವನ್ನು ರಕ್ಷಿಸುವದು ನಮ್ಮ ಪ್ರತಿಯೊಬ್ಬರ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜನರಲ್ಲಿ ಜಾಗ್ರತಿ ಮೂಡಿಸಿ ಪರಿಸರ ಮಾಲೀನ್ಯ ತಡೆಗಟ್ಟುವ ಮೂಲಕ ರೋಗ ರುಜೀನಗಳಿಗೆ ತಡೆ ಹಾಕಬೇಕು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 