ಲಂಡನ್, ಆಗಸ್ಟ್ 3 ಭಾರತೀಯ ಮೂಲದ ಭಾಷಾ ಮುಖರ್ಜಿ (23) ಮಿಸ್ ಇಂಗ್ಲೆಂಡ್ ಆಗಿ ಆಯ್ಕೆಗೊಂಡಿದ್ದಾರೆ. ಗುರುವಾರ ಸಂಜೆ ಫಲಿತಾಂಶ ಪ್ರಕಟಗೊಂಡ ನಂತರ ಮಿಸ್ ಇಂಗ್ಲೇಡ್ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ವಿಶ್ವ ಸುಂದರಿ ಸ್ಪರ್ದೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಜನಿಸಿದ್ದ ಭಾಷಾ ಮುಖರ್ಜಿ, ತಮ್ಮ ಒಂಬತ್ತನೆಯ ವಯಸ್ಸಿನಲ್ಲಿ ಅಪ್ಪ ಅಮ್ಮನ ಜೊತೆ ಬ್ರಿಟನ್ ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ ಅವರು ಪ್ರಸ್ತುತ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಸೌಂದರ್ಯ ಸ್ಪರ್ದೆಯ ಭಾಗವಾಗಿಮಾತನಾಡಿದ, ಆಕೆ, ನಾವು ಬಹಳ ಮಂದಿ ಗಾಳಿಯಲ್ಲಿ ವಿಹರಿಸುತ್ತಾ ಏನೇನೊ ಕನಸು ಕಂಡು ಯಾರನ್ನೂ ಲೆಕ್ಕಕ್ಕೆ ಇಟ್ಟುಕೊಳ್ಳಬಾರದು ಎಂದುಕೊಳ್ಳುತ್ತೇವೆ. ಆದರೆ, ಸಮಯ ಬಂದಾಗ, ವಿಶಿಷ್ಟ ಸಂದರ್ಭಗಳಲ್ಲಿ ನಾವು ಎಲ್ಲರಿಗೂ ಬೆಂಬಲವಾಗಿ ನಿಂತುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿದ್ದಾಗ ಮಾಡೆಲಿಂಗ್ ಆಯ್ಕೆ ಮಾಡಿಕೊಂಡೆ. ಶಿಕ್ಷಣ ಮತ್ತು ವೃತ್ತಿಜೀವನದ ನಡುವೆ ಸಮತೋಲನ ಸಾಧಿಸಲಿದ್ದೇನೆ ಎಂಬ ನಂಬಿಕೆ ಮೂಡಿದ ನಂತರ ಧೈರ್ಯದಿಂದ ಕಾಲು ಮುಂದಿಟ್ಟೆ ಎಂದು ಹೇಳಿದ್ದಾರೆ. ಭವಿಷ್ಯ ಸರ್ಜನ್ ಆಗಿರುವ ಮುಖರ್ಜಿ ಐದು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾಳೆ. ಹಲವು ಐಕ್ಯೂ ಪರೀಕ್ಷೆಗಳಲ್ಲೂ ಜಯಗಳಿಸಿ ಜಿನಿಯಸ್ ಎಂಬ ಪ್ರಶಂಸೆಗೂ ಪಾತ್ರರಾಗಿದ್ದಾರೆ.